ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ [Communication] ಕೌಶಲದಿಂದ ಸಾಧಿಸುವ, ಅಂತರ್ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ.
ಉದ್ಯೋಗ ಕ್ಷೇತ್ರದ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು: ನಾವು ಏನು ಮಾಡುತ್ತೇವೆ, ಹೇಗೆ ಕಾಣಿಸಿಕೊಳ್ಳುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಹೇಗೆ ಮಾತನಾಡುತ್ತೇವೆ. ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು, ಉದ್ದೇಶವನ್ನು ಸಾಧಿಸುವಂತಿರಬೇಕಾದರೆ, ಇತರರನ್ನು ಪ್ರೇರೇಪಿಸುವ, ಮನವೊಪ್ಪಿಸುವ ಅಥವಾ ಒತ್ತಾಯಿಸುವ ಕೌಶಲ ನಮ್ಮಲ್ಲಿರಬೇಕು. ಏಕೆಂದರೆ, ನಮ್ಮ ಮಾತುಗಳು ಕೇವಲ ಅರ್ಥವಾದರೆ ಮಾತ್ರ ಸಾಕಾಗದು; ಅದು ಕೇಳುಗರ ಹೃದಯವನ್ನೂ ಮುಟ್ಟಬೇಕು.
ಪರಿಣಾಮಕಾರಿ ಸಂವಹನ
- ಸಕ್ರಿಯವಾಗಿ ಆಲಿಸುವುದು: ಕೆಲವೊಮ್ಮೆ, ಮೇಲಧಿಕಾರಿಗಳು, ಸಹೋದ್ಯೋಗಿಗಳು ಮಾತನಾಡುತ್ತಿರುವಾಗ ಮನಸ್ಸಿನ ನಿಯಂತ್ರಣ ತಪ್ಪಿ, ನಮ್ಮ ಉಪಸ್ಥಿತಿ ಕೇವಲ ದೈಹಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ಷತೆಗಳ ಅರಿವಾಗದೆ, ಸಂದೇಶದ ಸಂಪೂರ್ಣ ಅರ್ಥವಾಗುವುದಿಲ್ಲ. ಬೇರೆಯವರೊಂದಿಗೆ ವ್ಯವಹರಿಸುವಾಗ, ಅವರ ಹಾವಭಾವಗಳನ್ನು ಗಮನಿಸಿ, ಪರಸ್ಪರ ದೃಷ್ಟಿ ಸಂಪರ್ಕದಿಂದ, ಮಾತುಗಳನ್ನು ಸಕ್ರಿಯವಾಗಿ ಆಲಿಸಬೇಕು. ಸಮಯ, ಸಂದರ್ಭಕ್ಕೆ ಅನುಗುಣವಾಗಿ ‘ಹೌದು, ಈ ಕೆಲಸವನ್ನು ಹೇಗೆ ಮಾಡಬೇಕು; ನೀವು ಹೇಳಿದಂತೆ ಮಾಡುತ್ತೇನೆ, ಇತ್ಯಾದಿ’ ಪ್ರತಿಕ್ರಿಯೆಗಳಿಂದ ಸ್ಪಂದಿಸಬೇಕು.
- ದೇಹಭಾಷೆ [Body Langugage]: ಮಾತಿಗಿಂತ, ದೇಹಭಾಷೆಯೇ ಮುಖ್ಯ. ಉದಾಹರಣೆಗೆ, ನಾವು ಬೇರೆಯವರನ್ನು ಅಭಿನಂದಿಸುವಾಗ, ಮುಖದ ಭಾವ, ಕಣ್ಣುಸಂಪರ್ಕ, ನಿಲುವು, ಹಸ್ತಲಾಘವ, ಧ್ವನಿ ಮಟ್ಟ, ಶೈಲಿ, ಧಾಟಿ ಇವೆಲ್ಲವೂ ಆಡುವ ಮಾತಿಗಿಂತಲೂ ಪ್ರಮುಖ. ಅಂದರೆ, ನಮ್ಮ ಮಾತಿಗೆ, ದೇಹಭಾಷೆ ಪೂರಕವಾಗಿದ್ದಲ್ಲಿ ಮಾತ್ರ ಸಂವಹನ ಪರಿಣಾಮಕಾರಿ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ; ಅವೆಲ್ಲವನ್ನು ಮೀರುವ ಭಾಷೆಯೇ ಮುಗುಳುನಗೆ. ಆದ್ದರಿಂದ, ಈ ಭಾಷೆಯನ್ನು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಬಳಸಿ. ದೇಹದ ನಿಲುವು ಮತ್ತು ಚಲನೆ, ನಿಮ್ಮೊಳಗಿನ ಆಲೋಚನೆಗಳಿಗೆ ಪೂರಕವಾಗಿರಲಿ.
- ಮಾತುಗಾರಿಕೆಯ ಕೌಶಲ: ಇಂದಿನ ಸ್ಪರ್ದಾತ್ಮಕ ಜೀವನದಲ್ಲಿ ಮಾತುಗಾರಿಕೆಯೇ ಬಂಡವಾಳ. ಉದಾಹರಣೆಗಳೆಂದರೆ, ಆಫೀಸಿನ ಮೀಟಿಂಗ್ಸ್, ದೂರವಾಣಿ ಸಂಪರ್ಕ, ಚರ್ಚೆ, ಗ್ರಾಹಕರೊಡನೆಯ ಸಂವಾದ ಇತ್ಯಾದಿಗಳಲ್ಲಿ, ನಿಮ್ಮ ಅಭಿಪ್ರಾಯವನ್ನು ನೇರವಾಗಿ ಸಮಯೋಚಿತ ಜಾಣ್ಮೆಯಿಂದ ತಿಳಿಸಿ. ಹಾಗೆಯೇ, ಇತರರು ತಿಳಿಸುವ ಅಂಶಗಳು ಅರ್ಥವಾಗದಿದ್ದಾಗ, ಪ್ರಶ್ನೆಗಳನ್ನು ಕೇಳಬೇಕು. ಸಹೋದ್ಯೋಗಿಗಳು ಅಪಹಾಸ್ಯ ಮಾಡುವರೆಂಬ ಭಯದಿಂದ ಅಥವಾ ಸಂಕೋಚದಿಂದ ಪ್ರಶ್ನೆಗಳನ್ನು ಕೇಳಲು ಅನುಮಾನಿಸದಿರಿ. ಪ್ರಶ್ನೆಗಳನ್ನು ಕೇಳುವುದೂ ಒಂದು ಕಲೆ; ದುರ್ಬಲ ಧ್ವನಿಯಿಂದಲೋ ಅಥವಾ ವ್ಯಂಗ್ಯವಾಗಿಯೋ, ಮೇಲರಿಮೆಯಿಂದಲೋ ಅಥವಾ ಕೀಳರಿಮೆಯಿಂದಲೋ ಪ್ರಶ್ನೆಗಳನ್ನು ಕೇಳಬಾರದು.
- ಬರವಣಿಗೆಯ [ಲಿಖಿತ] ಕೌಶಲ: ವ್ಯಾವಹಾರಿಕ ಜಗತ್ತಿನಲ್ಲಿ, ಮೊದಲಿನಷ್ಟು ಬರವಣಿಗೆಯಿಲ್ಲದಿದ್ದರೂ, ಉದ್ದೇಶ, ಸ್ವರೂಪಗಳು ಬದಲಾಗಿವೆ. ಇಂದಿನ ವೇಗದ ಯುಗದಲ್ಲಿ, ಇmಚಿiಟ, SಒS, ಬಳಕೆ ಹೆಚ್ಚಾಗಿರುವುದರಿಂದ, ಕನಿಷ್ಠ ಪದಗಳಲ್ಲಿ, ಸ್ಪಷ್ಟವಾದ ಸಂದೇಶವನ್ನು ರಚಿಸಬೇಕಾಗುತ್ತದೆ. ವೃತ್ತಿಯಲ್ಲಿ ಮೇಲಧಿಕಾರಿಗಳು, ಸಹೋದ್ಯೋಗಿಗಳು, ಗ್ರಾಹಕರು ಮತ್ತಿ ಇತರರಿಗೆ ಬರವಣಿಗೆಯಲ್ಲಿ ಸಂದೇಶಗಳನ್ನು, ವರದಿಗಳನ್ನು ಕಳುಹಿಸಬೇಕಾಗುತ್ತದೆ. ನಾವು ಕಳುಹಿಸುವ ಸಂದೇಶ, ಸ್ವೀಕರಿಸುವವರ ಗಮನ ಸೆಳೆದು, ಆಸಕ್ತಿ ಮೂಡಿಸಿ, ವಿಷಯಲಾಲಸೆಯೊಂದಿಗೆ ಕ್ರಮ ತೆಗೆದುಕೊಳ್ಳುವಂತಿರಬೇಕು. ಹಾಗಾಗಿ, ಬರವಣಿಗೆಯ ಮುನ್ನ, ಮಾಹಿತಿ ಸಂಗ್ರಹಣೆ, ಸಂಯೋಜನೆ, ವಿಶ್ಲೇಷಣೆ ಮತ್ತು ನಿರೂಪಣೆಯ ಬಗ್ಗೆ ಚಿಂತಿಸಿ, ಮಾಧ್ಯಮ ಮತ್ತು ಸಂದರ್ಭಕ್ಕೆ ತಕ್ಕಂತೆ ಆಶಯ, ಧಾಟಿ, ಭಾಷೆ ಮತ್ತು ಪದಗಳನ್ನು ಬಳಸಬೇಕು.
ಪರಿಣಾಮಕಾರಿ ಸಂವಹನವೇ ಯಶಸ್ಸಿಗೆ ಮೂಲ
ಮಾನವ ಸಂಪಲ್ಮೂನ ಪರಿಣಿತರೂ ಮತ್ತು ಅ.ಇ.ಔ.ಗಳ ಅಭಿಪ್ರಾಯದಂತೆ ಉದ್ಯೋಗಿಗಳಲ್ಲಿರಬೇಕಾದ ಅತ್ಯಂತ ಪ್ರಮುಖ ಕೌಶಲವೆಂದರೆ, ಸಂವಹನ. ನಿಮ್ಮಲಿರುವ ಶೈಕ್ಷಣಿಕ ಮತ್ತು ತಾಂತ್ರಿಕ ಜ್ಞಾನ, ಮತ್ತಿತರ ಕೌಶಲವನ್ನು ಮೇಲಧಿಕಾರಿಗಳಿಗೂ, ಸಹೋದ್ಯೋಗಿಗಳಿಗೂ, ಪರಸ್ಪರ ಪ್ರತಿಕ್ರಿಯಿಸುವಾಗ, ಸಂವಹನ ಕೌಶಲ ಅವಶ್ಯ. ನಿಮ್ಮ ಕಾರ್ಯಕ್ಷೇತ್ರ- Iಖಿ, ಮಾರ್ಕೆಟಿಂಗ್, ಅಕೌಂಟ್ಸ್, ಮಾನವ ಸಂಪಲ್ಮೂನ, ಉತ್ಪಾದನೆ-ಯಾವುದೇ ಇರಲಿ, ಪರಿಣಾಮಕಾರಿ ಸಂವಹನವಿಲ್ಲದೆ ಕಾರ್ಯಕ್ಷಮತೆಗೆ ಧಕ್ಕೆಯಾಗಿ, ನಿಮ್ಮಿಂದ ನಿರೀಕ್ಷಿತ ಫಲಿತಾಂಶ ಹೊರಹೊಮ್ಮುವುದಿಲ್ಲ.
ಎಲ್ಲರೂ ಜನ್ಮಸಿದ್ಧ ವಾಗ್ಮಿಗಳಾಗಿರುವುದಿಲ್ಲವೆನ್ನುವುದು ನಿಜವಾದರೂ, ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಸಂವಹನ ಕಲೆಯ ಪರಿಪೂರ್ಣತೆ ಸಾಧ್ಯವಾಗುತ್ತದೆ. ನಿಮ್ಮ ವ್ಯಕ್ತಿತ್ವಕ್ಕೊಂದು ಮೆರುಗು ನೀಡುವ, ಸಂವಹನ ಕೌಶಲವನ್ನು ಬೆಳೆಸಿಕೊಂಡರೆ, ನಿಮ್ಮ ಕಾರ್ಯಕ್ಷಮತೆ ವರ್ಧಿಸಿ, ಸಾಧನೆಯ ಶಿಖರಕ್ಕೇರಿ, ಜೀವನದ ಯಶಸ್ಸು ನಿಮ್ಮದಾಗುತ್ತದೆ.
ಪರಿಣಾಮಕಾರಿ ಸಂವಹನವೇ
- ನೇರ ದೃಷ್ಟಿ ಸಂಪರ್ಕದಿಂದ, ಆಲಿಸಿ; ಅದೇ ರೀತಿ ಪ್ರತಿಕ್ರಿಯಿಸಿ.
- ಮಾತಿಗೂ ದೇಹಭಾಷೆಗೂ ಹೊಂದಾಣಿಕೆಯಿರಲಿ.
- ಮೇಲರಿಮೆ ಅಥವಾ ಕೀಳರಿಮೆಯಿಲ್ಲದೆ, ಬೇರೆಯವರ ಭಾವನೆಗಳಿಗ ೆ ಪ್ರತಿಸ್ಪಂದಿಸಿ.
- ನಿಮ್ಮ ಮಾತು ಸ್ಪಷ್ಟವಾಗಿರಲಿ; ಪುನರುಚ್ಚಾರವನ್ನು ಅವಶ್ಯಕತೆಯಿದ್ದಲ್ ಲಿ ಉಪಯೋಗಿಸಿ.
- ನಿಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರದೆ, ಮನದಟ್ಟು ಮಾಡುವ ಕೌಶಲವನ್ನು ಬೆಳೆಸಿಕೊಳ್ಳಿ.
- ಟೀಕೆಗಳನ್ನು ಸಮಾಧಾನದಿಂದ ಸಕಾರಾತ್ಮಕವಾಗಿ ಸ್ವೀಕರಿಸಿ ಅದರಲ್ಲಿರಬಹುದಾದ ಸತ್ಯಾಂಶದ ಬಗ್ಗೆ ಯೋಚಿಸಿ.