Q1. ನನ್ನ ಮಗ 12ನೇ ತರಗತಿ (ಸಿಬಿಎಸ್‌ಇ) ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮರೀನ್ ಎಂಜಿನಿಯರಿಂಗ್ ಅಧ್ಯಯನಕ್ಕೆ ಉತ್ಸುಕನಾಗಿದ್ದಾನೆ. ಪೊಷಕರಿಗಿರುವ ಸಹಜ ಆತಂಕದಿಂದ ನಾವು ಹೊರತಾಗಿಲ್ಲ. ಇದರ ಬಗ್ಗೆ ಸ್ವಲ್ಪ ಮಾಹಿತಿ ದೊರೆಯಬಹುದೇ?
ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಆತಂಕ ಇವೆಲ್ಲವೂ ಸಾಮಾನ್ಯ. ಮರೀನ್ ಇಂಜಿನಿಯರಿಂಗ್‌ನಲ್ಲಿ ಇನ್ನಿತರ ಎಂಜಿನಿಯರಿಂಗ್ ವಿಜ್ಞಾನಗಳಾದ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್, ಕಂಪ್ಯೂಟರ್ ಸೈನ್ಸ್, ಪೆಟ್ರೋಲಿಯಮ್ ಇತ್ಯಾದಿ ತಂತ್ರಜ್ಞಾನವನ್ನು ಹಡಗುಗಳು ಮತ್ತು ಜಲನೌಕೆಗಳ ಸಂಚಲನೆ, ಆನ್‌ಬೋರ್ಡ್ ಸಿಸ್ಟಮ್‌ಗಳು, ತೈಲದ ರಿಗ್‌ಗಳು ಮತ್ತು ಸಾಗರಶಾಸ್ತ್ರದ ಅಭಿವೃದ್ಧಿ, ವಿನ್ಯಾಸ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಉಪಯೋಗಿಸಲಾಗುತ್ತದೆ. ಇಂದು, ಜಾಗತಿಕ ವ್ಯಾಪಾರ, ವಾಣಿಜ್ಯ ಅತ್ಯುನ್ನತ ಮಟ್ಟಕ್ಕೆ ಅಭಿವೃದ್ಧಿಯಾಗಿರುವುದರ ಹಿಂದೆ ಮರೀನ್ ಎಂಜಿನಿಯರಿAಗ್‌ನ ತಾಂತ್ರಿಕ ಅದ್ಭುತಗಳ ಕೊಡುಗೆ ಗಮನಾರ್ಹ.
ಈ ಕೋರ್ಸ್ ಮುಗಿದ ನಂತರ, ಖಾಸಗಿ ಮತ್ತು ಸರ್ಕಾರಿ ಹಡಗು ಕಂಪನಿಗಳು, ಜಲನೌಕೆಗಳ ವಿನ್ಯಾಸ, ನಿರ್ಮಾಣ ಮತ್ತು ಎಂಜಿನ್ ಉತ್ಪಾದನಾ ಸಂಸ್ಥೆಗಳಲ್ಲಿ ವೃತ್ತಿಯ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಕೆಲಸದ ಶೈಲಿ, ನಿಯಮಗಳು ಸಂಪೂರ್ಣವಾಗಿ ವಿಬಿನ್ನ ಮತ್ತು ಕೆಲಸ ಸಾಮಾನ್ಯವಾಗಿ ಹಡಗುಗಳಲ್ಲಿಯೇ; ಇದರ ಪರಿಣಾಮವಾಗಿ, ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಸಾಧಿಸುವುದು ಸವಾಲಾಗಬಹುದು. ಹಾಗಾಗಿ, ಉದ್ಯೋಗಿಗಳಿಗೆ ಅಕರ್ಷಕ ಸಂಬಳ, ಭತ್ಯೆ, ನಿವೃತ್ತಿ ವೇತನ ಮತ್ತು ಇನ್ನಿತರ ಸವಲತ್ತುಗಳು ಇರುವುದು ಸಾಮಾನ್ಯ.
ಇವೆಲ್ಲಾ ಅಂಶಗಳನ್ನು ಪರಿಗಣಿಸಿ, ವೃತ್ತಿಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:
Q2. ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಿರ್ಣನಾಗಿದ್ದು ಮುಂದೆ ಚಾರ್ಟೆಡ್ ಅಕೌಂಟೆAಟ್ ಆಗಬೇಕೆಂದಿದ್ದೇನೆ. ಮುಂದೆ, ನಾನು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ದಯಮಾಡಿ ತಿಳಿಸಿ ಸರ್.
ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಐದು ಪ್ರಮುಖ ಹಂತಗಳಿವೆ.
- ಎಸ್‌ಎಸ್‌ಎಲ್‌ಸಿ ನಂತರ, ಸಿಎ ಫೌಂಡೇಷನ್ ಕೋರ್ಸ್ಗೆ ನೋಂದಾಯಿಸಿಕೊAಡು ಫೌಂಡೇಷನ್ ಕೋರ್ಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು. ಈ ಪರೀಕ್ಷೆಗೆ ಪಿಯುಸಿ ನಂತರ ಅರ್ಹತೆ ಸಿಗುತ್ತದೆ. ಈಗಲೇ ನೋಂದಾಯಿಸುವುದರಿAದ, ಪರೀಕ್ಷೆಯ ತಯಾರಿಗೆ ಹೆಚ್ಚಿನ ಸಮಯ ಸಿಗುತ್ತದೆ. ಫೌಂಡೇಷನ್ ಕೋರ್ಸ್ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ ಶೇ 40 ಅಂಕಗಳು ಇರಬೇಕು.
- ಫೌಂಡೇಷನ್ ಕೋರ್ಸ್ ನಂತರ ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್ಗೆ ನೋಂದಾಯಿಸಬೇಕು.
- ಮಧ್ಯಂತರ ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆAಟ್ ಅವರಲ್ಲಿ ಸೇರಬೇಕು.
- ಕನಿಷ್ಠ 2 1/2 ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
- ಅಂತಿಮ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಎಸ್‌ಎಸ್‌ಎಲ್‌ಸಿ ನಂತರ ಸಿಎ ಕೋರ್ಸ್ ಮಾಡಲು, 6 ವರ್ಷ ಬೇಕಾಗಬಹುದು.
ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant
Q3. ಸ್ವಲ್ಪ ದಿನಗಳ ಹಿಂದೆ, ಮಾನ್ಯ ಪ್ರಧಾನಮಂತ್ರಿಯವರು ಕೇಂದ್ರ ಸರ್ಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 10 ಲಕ್ಷ ಹುದ್ದೆಗಳ ನೇಮಕಾತಿಯನ್ನು ವಿವಿಧ ಇಲಾಖೆಯಲ್ಲಿ ನೇಮಿಸಿಕೊಳ್ಳಲಾಗುವುದು ಎಂದಿದ್ದಾರೆ. ಈ ಕುರಿತು ಈ ವರ್ಷವಾದರೂ, ಎನ್‌ಆರ್‌ಎ ಅಡಿಯಲ್ಲಿ ಪರೀಕ್ಷೆಯನ್ನು ನಡೆಸುವ ಸಾಧ್ಯತೆ ಇದೆಯೇ? ಕಳೆದ ಒಂದೆರೆಡು ವರ್ಷಗಳಿಂದ ಎನ್‌ಆರ್‌ಎ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಇದರ ಬಗ್ಗೆ ಅಧಿಕೃತವಾಗಿ ಏನೂ ತಿಳಿಯದ ಕಾರಣ, ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ.
ಎನ್‌ಆರ್‌ಎ (ನ್ಯಾಷನಲ್ ರೆಕ್ರೂಟ್‌ಮೆಂಟ್ ಏಜೆನ್ಸಿ) ಸ್ಥಾಪಿಸುವ ಮೊದಲು, ಭಾರತೀಯ ರೈಲ್ವೆ, ಇತರ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಸೇವೆಗಳ ಅಡಿಯಲ್ಲಿ ಗ್ರೂಪ್ ಬಿ., ಗ್ರೂಪ್ ಸಿ ಮತ್ತು ಗ್ರೂಪ್ ಡಿ (ನಾನ್-ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿತ್ತು. ಹೆಚ್ಚಿನ ಹುದ್ದೆಗಳಿಗೆ ಒಂದೇ ರೀತಿಯ ಅರ್ಹತೆಯ ಅಗತ್ಯವನ್ನು ಮನಗಂಡು ಎನ್‌ಆರ್‌ಎ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಿಂದ ಸರ್ಕಾರಿ ಸಂಸ್ಥೆಗಳ ಬಹುತೇಕ ಹುದ್ದೆಗಳನ್ನು ಅರಸುವ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷೆಯ ಸೌಲಭ್ಯ ದೊರಕಲಿದೆ.
ಎನ್‌ಆರ್‌ಎ ನಿರ್ವಹಿಸುವ ಮೊದಲ ಸಿಇಟಿ ಪರೀಕ್ಷೆ ಈ ವರ್ಷದ ಅಕ್ಟೋಬರ್-ಡಿಸೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.
Q4. ಎರಡನೇ ವರ್ಷದ ಪದವಿ ಓದುತ್ತಿದ್ದೇನೆ. ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದೇನೆ ಮತ್ತು ನೌಕರಿ ಮಾಡಬೇಕೆಂದಿದ್ದೇನೆ. ಹಾಗಾಗಿ, ನಾನು ಪದವಿಯನ್ನು ಹೇಗೆ ಪೂರ್ಣಗೊಳಿಸಬಹುದು? ನಾನು ಎನ್‌ಇಪಿ ವಿದ್ಯಾರ್ಥಿಯಲ್ಲ; ದೂರಶಿಕ್ಷಣ ಅಥವಾ ರೆಗ್ಯುಲರ್ ಶಿಕ್ಷಣದ ಮೂಲಕ ಮುಗಿಸಬೇಕೇ?
ನೀವು ಈಗ ಮಾಡುತ್ತಿರುವ ಪದವಿಯ ಕುರಿತು ನೀಡಿರುವ ಇಷ್ಟೇ ಮಾಹಿತಿಯಿಂದ, ನಿಮ್ಮ ಪ್ರಶ್ನೆಗೆ ನಿರ್ಧಿಷ್ಟವಾಗಿ ಉತ್ತರಿಸಲಾಗದು. ಆದ್ದರಿಂದ, ನೀವು ಪದವಿ ಕೋರ್ಸ್ ಮಾಡುತ್ತಿರುವ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ಬ್ಯೂರೋ, ಯುಜಿಸಿ ಮಾನ್ಯತೆ ಪಡೆದಿರುವ, ನೀವು ಬಯಸುವ ದೂರ ಶಿಕ್ಷಣ ವಿಶ್ವವಿದ್ಯಾಲಯಕ್ಕೆ, ನೀವು ಈವರೆಗೆ ಪಡೆದಿರುವ ಕ್ರೆಡಿಟ್ ವರ್ಗಾವಣೆ ಆಗುತ್ತದೆಯೇ ಎಂದು ಪರಿಶೀಲಿಸಿ. ಈ ಸಾಧ್ಯತೆಯಿದ್ದಲ್ಲಿ, ಪದವಿಯನ್ನು ದೂರ ಶಿಕ್ಷಣದ ಮೂಲಕ ಪೂರ್ಣಗೊಳಿಸಬಹುದು.
Q5. ನಾನು ಪ್ರಥಮ ವರ್ಷದ ಬಿ.ಎಸ್ಸಿ ( ಸಿಬಿಝೆಡ್) ಓದುತ್ತಿದ್ದೇನೆ, ಅದರೊಳಗೆ, ಹೊಸ ಎನ್‌ಇಪಿ ಪ್ರಕಾರ ( ಬಿ, ಝೆಡ್) ಆಯ್ಕೆ ಮಾಡಿಕೊಂಡಿದ್ದು, ಮುಂದೆ ಜೆಎಎಮ್ ಮೂಲಕ ಓದಬೇಕೆಂಬ ಆಸೆಯಿದೆ, ಆದರೆ, ಕೆಲವರು ನೀನು ತೆಗೆದುಕೊಂಡ ವಿಷಯಗಳಲ್ಲಿ ಅವಕಾಶಗಳು ಕಡಿಮೆ ಎಂದು ಹೇಳುತ್ತಾರೆ. ಈ ಕೋರ್ಸ್ ನಂತರ, ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ.
ಪ್ರಸ್ತುತ ವಿದ್ಯಾರ್ಥಿಗಳು, ‘ಮೊದಲು ಕೋರ್ಸ್, ನಂತರ ವೃತ್ತಿ‘ ಎಂಬ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ, ಇನ್ನು ಮುಂದೆ ‘ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್ ಆಯ್ಕೆ‘ ಎಂದು ಬದಲಾಯಿಸಿಕೊಳ್ಳಬೇಕಿದೆ. ಕೋರ್ಸ್ ಆಯ್ಕೆಗೆ ಮುನ್ನ ಯಾವ ವೃತ್ತಿಗೆ ಸೇರಬೇಕೆಂದು ನಿಶ್ಚಯಿಸಿ, ವೃತ್ತಿ ಯೋಜನೆಯನ್ನು ಮಾಡಬೇಕು.
ನಿಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ಅಭಿರುಚಿಯನ್ನು ಅರಿತು, ಯಾವ ವೃತ್ತಿ ಸರಿಹೊಂದಬಹುದೆAದು ಅಂದಾಜಿಸಿ.
ಅAತಹ ವೃತ್ತಿಜೀವನದ ಬಗ್ಗೆ ಸಂಶೋಧನೆ ನಡೆಸಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಮಾಡಿಕೊಳ್ಳಿ. ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ. ಅದರಂತೆ, ಆಯ್ಕೆ ಮಾಡಿದ ಕೋರ್ಸಿಗೆ ಬೇಕಾದ ಪ್ರವೇಶ ಪರೀಕ್ಷೆಗೆ ತಯಾರಾಗಿ.
ದೇಶದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಾದ ಐಐಟಿ ಗಳಲ್ಲಿ ಎಂ.ಎಸ್ಸಿ ಪ್ರವೇಶಕ್ಕೆ ಜೆಎಎಮ್ (ಜಾಯಿಂಟ್ ಅಡ್ಮಿಷನ್ ಟೆಸ್ಟ್ ಮಾಸ್ಟರ್ಸ್) ಪರೀಕ್ಷೆಯನ್ನು ನಡೆಸಲಾಗುತ್ತದೆ. ಐಐಟಿ ಗಳಂತಹ ಸಂಸ್ಥೆಗಳಲ್ಲಿ ಎಂ.ಎಸ್ಸಿ ಪದವಿಯನ್ನು ಮಾಡಿದ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆಕರ್ಷಕ ಉದ್ಯೋಗಾವಕಾಶಗಳಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://jam.iitr.ac.in/available-courses.html
Q6. ನಾನು ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಮುಂದೆ ಮಾಡಬಹುದಾದ ಕೋರ್ಸ್ಗಳ ಬಗ್ಗೆ ತಿಳಿಸಿ.
ಕಲಾ ವಿಭಾಗದಲ್ಲಿ, ಬೇರೆ ವಿಭಾಗಗಳಿಗಿಂತ ಅವಕಾಶಗಳು ಕಮ್ಮಿ ಎನ್ನುವ ತಪ್ಪು ಅಭಿಪ್ರಾಯವಿದೆ. ಆದರೆ, ಈಗ ಕಲಾ ವಿಭಾಗ ಸೇರಿದಂತೆ, ಸ್ಟೀಮ್ ( ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಆರ್ಟ್ಸ್ ಮತ್ತು ಮ್ಯಾಥಮ್ಯಾಟಿಕ್ಸ್) ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಪಿಯುಸಿ ನಂತರ, ಬಿಎ ಪದವಿಯನ್ನು ಅನೇಕ ವಿಷಯಗಳಲ್ಲಿ ಮಾಡಬಹುದು. ಉದಾಹರಣೆಗೆ, ಕನ್ನಡ, ಇಂಗ್ಲಿಷ್, ಅರ್ಥಶಾಸ್ತç, ಸಮಾಜಶಾಸ್ತç, ಚರಿತ್ರೆ, ರಾಜ್ಯಶಾಸ್ತç, ತತ್ವಶಾಸ್ತç, ಮನೋವಿಜ್ಞಾನ, ಮಾನವಶಾಸ್ತç, ಪುರಾತತ್ವ ಶಾಸ್ತç, ಪರಿಸರ ವಿಜ್ಞಾನ, ಪತ್ರಿಕೋಧ್ಯಮ, ಲಲಿತಕಲೆ, ಹೋಟೆಲ್ ಮ್ಯಾನೇಜ್‌ಮೆಂಟ್, ಟೂರಿಸಮ್ ಇತ್ಯಾದಿ. ಹಾಗೂ, ಯಾವುದಾದರೂ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿದ್ದಲ್ಲಿ, ಬಿಎ (ಆನರ್ಸ್) ಮಾಡಬಹುದು.
ಕಲಾ ವಿಭಾಗದಲ್ಲಿ ಪಿಯುಸಿ ನಂತರ ಮಾಡಬಹುದಾದ ಇನ್ನಿತರ ಪ್ರಮುಖ ಕೋರ್ಸ್ಗಳೆಂದರೆ ಬಿಬಿಎ, ಬಿಕಾಂ/ಬಿಸಿಎ (ಕೆಲವು ವಿಶ್ವವಿದ್ಯಾಲಯಗಳಲ್ಲಿ), ಬಿಎಸ್‌ಡಬ್ಲ್ಯು, ಬಿ.ಡಿಸೈನ್, ಎಲ್‌ಎಲ್‌ಬಿ (ಇಂಟಿಗ್ರೇಟೆಡ್), ಸಿಎ, ಸಿಎಸ್, ಐಎಎಸ್ (ಪದವಿಯ ನಂತರ) ಇತ್ಯಾದಿ. ಇದಲ್ಲದೆ, ನಿಮ್ಮ ಆಸಕ್ತಿ ಮತ್ತು ಅವಶ್ಯಕತೆಗೆ ತಕ್ಕಂತೆ ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನೂ ಮಾಡಬಹುದು. ವಿಶೇಷವಾಗಿ, ಆನ್‌ಲೈನ್ ಮತ್ತು ದೂರಶಿಕ್ಷಣದ ಮುಖಾಂತರ ಪದವಿ ಕೋರ್ಸ್ ಸೇರಿದಂತೆ ಹಲವಾರು ಕೋರ್ಸ್ಗಳನ್ನು ಮಾಡಬಹುದು. ಹಾಗಾಗಿ, ಕಲಾ ವಿಭಾಗ ಅತ್ಯಂತ ವಿಸ್ತಾರವಾದ ಕ್ಷೇತ್ರ. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant
Q7. 2021ರಲ್ಲಿ ಬಿಸಿಎ ಮುಗಿಸಿದ್ದೇನೆ. ವೆಬ್ ಡೆವೆಲಪ್‌ಮೆಂಟ್, ಐಟಿ, ಎಂಸಿಎ ಕೋರ್ಸ್ಗಳಿಗೆ ಏನು ಓದಬೇಕು ತಿಳಿಸಿಕೊಡಿ, ಸರ್.
ವೆಬ್ ಡೆವೆಲಪರ್ ವೃತ್ತಿಗೆ ವೆಬ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್, ಎಚ್‌ಟಿಎಂಎಲ್, ಸಿಎಸ್‌ಎಸ್, ಜಾವಸ್ಕಿçಪ್ಟ್, ಪಿಎಚ್‌ಪಿ, ರೂಬಿ, ಯುಐ, ಯುಎಕ್ಸ್ ಇತ್ಯಾದಿ ವಿಷಯಗಳಲ್ಲಿ ತಜ್ಞತೆಯ ಅವಶ್ಯಕತೆಯಿರುತ್ತದೆ. ಈ ವೃತ್ತಿಯಲ್ಲಿ, ನಿಮ್ಮ ಕಾರ್ಯಕ್ಷೇತ್ರದ ಅನುಸಾರ (ಡಿಸೈನ್, ಫ್ರಂಟ್ ಎಂಡ್, ಬ್ಯಾಕ್ ಎಂಡ್) ಸೂಕ್ತವಾದ ಕೋರ್ಸ್ಗಳನ್ನು ಮಾಡಬೇಕು. ಐಟಿ ವಿಸ್ತಾರವಾದ ಕ್ಷೇತ್ರ; ಹಾಗಾಗಿ, ನಿಮ್ಮ ಅಭಿರುಚಿಯಂತೆ ವೃತ್ತಿಯ ಆಯ್ಕೆ ಮಾಡಿ, ನಂತರ ಕೋರ್ಸ್ ಆಯ್ಕೆ ಮಾಡಬೇಕು. ನೀವು ಬಿಸಿಎ ಈಗಾಗಲೇ ಮಾಡಿರುವುದರಿಂದ, ಅದೇ ವಿಷಯಗಳಲ್ಲಿ ಹೆಚ್ಚಿನ ತಜ್ಞತೆಗಾಗಿ, ಎಂಸಿಎ ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
Q8. ಪಿಯುಸಿ ನಂತರ, ಸಿಎ ಮಾಡುವುದರ ಕುರಿತು ಸಲಹೆ ನೀಡಿ.
Q9. ನಾನು ಎರಡನೇ ವರ್ಷದ ಬಿಕಾಂ ಓದುತ್ತಿದ್ದೇನೆ. ಪಿಯುಸಿ ಆದಮೇಲೆ ಸಿಎ ಮಾಡಬೇಕು ಎಂದುಕೊAಡಿದ್ದೆ. ಆದರೆ, ಕಾರಣಾಂತರದಿಂದ ಮಾಡಲು ಆಗಲಿಲ್ಲ. ಆದ್ದರಿಂದ, ಈಗ ಓದಬೇಕು ಎಂದುಕೊಂಡಿದ್ದೇನೆ. ಸಲಹೆ ನೀಡಿ.
- ಪಿಯುಸಿ ನಂತರ, ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಮೊದಲು ಫೌಂಡೇಷನ್ ಕೋರ್ಸ್ ಮಾಡಬೇಕು. ಫೌಂಡೇಷನ್ ಕೋರ್ಸ್ ನಂತರ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್ಗೆ ನೋಂದಾಯಿಸಬೇಕು. ಬಿಕಾಂ (ಕನಿಷ್ಠ ಶೇ 55) ನಂತರ, ನೇರವಾಗಿ ಸಿಎ ಮಧ್ಯಂತರ ಕೋರ್ಸ್ಗೆ ಅರ್ಹತೆ ಸಿಗುತ್ತದೆ.
- ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ಸೇರಬೇಕು.
- ಕನಿಷ್ಠ 2 ½ ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
- ಅಂತಿಮ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು.
ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ:
Q10. ನನ್ನ ಮಗ ಪಿಯುಸಿ ಮುಗಿಸಿ, ಎಂಜಿನಿಯರಿAಗ್ ಅಥವಾ ವೈದ್ಯಕೀಯ ಕೋರ್ಸ್ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾನೆ. ಅವನಿಗೆ ಮಾರ್ಗದರ್ಶನ ನೀಡಬಹುದೇ?
ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಮಗನ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನ ಬೇಕಾದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.
Q11. ಸರ್, ನಾನು ಪಿಯುಸಿ ಪರೀಕ್ಷೆಯಲ್ಲಿ ಶೇ 93 ಅಂಕ ಪಡೆದಿದ್ದೇನೆ. ನಾನು ಕಲಾ ಮಾಧ್ಯಮದ ವಿದ್ಯಾರ್ಥಿ; ಆದರೆ ಕಲಾ ವಿಭಾಗ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಬಹಳ ಜನ ಹೇಳುತ್ತಾರೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ. ದಯಮಾಡಿ ಮಾರ್ಗದರ್ಶನ ಮಾಡಿ ಸರ್.
ಕಲಾ ವಿಭಾಗದಲ್ಲಿ ಅವಕಾಶಗಳು ಕಡಿಮೆ ಎನ್ನುವ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಪಿಯುಸಿ ನಂತರ, ಬಿಎ ಪದವಿಯನ್ನು ಅನೇಕ ವಿಷಯಗಳಲ್ಲಿ ಮಾಡಬಹುದು. ಉದಾಹರಣೆಗೆ, ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ, ಮಾನವಶಾಸ್ತ್ರ, ಪುರಾತತ್ವ ಶಾಸ್ತ್ರ, ಪರಿಸರ ವಿಜ್ಞಾನ, ಪತ್ರಿಕೋಧ್ಯಮ, ಲಲಿತಕಲೆ, ಹೋಟೆಲ್ ಮ್ಯಾನೇಜ್‌ಮೆಂಟ್, ಟೂರಿಸಮ್ ಇತ್ಯಾದಿ. ಹಾಗೂ, ಯಾವುದಾದರೂ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿದ್ದಲ್ಲಿ, ಬಿಎ (ಆನರ್ಸ್) ಮಾಡಬಹುದು.
ಕಲಾ ವಿಭಾಗದಲ್ಲಿ ಮಾಡಬಹುದಾದ ಇನ್ನಿತರ ಪ್ರಮುಖ ಕೋರ್ಸ್ಗಳೆಂದರೆ ಬಿಬಿಎ, ಬಿಕಾಂ/ಬಿಸಿಎ (ಕೆಲವು ವಿಶ್ವವಿದ್ಯಾಲಯಗಳಲ್ಲಿ), ಬಿಎಸ್‌ಡಬ್ಲ್ಯು, ಬಿ.ಡಿಸೈನ್, ಎಲ್‌ಎಲ್‌ಬಿ (ಇಂಟಿಗ್ರೇಟೆಡ್), ಸಿಎ, ಸಿಎಸ್, ಐಎಎಸ್ (ಪದವಿಯ ನಂತರ) ಇತ್ಯಾದಿ. ಹಾಗಾಗಿ, ಕಲಾ ವಿಭಾಗ ವಿಸ್ತಾರವಾದ ಕ್ಷೇತ್ರ. ನಿಮ್ಮ ಆಸಕ್ತಿ, ಅಭಿರುಚಿಯಂತೆ ಕೋರ್ಸ್ ಆಯ್ಕೆ ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.
https://www.youtube.com/c/EducationalExpertManagementCareerConsultant
Q12. ನಾನು ಪಿಯುಸಿ ಪರೀಕ್ಷೆಯಲ್ಲಿ ಶೇ 54ರಷ್ಟು ಅಂಕ ಪಡೆದಿದ್ದೇನೆ. ಕೌಟುಂಬಿಕ ಸಮಸ್ಯೆಗಳಿಂದ ಓದಿ ಸರಿಯಾದ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ವೈದ್ಯಳಾಗಬೇಕೆಂಬುದು ನನ್ನ ಕನಸು. ನೀಟ್ ಪರೀಕ್ಷೆಗೆ ತಯಾರಿ ನಡೆಸಲು ಯೋಚಿಸಿದ್ದೇನೆ. ಆದರೆ, ವೈದ್ಯರಾಗೋಕೆ ತುಂಬಾ ಹಣ ಬೇಕು; ಜೊತೆಗೆ ತುಂಬಾ ಸಮಯ ಹಿಡಿಯುತ್ತೆ; ಹಾಗಾಗಿ ಬೋಧನಾ ಕೋರ್ಸ್ಗಳನ್ನು ಆಯ್ಕೆ ಮಾಡುವಂತೆ ನಮ್ಮ ತಾಯಿ ಹೇಳುತ್ತಿದ್ದಾರೆ. ವೈದ್ಯಳಾಗುವುದು ನನ್ನ ಕನಸು. ಈಗ ಏನು ಮಾಡಬಹುದು, ಸರ್?
ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಶೈಕ್ಷಣಿಕ ಕನಸುಗಳನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಭಾರತದ ಪ್ರಮುಖ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತಿವೆ. ವಿಶೇಷವಾಗಿ, ವಿದ್ಯಾರ್ಥಿನಿಯರಿಗೆ ರಿಯಾಯಿತಿ ದರದಲ್ಲಿ ಸಾಲವನ್ನು ನೀಡುವ ಯೋಜನೆಗಳೂ ಅನೇಕ ಬ್ಯಾಂಕ್‌ಗಳಲ್ಲಿದೆ. ಹಾಗೂ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ, ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಆ ಅನುಕೂಲಗಳನ್ನು ಪಡೆದುಕೊಳ್ಳಿ. ಮುಖ್ಯವಾಗಿ, ಎನ್‌ಇಇಟಿ(ನೀಟ್) ಪರೀಕ್ಷೆಯಲ್ಲಿ ಕನಿಷ್ಠ 600 (ಗರಿಷ್ಠ 720) ಅಂಕಗಳನ್ನು ಗಳಿಸಿ, ಸರ್ಕಾರಿ ಕೋಟಾದ ಸೀಟ್ ಪಡೆಯಲು ಪ್ರಯತ್ನಿಸಿ. ಶುಭಹಾರೈಕೆಗಳು.
Q13. ನಾನು ಬಿಎಸ್ಸಿ (ಸಿಬಿಝೆಡ್) ಪೂರ್ಣಗೊಳಿಸಿದ್ದೇನೆ. ಆಹಾರ ವಿಜ್ಞಾನ ಅಥವಾ ನ್ಯೂಟ್ರಿಷನ್ ಸಂಬAಧಪಟ್ಟಂತೆ ಎಂಎಸ್ಸಿ ಮಾಡಬೇಕೆಂದಿದ್ದೇನೆ. ಆದರೆ, ನನ್ನ ಗೆಳೆಯರು ಎಂಎಸ್ಸಿ (ಆಹಾರ ವಿಜ್ಞಾನ) ಬದಲಾಗಿ ಎಂಎಸ್ಸಿ (ಪ್ರಾಣಿವಿಜ್ಞಾನ) ಮಾಡುವಂತೆ ಹೇಳುತ್ತಿದ್ದಾರೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ?
ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಆಹಾರ ವಿಜ್ಞಾನ ಮತ್ತು ಪುಷ್ಟಿ ವಿಜ್ಞಾನ (ನ್ಯೂಟ್ರಿಷನ್) ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ದೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ದಪಡಿಸುವ ಕಾರ್ಯಗಳಲ್ಲಿ ಆಹಾರ ವಿಜ್ಞಾನ, ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದಲ್ಲಿ, ಎಂಎಸ್ಸಿ ಕೋರ್ಸ್ ಮಾಡಬಹುದು.
ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ ( ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ವಿಪುಲವಾದ ಉದ್ಯೋಗಾವಕಾಶಗಳಿವೆ.
Q14. ಬಿಕಾಂ ಪದವಿ ಪಡೆದ ಮೇಲೆ, ನಮಗೆ ಯಾವ ರೀತಿಯ ಉದ್ಯೋಗಾವಕಾಶಗಳು ದೊರೆಯುತ್ತವೆ?
ಬಿಕಾಂ ಪದವೀಧರರಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಪದವಿಯ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.
Q15. ನಾನು ಬಿಎ (ದೂರಶಿಕ್ಷಣ) ಮಾಡಿದ್ದೇನೆ. ಮುಂದೆ, ಎಲ್‌ಎಲ್‌ಬಿ ಮಾಡುವ ಆಸೆ ಇದೆ, ಇದಕ್ಕೆ ಬೇರೆ ಯಾವುದಾದರೂ ಕೋರ್ಸ್ ಮಾಡಬೇಕೆ ಅಥವಾ ನೇರವಾಗಿ ಎಲ್‌ಎಲ್‌ಬಿ ಮಾಡಬಹುದೇ ತಿಳಿಸಿ?
ದೂರ ಶಿಕ್ಷಣ ಬ್ಯೂರೊ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರಿಗೆ, ಎಲ್‌ಎಲ್‌ಬಿ ಕೋರ್ಸ್ ಮಾಡಲು ಅರ್ಹತೆ ಇರುತ್ತದೆ.
Q16. ನಾನು ಪದವಿ ಮುಗಿಸಿದ್ದು, ಆಧಾರ್ ಎನ್‌ರೋಲ್‌ಮೆಂಟ್ ಪರೀಕ್ಷೆ ಪಾಸ್ ಆಗಿದ್ದೇನೆ ಮತ್ತು ಏಜೆನ್ಸಿಯ ಅವಧಿ 1 ವರ್ಷವಿದೆ. ನಂತರದಲ್ಲಿ ನಾವು ಕೆಲಸ ಇಲ್ಲದೆ ಇರಬೇಕಾಗುತ್ತದೆ. ಆದ್ದರಿಂದ, ನಾನು ಯುಐಡಿಎಐ ಸಂಸ್ಥೆಯಲ್ಲಿ ಮುಂದುವರೆಯುವುದು ಹೇಗೆ? ಇದಕ್ಕೆ ಸರ್ಕಾರಿ ನೇಮಕಾತಿ ಇದೆಯೇ?
ಯುಐಡಿಎಐ ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಪ್ರಾಧಿಕಾರವಾಗಿರುತ್ತದೆ. ಈ ಸಂಸ್ಥೆಯಲ್ಲಿನ ಹಲವಾರು ಹುದ್ದೆಗಳಿಗೆ ನೇರವಾಗಿ ನೇಮಕಾತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://uidai.gov.in/about-uidai/work-with-uidai.html
Q17. ನಾನು ದ್ವಿತೀಯ ಪಿಯುಸಿ (ಪಿಸಿಎಂಬಿ) ಓದುತ್ತಿದ್ದೇನೆ. ಪಿಯುಸಿ ನಂತರ ಬಿಎಸ್ಸಿ (ಮನಃಶಾಸ್ತç) ಮಾಡಬೇಕು ಎಂದುಕೊಂಡಿದ್ದೇನೆ. ಈ ವಿಷಯವನ್ನು ಬೋಧಿಸುವ ಬೆಂಗಳೂರಿನ ಉತ್ತಮ ಕಾಲೇಜಿನ ಬಗ್ಗೆ ಮಾಹಿತಿ ನೀಡಿ. ಇದೇ ವಿಷಯದಲ್ಲಿ ಎಂಎಸ್ಸಿ ಮಾಡಿದರೆ ಉದ್ಯೋಗಾವಕಾಶಗಳು ಹೇರಳವಾಗಿವೆಯೇ ತಿಳಿಸಿ. ಬಿಎಸ್ಸಿ (ಮನಃಶಾಸ್ತç) ನಾಲ್ಕು ವರ್ಷದ ಕೋರ್ಸ್ ಇದೆ ಎಂದು ಕೇಳಿದ್ದೇನೆ. ಅದಕ್ಕೆ ಸಿಇಟಿ ಬರೆಯಬೇಕೆ ಎಂಬ ಗೊಂದಲವಿದೆ. ಅದರ ಬಗ್ಗೆಯೂ ಮಾಹಿತಿ ನೀಡಿ.
ಸಾಮಾನ್ಯವಾಗಿ ಬಿಎಸ್ಸಿ (ಮನಃಶಾಸ್ತç) ಮೂರು ವರ್ಷದ ಕೋರ್ಸ್ ಆಗಿರುತ್ತದೆ. ಪಿಇಎಸ್ ಮುಂತಾದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷದ ಬಿಎಸ್ಸಿ (ಮನಃಶಾಸ್ತç-ಆನರ್ಸ್) ಕೋರ್ಸ್ ಮಾಡಬಹುದು. ಕೆಲವು ಕಾಲೇಜುಗಳಲ್ಲಿ ನೇರವಾಗಿ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಪ್ರವೇಶ ಪಡೆಯಬಹುದು ಮತ್ತು ಕೆಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆಯಿರುತ್ತದೆ. ಉತ್ತಮ ಕಾಲೇಜುಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
Q18. ನಾನು ಬಿಬಿಎ ಮುಗಿಸಿದ್ದೇನೆ. ಸದ್ಯಕ್ಕೆ, ಕೆಎಎಸ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ. ಮುಂದೆ ಸ್ನಾತಕೋತ್ತರ ಪದವಿ ಮಾಡಬೇಕು ಎಂದುಕೊಂಡಿದ್ದೇನೆ. ದೂರಶಿಕ್ಷಣದ ಮೂಲಕ ಎಂಬಿಎ, ಎಂಎ. ಎಂಕಾA ಬಿಟ್ಟರೆ ಬೇರೆ ಯಾವ ಕೋರ್ಸ್ ಮಾಡಬಹುದು ತಿಳಿಸಿ.
ಈಗ 40ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಸುಮಾರು 375 ಪದವಿ ಕೋರ್ಸ್ಗಳನ್ನು ದೂರಶಿಕ್ಷಣದ ಮುಖಾಂತರ ಮಾಡಬಹುದು ಎನ್ನಲಾಗುತ್ತದೆ. ಎಂಎ, ಎಂಕಾA, ಎಂಬಿಎ, ಎಂಎಸ್ಸಿ, ಎಂಸಿಎ ಮುಂತಾದ ಸ್ನಾತಕೋತ್ತರ ಕೋರ್ಸ್ಗಳನ್ನು ಈಗ ದೂರಶಿಕ್ಷಣದ ಮುಖಾಂತರ ಮಾಡಲು ಅವಕಾಶವಿದೆ. ಕೋರ್ಸ್ ಆಯ್ಕೆಯ ಮುನ್ನ, ದೂರ ಶಿಕ್ಷಣ ಬ್ಯೂರೊ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಮಾನ್ಯತೆ ಇದೆಯೇ ಎಂದು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.classcentral.com/report/india-online-degrees/
Q19. ಬಿಟೆಕ್ ದಾಖಲಾದ ಆರಂಭದ ದಿನಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು? ಕಾಲೇಜಿನ ತರಗತಿ ಹೊರತಾಗಿ, ನಮ್ಮ ಪ್ರಯತ್ನ ಹೇಗಿರಬೇಕು ಎಂದು ತಿಳಿಸಿ ಸರ್.
ಸಕಾರಾತ್ಮಕವಾದ ಆಲೋಚನೆಯಿಂದ ಈ ಪ್ರಶ್ನೆಯನ್ನು ಕೇಳಿರುವ ನಿಮಗೆ ಅಭಿನಂದನೆಗಳು. ಕಾಲೇಜುಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ನಿಷ್ಪರಿಣಾಮಕಾರಿ ಎನಿಸುವುದು ಸಹಜ. ವೃತ್ತಿ ಜೀವನದ ನಿಮ್ಮ ಕನಸುಗಳು ನನಸಾಗಬೇಕಾದರೆ, ನಿಮ್ಮ ಕಲಿಕೆ ಪರಿಣಾಮಕಾರಿಯಾಗಬೇಕು. ಹಾಗಾಗಿ, ಈ ಸಲಹೆಗಳನ್ನು ಗಮನಿಸಿ:
- ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಪರಿಣಾಮಕಾರಿ ಕಲಿಕೆಯಲ್ಲಿ ನಿರ್ಣಾಯಕವಾಗುತ್ತದೆ. ಏಕೆಂದರೆ, ಪ್ರಶ್ನೆಗಳು ತರಗತಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ ಮತ್ತು ಸ್ವಗತದ ಆಯಾಸವನ್ನು ನಿವಾರಿಸುತ್ತದೆ. ಏಕತಾನತೆ ಮತ್ತು ಮಂದವಾದ ತರಗತಿಯ ಪರಿಸರ ಇದ್ದಕ್ಕಿದ್ದಂತೆ ಜ್ಞಾನೋದಯವನ್ನು ಬೆಳಗಿಸುವ ಉತ್ತೇಜಕ ಪ್ರಯತ್ನವಾಗುತ್ತದೆ. ಅದ್ದರಿಂದ, ಪ್ರಶ್ನೆಗಾರಿಕೆ ನಿಮ್ಮ ಕಲಿಕೆಯ ಪ್ರಮುಖ ತಂತ್ರವಾಗಿರಲಿ.
- ಹಾಗೂ, ಸಕ್ರಿಯವಾದ ಪ್ರಶ್ನೆಗಾರಿಕೆಯಿಂದ ನಿಮ್ಮ ವಿಮರ್ಶಾತ್ಮಕ ಚಿಂತನಾ ಕೌಶಲ್ಯದ ಅಭಿವೃದ್ಧಿಯಾಗಿ, ಯಾವುದೇ ವಿಷಯದ ಬಗ್ಗೆ ಸ್ಪಷ್ಟವಾದ ಒಳನೋಟ ದೊರಕುತ್ತದೆ.
- ತಂತ್ರಜ್ಞಾನದ ಕೋರ್ಸ್ಗಳಲ್ಲಿ ತರಗತಿಯ ಹೊರಗಿನ ಅಧ್ಯಯನ ಮುಖ್ಯವಾಗುತ್ತದೆ. ಹಾಗಾಗಿ, ಕಾಲೇಜಿನ ಗ್ರಂಥಾಲಯದಲ್ಲಿ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ನಿಯತಕಾಲಿಕೆಗಳು, ಜರ್ನಲ್ಸ್, ಕೇಸ್ ಸ್ಟಡೀಸ್, ಪ್ರಾಜೆಕ್ಟ್ ರಿಪೋರ್ಟ್ಸ್, ಪ್ರಬಂಧಗಳು ಮತ್ತು ಸಂಶೋಧನಾತ್ಮಕ ಗ್ರಂಥಗಳನ್ನು ಅಧ್ಯಯನ ಮಾಡಬೇಕು.
- ಜ್ಞಾನಾರ್ಜನೆಯ ಜೊತೆಗೆ ಕೌಶಲಾಭಿವೃದ್ಧಿಯ ಬಗ್ಗೆಯೂ ಗಮನವಿರಲಿ. ವೃತ್ತಿ ಸಂಬAಧಿತ ಕೌಶಲಗಳ ಜೊತೆಗೆ ಪ್ರಾಥಮಿಕ ಕೌಶಲಗಳನ್ನು (ಯೋಜನೆ, ಸಮಯದ ನಿರ್ವಹಣೆ, ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯತೆ, ನಾಯಕತ್ವದ ಕೌಶಲಗಳು ಇತ್ಯಾದಿ) ಬೆಳೆಸಿಕೊಳ್ಳಿ. ಇದರಿಂದ ಕ್ಯಾಂಪಸ್ ನೇಮಕಾತಿ ಸುಲಭವಾಗಿ, ನಿಮ್ಮ ವೃತ್ತಿ ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದು.
Q20. ನಾನು ಪದವಿ ಬಿ.ವೊಕ್ (ಬ್ಯಾಚುಲರ್ ಅಫ್ ವೊಕೇಷನಲ್ ಸ್ಟಡೀಸ್) ಮುಗಿಸಿದ್ದು, ಈಗ ನಾನು ಎಂಎಸ್ಸಿ (ಡಯಟಿಕ್ಸ್ ಮತ್ತು ಫುಡ್ ಸರ್ವೀಸ್ ಮ್ಯಾನೇಜ್‌ಮೆಂಟ್)) ಕೋರ್ಸನ್ನು ಇಂದಿರಾಗಾAಧಿ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಡೆಯುತ್ತಿದ್ದೇನೆ. ಮುಂದೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಆಹಾರ ವಿಜ್ಞಾನ, ಆರೋಗ್ಯ ಮತ್ತು ಪುಷ್ಟಿ ವಿಜ್ಞಾನ (ನ್ಯೂಟ್ರಿಷನ್) ಮುಂಚೂಣಿಯಲ್ಲಿದೆ. ಎಂಎಸ್ಸಿ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಫಿಟ್ನೆಸ್ ಸೆಂಟರ್ಸ್, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು, ಸಾವಯವ ಉದ್ದಿಮೆಗಳು, ಆಹಾರ ಸಂಬAಧಿತ ( ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು ಸೇರಿದಂತೆ ವಿಪುಲವಾದ ಉದ್ಯೋಗಾವಕಾಶಗಳಿವೆ.
Q21. ನಾನು ಬಿಎ (ಪತ್ರಿಕೋದ್ಯಮ) ಓದುತ್ತಿದ್ದೇನೆ ಮುಂದೆ ಎಲ್‌ಎಲ್‌ಬಿ ಮಾಡುವ ಆಸಕ್ತಿ ಇದೆ. ಇದಕ್ಕೆ ನಿಮ್ಮ ಸಲಹೆ ತಿಳಿಸಿ.
ಬಿಎ ನಂತರ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದು. ಮುಖ್ಯವಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಪತ್ರಕರ್ತರಾಗಬೇಕೇ ಅಥವಾ ವಕೀಲರಾಗಬೇಕೇ ಎಂದು ನಿರ್ಧರಿಸಿ, ಅದರಂತೆ ಮುಂದಿನ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.
Q22. ನಾನು 2007–08 ರಲ್ಲಿ ಎಂಎ (ಇಂಗ್ಲಿಷ್) ಕೋರ್ಸ್ಗೆ ಪ್ರವೇಶವನ್ನು ಪಡೆದುಕೊಂಡಿದ್ದೆ. ಆದರೆ ವೈಯಕ್ತಿಕ ಕಾರಣಗಳಿಂದ ಮುಂದುವರಿಯಲು ಆಗಲಿಲ್ಲ. ಈಗ ಕೋರ್ಸ್ ಮುಂದುವರಿಸಲು ಮನಸ್ಸು ಮಾಡಿದ್ದೇನೆ. ಅಡ್ಮಿಷನ್ ವೇಳೆ ಕೊಟ್ಟ ದಾಖಲಾತಿ ಸಂಖ್ಯೆಯನ್ನು ಇಟ್ಟುಕೊಂಡಿದ್ದೇನೆ. ಅದರ ಆಧಾರದ ಮೇಲೆ ಮುಂದುವರಿಯಬಹುದೇ?
ನಮಗಿರುವ ಮಾಹಿತಿಯಂತೆ 2007–08 ರಲ್ಲಿ ಪ್ರವೇಶವನ್ನು ಪಡೆದ ಕೋರ್ಸ್ ಅನ್ನು ಈಗ ಮುಂದುವರೆಸಲು ಸಾಧ್ಯವಾಗಲಾರದು. ಹಾಗಾಗಿ, ಕೋರ್ಸ್ ಮುಂದುವರೆಸುವ ಸಾಧ್ಯತೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳೊಡನೆ ಚರ್ಚಿಸಿ. ಹಾಗೂ, ಎಂಎ (ಇಂಗ್ಲಿಷ್) ಕೋರ್ಸ್ ಅನ್ನು ಆನ್‌ಲೈನ್/ದೂರಶಿಕ್ಷಣದ ಮುಖಾಂತರ ಮಾಡಿದರೆ ನಿಮ್ಮ ಅಗತ್ಯಗಳು ಪೂರೈಸುತ್ತದೆಯೇ ಎಂದು ಪರಿಶೀಲಿಸಿ.
Q23. ನನ್ನ ಗೆಳತಿ ಪಿಎಸ್‌ಐ ಆಗಬೇಕೆಂಬ ಗುರಿ ಹೊಂದಿದ್ದಾಳೆ. ಒಂದು ಕಡೆ ಪಿಎಸ್‌ಐ ಹಗರಣ; ಮತ್ತೊಂದೆಡೆ, ಅವಳಿಗೆ ಮದುವೆ ಮಾಡಲು ಮನೆಯವರು ಒತ್ತಡ ಹೇರುತ್ತಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾಗಿದ್ದಾಳೆ. ಇಂಥ ಸಂದರ್ಭದಲ್ಲಿ ಅವಳು ಪರಿಸ್ಥಿತಿಯನ್ನು ನಿಭಾಯಿಸಿ, ಓದಿನತ್ತ ಗಮನ ಹರಿಸುವುದು ಹೇಗೆ ಸರ್?
ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ತೊಂದರೆಗಳು ಸರ್ವೇಸಾಮಾನ್ಯ. ನಿಮ್ಮ ಗೆಳತಿಯ ಕನಸುಗಳು ಸಾಕಾರವಾಗಬೇÃಕಾದರೆ, ಸ್ವಯಂಪ್ರೇರಣೆಯೇ ಅವರ ಸಾಧನೆಗೆ ಸಂಜೀವಿನಿಯಾಗಬೇಕು. ಇಂತಹ ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಹಾಗಾಗಿ, ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/
Q24. ನನಗೆ ಪಿಯುಸಿ (ವಿಜ್ಞಾನ) ಕೋರ್ಸ್ನಲ್ಲಿ ಶೇ 80 ರಷ್ಟು ಫಲಿತಾಂಶವಾಗಿದೆ. ಆದರೆ, ನನಗೆ ಈಗ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡಬೇಕೆಂದು ಇದೆ, ಏಕೆಂದರೆ, ಮುಂದಿನ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದು. ಆದರೆ ಮನೆಯಲ್ಲಿ ನಿರಾಕರಿಸುತ್ತಿದ್ದಾರೆ. ನಿಮ್ಮ ಸಲಹೆ ನೀಡಿ.
ಮೊದಲು ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿ ಯೋಜನೆಯನ್ನು ಮಾಡಲು ಈ ಸೂಚನೆಗಳನ್ನು ಅನುಸರಿಸಿ.
- ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.
- ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.
- ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
- ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
Q25. ನನ್ನ ಮಗಳು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾಳೆ. ಬಿಎಂಎಸ್ ಕೋರ್ಸ್ ಬಗ್ಗೆ ತಿಳಿಸಿ. ಬಿಎಂಎಸ್ ಕೋರ್ಸ್ ಮುಗಿದ ಮೇಲೆ ಉತ್ತಮವಾದ ಕ್ಯಾಂಪಸ್ ನೇಮಕಾತಿ ಸಿಗಬಹುದೇ?
ಬ್ಯಾಚುಲರ್ ಅಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್) ಸಾಮಾನ್ಯವಾಗಿ ಮೂರು ವರ್ಷದ ಪದವಿ ಕೋರ್ಸ್. ಕೆಲವು ಪ್ರತಿಷ್ಟಿತ ಕಾಲೇಜುಗಳಲ್ಲಿ ಮಾತ್ರ ಕ್ಯಾಂಪಸ್ ನೇಮಕಾತಿ ಇರುತ್ತದೆ. ಬಿಎಂಎಸ್ ನಂತರ ಎರಡು ವರ್ಷದ ಎಂಬಿಎ ಕೋರ್ಸ್ ಮಾಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಉತ್ತಮ ಕಾಲೇಜುಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
Q26. ನನ್ನ ಮಗ ಪಿಯುಸಿ ಮುಗಿಸಿ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾನೆ. ಅವನಿಗೆ ಮಾರ್ಗದರ್ಶನ ನೀಡಬಹುದೇ?
ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಮಗನ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನ ಬೇಕಾದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.
Q27. ಬಿಕಾಂ ಪದವಿ ಪಡೆದ ಮೇಲೆ, ನಮಗೆ ಯಾವ ರೀತಿಯ ಉದ್ಯೋಗಾವಕಾಶಗಳು ದೊರೆಯುತ್ತವೆ?
ಬಿಕಾಂ ಪದವೀಧರರಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಪದವಿಯ ನಂತರ ಬ್ಯಾಂಕಿAಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.
ಹಾಗೂ, ಬಿಕಾಂ ನಂತರ ಶಿಕ್ಷಣವನ್ನು ಮುಂದುವರೆಸಿ, ಸಿಎ (ಚಾರ್ಟೆಡ್ ಅಕೌಂಟೆಂಟ್), ಸಿಎಸ್ (ಕಂಪನಿ ಸೆಕ್ರೆಟರಿ), ಎಂಕಾಂ, ಎಂಬಿಎ ಮುಂತಾದ ಕೋರ್ಸ್ಗಳನ್ನು ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ:
Q28. ನಾನು ಪಿಯುಸಿ ಪರೀಕ್ಷೆಯಲ್ಲಿ ಶೇ 54ರಷ್ಟು ಅಂಕ ಪಡೆದಿದ್ದೇನೆ. ಕೌಟುಂಬಿಕ ಸಮಸ್ಯೆಗಳಿಂದ ಓದಿ ಸರಿಯಾದ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ವೈದ್ಯಳಾಗಬೇಕೆಂಬುದು ನನ್ನ ಕನಸು. ನೀಟ್ ಪರೀಕ್ಷೆಗೆ ತಯಾರಿ ನಡೆಸಲು ಯೋಚಿಸಿದ್ದೇನೆ. ಆದರೆ, ವೈದ್ಯರಾಗೋಕೆ ತುಂಬಾ ಹಣ ಬೇಕು; ಜೊತೆಗೆ ತುಂಬಾ ಸಮಯ ಹಿಡಿಯುತ್ತೆ; ಹಾಗಾಗಿ ಬೋಧನಾ ಕೋರ್ಸ್ಗಳನ್ನು ಆಯ್ಕೆ ಮಾಡುವಂತೆ ನಮ್ಮ ತಾಯಿ ಹೇಳುತ್ತಿದ್ದಾರೆ. ವೈದ್ಯಳಾಗುವುದು ನನ್ನ ಕನಸು. ಈಗ ಏನು ಮಾಡಬಹುದು, ಸರ್?
ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಶೈಕ್ಷಣಿಕ ಕನಸುಗಳನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಭಾರತದ ಪ್ರಮುಖ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತಿವೆ. ವಿಶೇಷವಾಗಿ, ವಿದ್ಯಾರ್ಥಿನಿಯರಿಗೆ ರಿಯಾಯಿತಿ ದರದಲ್ಲಿ ಸಾಲವನ್ನು ನೀಡುವ ಯೋಜನೆಗಳೂ ಅನೇಕ ಬ್ಯಾಂಕ್‌ಗಳಲ್ಲಿದೆ. ಹಾಗೂ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ, ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಆ ಅನುಕೂಲಗಳನ್ನು ಪಡೆದುಕೊಳ್ಳಿ. ಮುಖ್ಯವಾಗಿ, ಎನ್‌ಇಇಟಿ(ನೀಟ್) ಪರೀಕ್ಷೆಯಲ್ಲಿ ಕನಿಷ್ಠ 600 (ಗರಿಷ್ಠ 720) ಅಂಕಗಳನ್ನು ಗಳಿಸಿ, ಸರ್ಕಾರಿ ಕೋಟಾದ ಸೀಟ್ ಪಡೆಯಲು ಪ್ರಯತ್ನಿಸಿ. ಶುಭಹಾರೈಕೆಗಳು.