ಇದೀಗ ಎರಡನೇ ಪಿ.ಯು.ಸಿ.ಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗಿ ಬಿ.ಕಾಂ. ಪದವಿಗೆ ಸೇರುತ್ತಿರುವ ರವಿಯನ್ನು ನೀನೇಕೆ ಬಿ.ಕಾಂ. ಆರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಬಂದ ಉತ್ತರ: ‘ನಾನು ಗಣಿತದಲ್ಲಿ ಯಾವಾಗಲೂ ಹಿಂದೆ. ಆದ್ದರಿಂದ ಇದೇ ಸರಿಯಾದದ್ದೆಂದು ನಿರ್ಧರಿಸಿದೆ’.
ಇಂತಹ ತಪ್ಪುಗಳನ್ನೇ, ಅನೇಕ ವಿಧ್ಯಾರ್ಥಿಗಳು ಮಾಡುತ್ತಿರುವುದು ದೌರ್ಭಾಗ್ಯದ ಸಂಗತಿ. ಆರಿಸಿಕೊಳ್ಳುವ ಕೋರ್ಸ್, ಅಭಿರುಚಿ ಮತ್ತು ಸಾಮಥ್ರ್ಯವನ್ನು ಅವಲಂಬಿಸಿರಬೇಕು; ದೌರ್ಬಲ್ಯಗಳಿಂದ ದೂರ ಸರಿಯುವುದರಲ್ಲಲ್ಲ. ಮುಖ್ಯವಾಗಿ, ನೀವು ಆರಿಸುವ ಕೋರ್ಸಿಗೆ ಸಂಬಂಧಿಸಿದ ವೃತ್ತಿಯ ಬಗ್ಗೆ-ಮಾರುಕಟ್ಟೆಯ ಬೇಡಿಕೆ, ತಂತ್ರಜ್ಞಾನದ ಬದಲಾವಣೆಗಳ ಸಾಧ್ಯತೆ, ಸವಾಲುಗಳು, ಉದ್ಯೋಗಾವಕಾಶಗಳು, ಸಮಗ್ರವಾದ ಮಾಹಿತಿಯಿರಬೇಕು. ಇಲ್ಲದಿದ್ದರೆ ಜೀವನಪರ್ಯಂತ ನಿಮಗಿಷ್ಟವಿಲ್ಲದ ಉದ್ಯೋಗದಲ್ಲಿ ಒದ್ದಾಡುವಂತಾಗಬಹುದು. ಪ್ರಸಿದ್ಧ ಲೇಖಕ ಮತ್ತು ಉಪನ್ಯಾಸಕಾರ ಡೇಲ್ ಕಾರ್ನೆಗಿ ಹೇಳಿರುವಂತೆ, “ನೀವು ಮಾಡುವ ಕೆಲಸವನ್ನು ಮನಸಾರ ಇಚ್ಛಿಸದೆ ಇದ್ದರೆ, ನೀವು ನಿಜವಾದ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ”.
- ಸಾಮಥ್ರ್ಯ, ಆಸಕ್ತಿ ಮತ್ತು ಅಭಿರುಚಿಯನ್ನು ಅರಿಯಿರಿ: ನಿಮಗೆ ಯಾವ ವಿಷಯದಲ್ಲಿ ಸಾಮಥ್ರ್ಯವಿದೆ? ನಿಮ್ಮ ಆಸಕ್ತಿ ಮತ್ತು ಅಭಿರುಚಿಗಳೇನು? ಉದಾಹರಣೆಗೆ, ನೀವು ತಂತ್ರಜ್ಞಾನದಲ್ಲಿ ಪ್ರವೀಣರೇ? ಗಣಿತದಲ್ಲಿ ಚತುರರೇ? ಸಾಹಿತ್ಯ, ಸಂಗೀತದಲ್ಲಿ ನಿಮಗೆ ಅಸಾಧಾರಣ ಅಭಿರುಚಿಯಿದೆಯೇ? ಈ ರೀತಿ ನಿಮ್ಮನ್ನು ಅರಿತುಕೊಳ್ಳಲು ಅಭಿರುಚಿಯನ್ನು ಗುರುತಿಸುವ ಟೆಸ್ಟ್‍ಗಳ ಮೊರೆ ಹೋಗಿ.
- ವೃತ್ತಿಜೀವನದ ಬಗ್ಗೆ ಸಂಶೋಧಿಸಿ: ಆಸಕ್ತಿ, ಅಭಿರುಚಿಯನ್ನು ಅರಿತ ನಂತರ ಆ ಬಗ್ಗೆ ತೀರ್ವವಾದ ಸಂಶೋಧನೆಯನ್ನು ಮಾಡಿ, ವೃತ್ತಿಯನ್ನು ಆರಿಸಿಕೊಳ್ಳುವ ಸಾಧ್ಯತೆಗಳಿವೆಯೇ ಎಂದು ಪರಿಶೀಲಿಸಿ. ನಿಮಗೆ ಕ್ರಿಕೆಟ್ ಅಥವಾ ಸಂಗೀತದಲ್ಲಿ ಆಸಕ್ತಿಯಿರ¨Àಹುದು; ಆದರೆ ಈ ಹವ್ಯಾಸವನ್ನು ವೃತ್ತಿಯನ್ನಾಗಿ ಪರಿವರ್ತಿಸುವ ಶಕ್ತಿ, ನೈಪುಣ್ಯತೆ ನಿಮ್ಮಲ್ಲಿದೆಯೇ? ಇದು ಜೀವನೋಪಾಯದ ವಿಚಾರ; 30-40 ವರ್ಷಗಳಷ್ಟು ಕಾಲ ನೀವು ಈ ವೃತ್ತಿಯನ್ನೇ ಅವಲಂಬಿಸಿ, ಜೀವನದಲ್ಲಿ ಏಳಿಗೆಯನ್ನು ಸಾಧಿಸಬಲ್ಲಿರಾ?ಬದುಕಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಬಲ್ಲಿರಾ?ಉದಾಹರಣೆಗೆ, ಇಂದು ಮಾಹಿತಿ ತಂತ್ರಜ್ಞಾನಕ್ಕೆ ಬೇಡಿಕೆ ಇದೆ; ಆದರೆ
ನಿಮ್ಮ ಶಿಕ್ಷಣ ಮುಗಿಯುವ ವೇಳೆಗೆ, ಇದೇ ಬೇಡಿಕೆ ಇರುತ್ತದೆಯೆಂದು ಖಚಿತವಾಗಬೇಕು. ಈ ಬೇಡಿಕೆ ನೀವು ಬಯಸುವ ಪ್ರದೇಶ ಅಥವಾ ದೇಶದಲ್ಲಿದೆಯೇ ಎಂದು ಅರಿಯಿರಿ. ಆಗಲೇ ಶಿಕ್ಷಣ ಮತ್ತು ವೃತ್ತಿಯ ಬಗ್ಗೆ ನಿರ್ಧರಿಸಲು ಸಾಧ್ಯ. - ಜೀವನದ ಧ್ಯೇಯಗಳನ್ನು ನಿಶ್ಚಯಿಸಿ: ವೃತ್ತಿ ಮತು ಖಾಸಗೀ ಜೀವನದ ಧ್ಯೇಯಗಳೇನು? ಶಿಕ್ಷಣದ ನಂತರದ ಬದುಕಿನ ನಿಮ್ಮ ಕನಸುಗಳೇನು? ಬದುಕಿಗೆ ಅತಿ ಮುಖ್ಯವಾದ, ಈ ಪ್ರಶ್ನೆಗಳ ಬಗ್ಗೆ ಚಿಂತಿಸಿ, ಉತ್ತರಗಳನ್ನು ಕಂಡುಕೊಳ್ಳಿ. ನಿಮ್ಮ ಕನಸುಗಳನ್ನು ನನಸಾಗಿಸಲು, ಸೂಕ್ತವಾದ ವೃತ್ತಿಯ ಬಗ್ಗೆ ನಿಶ್ಚಯಿಸಿ. ಯಶಸ್ಸಿನ ಹಾದಿಯಲ್ಲಿ, ವೈಯಕ್ತಿಕ ಬದುಕಿನ ಕನಸುಗಳೇ ನಿಮಗೆ ಪ್ರೇರಣೆಯಾಗಲಿ.
- ಕೋರ್ಸ್ ಮತ್ತು ಕಾಲೇಜುಗಳ ಅದ್ಯತೆಗಳನ್ನು ಪರಿಗಣಿಸಿ: ಮಾರ್ಗದರ್ಶಕರು ಮತ್ತು ಆಪ್ತರೊಡನೆ ಸಮಾಲೋಚಿಸಿ ಸೂಕ್ತವಾದ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಮಾಡಿ. ನಿಮ್ಮ ಆದ್ಯತೆಗಳನ್ನು ನಿಶ್ಚಯಿಸುವ ಮುನ್ನ ಕಾಲೇಜಿನ ಸಂಪನ್ಮೂಲಗಳು, ಅಧ್ಯಾಪಕ ವರ್ಗ, ನೇಮಕಾತಿ ಪ್ಲೇಸ್‍ಮೆಂಟ್ ಮಾಹಿತಿ, ಗ್ರಂಥಾಲಯ, ಶುಲ್ಕಗಳು, ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ. ನಿಮ್ಮ ಆಯ್ಕೆಗಳ ಹಿಂದೆ ಮಾರ್ಗದರ್ಶಕರ ಬೆಂಬಲ ಮತ್ತು ವಿಶ್ಲೇಷಣೆಯ ಸಮರ್ಥನೆಯಿರಬೇಕು.
- ವಿದೇಶಿ ಶಿಕ್ಷಣ: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅಭಿಲಾಶೆಯಿದ್ದರೆ, ಪ್ರವೇಶದ ನಿಯಮಾವಳಿಗಳು, ಪ್ರವೇಶ ಪರೀಕ್ಷೆಗಳು, ವೀಸ ನಿಬಂಧನೆಗಳು, ಕೋರ್ಸ್ ಶುಲ್ಕಗಳು, ಹಾಸ್ಟೆಲ್ ಖರ್ಚು, ಇತ್ಯಾದಿಗಳ ಬಗ್ಗೆ ಪೂರ್ಣಶೋಧನೆ ಮಾಡಿಯೇ ನಿರ್ಧರಿಸಿ.
ಜೀವನದ ಆದ್ಯತೆಗಳಲ್ಲಿ ಸಮತೋಲನವಿರಲಿ
ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದ ನಂತರವೂ, ವೃತ್ತಿಯ ಮೇಲಿನ ಆದ್ಯತೆ ನಿರಂತರವಾಗಿರಲಿ. ಖಾಸಗೀ ಜೀವನ ಸುಖಕರವಾಗಿರಬೇಕಾದರೆ, ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು; ಆಗಲೇ ಜೀವನದ ಎಲ್ಲಾ ಸಂಪತ್ತು, ತೃಪ್ತಿ ನಿಮ್ಮದಾಗಬಲ್ಲದು.
ಶಿಕ್ಷಣದ ಪ್ರಾಮುಖ್ಯತೆಯನ್ನು ವಿಧ್ಯಾರ್ಥಿಗಳೂ, ಹೆತ್ತವರೂ ಅರಿತು, ಮುಕ್ತ ಮನಸ್ಸಿನಿಂದ ಚರ್ಚಿಸಿ, ವೃತ್ತಿಜೀವನದ ಆಯ್ಕೆಯನ್ನು ನಿರ್ಧರಿಸಬೇಕು.
ಸಾಧನೆಯ ಮೆಟ್ಟಿಲುಗಳನ್ನು ಏರಬೇಕಾದರೆ, ಮುಂದಿನ ಬದುಕು ಸಂಪಧ್ಭರಿತವಾಗಿ, ಸಾರ್ಥಕವಾಗಬೇಕಾದರೆ, ಶಿಕ್ಷಣದ ರೂಪುರೇಷೆಯನ್ನು ನೀವೇ ಯೋಜಿಸಿ; ನಿಮ್ಮ ಉಜ್ವಲ ಭವಿಷ್ಯದ ರೂವಾರಿ ನೀವೇ.
ಸಂಪ್ರದಾಯಿಕ ಕೋರ್ಸ್‍ಗಳು
- ಡಿಪ್ಲೊಮ, ಎಂಜಿನಿಯರಿಂಗ್
- ಮೆಡಿಕಲ್, ಆಯುರ್ವೇದ, ಡೆಂಟಲ್, ಫಾರ್ಮ, ನರ್ಸಿಂಗ್, ಇತ್ಯಾದಿ
- ಬಿ.ಎಸ್.ಸಿ; ಬಿ.ಕಾಂ; ಬಿ.ಎ. ಬಿ.ಬಿ.ಎಮ್; ಬಿ.ಸಿ.ಎ; ಎಂಬಿ.ಎ; ಎಂ.ಸಿ.ಎ; ಎಂ.ಎಸ್.ಸಿ; ಇತ್ಯಾದಿ
* 4/5 ವರ್ಷಗಳ ಏಕೀಕೃತ ಸ್ನಾತಕೋತ್ತರ ಕೋರ್ಸ್‍ಗಳು ಲಭ್ಯ - ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಶ್ಮೆ, ಮೀನುಗಾರಿಕೆ ಇತ್ಯಾದಿ
- ಸಾಹಿತ್ಯ, ಸಂಶೋಧನೆ ಇತ್ಯಾದಿ
- ಕಾನೂನು, ಸಿ.ಎ; ಎ.ಸಿ.ಎಸ್; ಗೃಹ ವಿಜ್ಞಾನ, ಇತ್ಯಾದಿ
ಅಸಂಪ್ರದಾಯಿಕ ಕೋರ್ಸ್‍ಗಳು
- ನಟನೆ, ನಿರ್ದೇಶನ, ಛಾಯಾಗ್ರಹಣ, ಇತ್ಯಾದಿ
- ಪತ್ರಿಕೋಧ್ಯಮ, ಮಾಧ್ಯಮ, ಇವೆಂಟ್ಸ್ ಮ್ಯಾನೇಜ್‍ಮೆಂಟ್ ಇತ್ಯಾದಿ
- ಸಂಗೀತ, ನಾಟಕ, ನಾಟ್ಯ, ವಾದ್ಯ, ಸಂಯೋಜನೆ, ಸೌಂಡ್ ರೆಕಾರ್ಡಿಂಗ್,
- ಫ್ಯಾಶನ್ ಡಿಸೈನಿಂಗ್, ಫ್ಯಾಶನ್ ಫೋಟೋಗ್ರಫಿ; ಅನಿಮೇಶನ್,
- RJ/VJ/DJ
- ಆಹಾರ ಸಂಸ್ಕರಣೆ, ಕೇಟರಿಂಗ್, ಹೋಟೆಲ್ ಮ್ಯಾನೇಜ್‍ಮೆಂಟ್ ಇತ್ಯಾದಿ
- ಕ್ರೀಡೆ, ಆರೋಗ್ಯ, ಫಿಟ್‍ನೆಸ್, ಸೌಂದರ್ಯ, ವ್ಯಕ್ತಿತ್ವ ವಿಕಸನ ಇತ್ಯಾದಿ