ಇತ್ತೀಚೆಗೆ ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಂದ ಪ್ರಶ್ನೆ:
‘ಭವಿಷ್ಯದ ಅಂದರೆ ಈಗಷ್ಟೇ 9/10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ವೃತ್ತಿಯನ್ನು ಅನುಸರಿಸುವ ಕಾಲದಲ್ಲಿ (ಸುಮಾರು 8- 10 ವರ್ಷಗಳು) ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದಾದ ವೃತ್ತಿಗಳಾವುವು?’
ಇಂತಹ ಕುತೂಹಲಕಾರಿ ಮತ್ತು ವಿಮರ್ಶಾತ್ಮಕ ಪ್ರಶ್ನೆಗಳು, ಭವಿಷ್ಯದ ಕುರಿತ ಆರೋಗ್ಯಕರ ಚರ್ಚೆಗಳನ್ನು ಹುಟ್ಟುಹಾಕುತ್ತದೆ.
ತಂತ್ರಜ್ಞಾನದ ಅಭಿವೃದ್ಧಿ, ಆವಿಷ್ಕಾರಗಳು, ಗ್ರಾಹಕರ ಆದ್ಯತೆಗಳು, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನೀತಿಗಳಲ್ಲಿನ ಬದಲಾವಣೆಗಳು ಸೇರಿದಂತೆ ಉದ್ಯೋಗ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿರುವುದರಿAದ, ಭಾರತದಲ್ಲಿ ಭವಿಷ್ಯದಲ್ಲಿ ಯಾವ ವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ಖಚಿತವಾಗಿ ಊಹಿಸುವುದು ಕಷ್ಟ. ಆದಾಗ್ಯೂ, ಇನ್ನಿತರ ಕ್ಷೇತ್ರಗಳಿಗೆ ಹೋಲಿಸಿದರೆ, ಈ ಕ್ಷೇತ್ರಗಳಿಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದು.
ಸ್ವಾಸ್ಥ÷್ಯ ಮತ್ತು ಆರೋಗ್ಯ
ಹವಾಮಾನದಲ್ಲಿನ ಬದಲಾವಣೆಗಳು, ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಇಳಿಮುಖವಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳು, ನೈಸರ್ಗಿಕ ವಿಪತ್ತುಗಳು ಮತ್ತು ಪಿಡುಗುಗಳಿಂದ ಇನ್ನಷ್ಟು ಸಮಸ್ಯೆಗಳನ್ನೂ, ಸವಾಲುಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗಬಹುದು. ಇದಲ್ಲದೆ, ಜಗತ್ತಿನ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದು,್ದ ಈ ಎಲ್ಲಾ ಕಾರಣಗಳಿಂದ, ಆರೋಗ್ಯಕ್ಕೆ ಸಂಬAಧಿಸಿದ ಎಲ್ಲಾ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ನಿರೀಕ್ಷಿಸಬಹುದು. ಹಾಗೂ, ಆರೋಗ್ಯ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಮನ್ವಯತೆಯಿಂದ ನೂತನ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ವಿನೂತನ ಔಷಧಿಗಳ ಅನ್ವೇಷಣೆ, ಅನುವಂಶಿಕ ಮಾಹಿತಿಯಿಂದ ವೈಯಕ್ತೀಕರಿಸಿದ ಔಷಧಿಗಳು, ಟೆಲಿಮೆಡಿಸಿನ್, ರೋಗಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳು, ಜೀವನ ಶೈಲಿಯ ಸುಧಾರಣೆಗಳು ಇತ್ಯಾದಿ. ಹಾಗಾಗಿ, ವೈದ್ಯರು, ಮನೋವಿಜ್ಞಾನಿಗಳು, ತಂತ್ರಜ್ಞರು, ದಾದಿಯರು, ಔಷಧಿಕಾರರು, ಆರೋಗ್ಯ ನಿರ್ವಾಹಕರು ಮುಂತಾದ ವೃತ್ತಿಪರರಿಗೆ ಬೇಡಿಕೆ ಇರುತ್ತದೆ.
ಪ್ರಮುಖ ಕೌಶಲಗಳು: ವೃತ್ತಿಯ ಬಗ್ಗೆ ಒಲವು, ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಅನುಭೂತಿ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಇತ್ಯಾದಿ.
ಮಾಡಬಹುದಾದ ಕೋರ್ಸ್ಗಳು: ಎಂಬಿಬಿಎಸ್; ಬಿಡಿಎಸ್, ಬಿಎಎಂಎಸ್, ಬಿಎನ್‌ವೈಎಸ್,
ಬಿಫಾರ್ಮಾ, ಬಿ.ಎಸ್ಸಿ (ಮೆಡಿಕಲ್, ಆರೋಗ್ಯ ಮತ್ತು ಸ್ವಾಸ್ಥ÷್ಯ ಸಂಬAಧಿತ) ಇತ್ಯಾದಿ.
ವಿಜ್ಞಾನ/ತಂತ್ರಜ್ಞಾನ
ನಮ್ಮ ಅಭಿಪ್ರಾಯದಂತೆ ಎಂಜಿನಿಯರಿAಗ್ ಕ್ಷೇತ್ರದ ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೋಟಿಕ್, ನವೀಕರಿಸಬಹುದಾದ ಇಂಧನ, ಪರಿಸರ (ಎನ್ವಿರಾನ್‌ಮೆಂಟಲ್), ಬಯೋಮೆಡಿಕಲ್ ಮುಂತಾದ ವಿಭಾಗಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ನಿರೀಕ್ಷಿಸಬಹುದು. ಇದರರ್ಥ ಇನ್ನಿತರ ವಿಭಾಗಗಳಿಗೆ ಬೇಡಿಕೆ ಇರುವುದಿಲ್ಲ ಎಂದಲ್ಲ. ಎಂಜಿನಿಯರಿAಗ್ ಕ್ಷೇತ್ರದ ಎಲ್ಲಾ ವಿಭಾಗಗಳಿಗೆ ಬೇಡಿಕೆ ಇರುತ್ತದೆಯಾದರೂ, ಆಯಾ ವಿಭಾಗಗಳ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ವೃತ್ತಿಪರ ವ್ಯಕ್ತಿತ್ವ ಮತ್ತು ಕೌಶಲಗಳೊಂದಿಗೆ ಪದವೀಧರರಾಗಬೇಕು. ಹಾಗೂ, ಮೂಲ ಸೌಕರ್ಯಗಳು ಮತ್ತು ಕ್ಯಾಂಪಸ್ ನೇಮಕಾತಿಯಿರುವ ಎಂಜಿನಿಯರಿAಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದರಿಂದ, ಭವಿಷ್ಯವನ್ನು ರೂಪಿಸಿಕೊಳ್ಳುವುದು ಸುಲಭವಾಗುತ್ತದೆ. ಈಗ, ಎಂಜಿನಿಯರಿAಗ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಆಯ್ಕೆಗಳಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ವಿಭಾಗವನ್ನು ಆಯ್ಕೆ ಮಾಡುವುದು ಸೂಕ್ತ. ಹಾಗೂ, ವೃತ್ತಿಯೋಜನೆಯ ಗುರಿಯನ್ನು ಸಾಧಿಸಲು ಎಂಜಿನಿಯರಿAಗ್ ಅಲ್ಲದೆ ಬಿ.ಎಸ್ಸಿ ಕೋರ್ಸ್ ಮೂಲಕ ಪರ್ಯಾಯ ಮಾರ್ಗಗಳೂ ಇವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.
ವಿಜ್ಞಾನ/ತಂತ್ರಜ್ಞಾನ ಕುರಿತ ಸಂಶೋಧನೆ ಕ್ಷೇತ್ರಕ್ಕೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ನಾಲ್ಕು ವರ್ಷದ ಬಿ.ಎಸ್ಸಿ ಪದವಿಯ ನಂತರ ಪಿಎಚ್.ಡಿ ಮಾಡಬಹುದು.
ಪ್ರಮುಖ ಕೌಶಲಗಳು: ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿವರಗಳಿಗೆ ಗಮನ ಇತ್ಯಾದಿ.
ಮಾಡಬಹುದಾದ ಕೋರ್ಸ್ಗಳು: ಬಿಇ/ಬಿಟೆಕ್/ಬಿಸಿಎ/ಬಿ.ಎಸ್ಸಿ/ಎಂ.ಎಸ್ಸಿ/ಎAಸಿಎ/ ಎಂಇ/ಎAಟೆಕ್/ಎAಎಸ್/ಪಿಎಚ್.ಡಿ.
ಶಿಕ್ಷಣ
ದೇಶದಾದ್ಯಂತ ಈಗಲೇ ಸುಮಾರು ಒಂದು ದಶಲಕ್ಷ ಶಿಕ್ಷಕರ ಕೊರತೆಯಿದೆ ಎನ್ನಲಾಗುತ್ತದೆ. ಜೊತೆಗೆ, ಶಿಕ್ಷಣ ನೀತಿಯಲ್ಲಿನ ಅಮೂಲಾಗ್ರ ಬದಲಾವಣೆಗಳು, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಶಾಲೆಗಳಿಗೆ ಒಟ್ಟು ದಾಖಲಾತಿಯ ಅನುಪಾತ (ಜಿಇಆರ್-ಗ್ರಾಸ್ ಎನ್‌ರೋಲ್‌ಮೆಂಟ್ ರೇಷಿಯೊ) ಹೆಚ್ಚಾಗುವ ನಿರೀಕ್ಷೆಯಿಂದ ಶಿಕ್ಷಕರು, ಉಪನ್ಯಾಸಕರು, ತರಬೇತುದಾರರಿಗೆ ಬೇಡಿಕೆಯನ್ನು ನಿರೀಕ್ಷಿಸಬಹುದು.
ಪ್ರಮುಖ ಕೌಶಲಗಳು: ವಿಷಯದ ತಜ್ಞತೆ, ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ವೃತ್ತಿಯ ಬಗ್ಗೆ ಒಲವು.
ಮಾಡಬಹುದಾದ ಕೋರ್ಸ್ಗಳು: ಎಲ್ಲಾ ವಿಭಾಗಗಳ ಪದವಿ/ಸ್ನಾತಕೋತ್ತರ ಕೋರ್ಸ್ಗಳು, ಬಿಇಡಿ, ಬಿಇಡಿ (ಇಂಟಿಗ್ರೇಟೆಡ್), ಪಿಎಚ್.ಡಿ.
ಮಾರ್ಕೆಟಿಂಗ್ ( ರೀಟೇಲ್, ಇ-ಕಾಮರ್ಸ್ ಇತ್ಯಾದಿ)
ಚಿಲ್ಲರೆ ವ್ಯಾಪಾರ (ರೀಟೇಲ್) ಕ್ಷೇತ್ರ ದೇಶದ ಒಟ್ಟು ಉತ್ಪಾದನೆಯ (ಜಿಡಿಪಿ) ಶೇಕಡ 10ರಷ್ಟಿದ್ದು, ಒಟ್ಟಾರೆ ಶೇ 8ರಷ್ಟು ಉದ್ಯೋಗವನ್ನು ಸೃಷ್ಠಿಸಿದೆ. ಮುಂದಿನ ವರ್ಷಗಳಲ್ಲಿ, ಈ ಕ್ಷೇತ್ರಗಳಲ್ಲಿ ವ್ಯಾಪಕವಾದ, ತ್ವರಿತವಾದ ಪ್ರಗತಿಯನ್ನು ನಿರೀಕ್ಷಿಸಬಹುದು. ಮಾರ್ಕೆಟಿಂಗ್, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಸೇವೆಯಂತಹ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದು.
ಪ್ರಮುಖ ಕೌಶಲಗಳು: ವೃತ್ತಿಯ ಬಗ್ಗೆ ಒಲವು, ವ್ಯವಹಾರ ಕುಶಾಗ್ರಮತಿ, ಸಂವಹನ, ಕ್ಷಿಪ್ರ ಗ್ರಹಿಕೆ, ಸಮಯ ಪ್ರಜ್ಞೆ ಇತ್ಯಾದಿ.
ಮಾಡಬಹುದಾದ ಕೋರ್ಸ್ಗಳು: ಎಲ್ಲಾ ವಿಭಾಗಗಳ ಪದವಿ ಕೋರ್ಸ್ಗಳು, ಬಿಬಿಎ/ಎಂಬಿಎ, ಕೌಶಲಾಭಿವೃದ್ಧಿ ಕೋರ್ಸ್ಗಳು.
ಹಣಕಾಸು
ಹಣಕಾಸು ವಿಶ್ಲೇಷಕರು, ಅಕೌಂಟೆAಟ್‌ಗಳು ಮತ್ತು ಹೂಡಿಕೆ ಬ್ಯಾಂಕರ್‌ಗಳAತಹ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯೊಂದಿಗೆ, ಭಾರತದಲ್ಲಿ ಹಣಕಾಸು ಕ್ಷೇತ್ರದ ಬೆಳವಣಿಗೆಯ ಮುಂದುವರೆಯುವ ನಿರೀಕ್ಷೆಯಿದೆ.
ಪ್ರಮುಖ ಕೌಶಲಗಳು: ನಿಯಮಗಳು ಮತ್ತು ನಿಭಂದನೆಗಳ ಅರಿವು, ವಿಷಯದ ತಜ್ಞತೆ, ಯೋಜನಾ ಸಾಮರ್ಥ್ಯ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ, ಪ್ರಾಮಾಣಿಕತೆ ಇತ್ಯಾದಿ.
ಮಾಡಬಹುದಾದ ಕೋರ್ಸ್ಗಳು: ಬಿಕಾಂ, ಎಂಕಾA, ಸಿಎ, ಎಸಿಎಸ್, ಸಿಎಂಎ, ಎಂಬಿಎ ಇತ್ಯಾದಿ.
ಬದುಕಿನ ಕನಸುಗಳನ್ನು ಸಾಕಾರಗೊಳಿಸಲು, ಅಭಿರುಚಿ ಮತ್ತು ಆಸಕ್ತಿಯಂತೆ ವೃತ್ತಿಯೋಜನೆಯಂತಹ ಪೂರ್ವಸಿದ್ಧತೆಯನ್ನು ಮಾಡಲು ಮತ್ತು ಆತ್ಮವಿಶ್ವಾಸದಿಂದ ಅನುಷ್ಠಾನಗೊಳಿಸಲು, ಈ ಲೇಖನದಲ್ಲಿನ ಮಾಹಿತಿ ಉಪಯುಕ್ತವಾಗಬಹುದು.