1. ನಾನು ಎಂ.ಎಸ್ಸಿ (ಯೋಗ ವಿಜ್ಞಾನ) ಓದುತ್ತಿದ್ದು ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ಪ್ರತಿ ವೃತ್ತಿಯಲ್ಲಿನ ಕಾರ್ಯಕ್ಷಮತೆಗೆ ವಿಶಿಷ್ಟವಾದ ಜ್ಞಾನ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗೂ, ವೃತ್ತಿಯ ಗುಣಲಕ್ಷಣಗಳಿಗೆ ಅನುಗುಣವಾಗಿ ಸ್ವಾಭಾವಿಕ ಪ್ರತಿಭೆ, ಮನೋಧೋರಣೆ, ಮೌಲ್ಯಗಳು, ಆಸಕ್ತಿ, ಅಭಿರುಚಿ ಸೇರಿದಂತೆ ವ್ಯಕ್ತಿತ್ವವಿರಬೇಕು. ಹಾಗಾಗಿಯೇ, ಕೋರ್ಸ್ ಆಯ್ಕೆಗೆ ಮುನ್ನ ವೃತ್ತಿಯೋಜನೆ ಮಾಡುವುದು ಸೂಕ್ತ.
ಯೋಗ ವಿಜ್ಞಾನ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಎಂ.ಎಸ್ಸಿ (ಯೋಗ ವಿಜ್ಞಾನ) ದ ನಂತರ ಆಸ್ಪತ್ರೆಗಳು, ಪ್ರಕೃತಿ ಚಿಕಿತ್ಸಾಲಯಗಳು, ಶಾಲಾ ಕಾಲೇಜುಗಳು, ಹೋಟೆಲ್ಸ್ ಮತ್ತು ರೆಸಾರ್ಟ್ಸ್, ಅಪಾರ್ಟ್ಮೆಂಟ್ ಸಮುಚ್ಛಯಗಳು, ಆರೋಗ್ಯ ಮತ್ತು ಯೋಗ ಕೇಂದ್ರಗಳು, ಬೃಹತ್ ಸಂಸ್ಥೆಗಳು ಇತ್ಯಾದಿಗಳಲ್ಲಿ ಯೋಗ ಶಿಕ್ಷಕರು ಮತ್ತು ತರಬೇತಿದಾರರಾಗಬಹುದು. ಹಾಗೂ, ಯೋಗ ವಿಜ್ಞಾನದ ಜೊತೆಗೆ ಧ್ಯಾನ, ಆಧ್ಯಾತ್ಮ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಣೆ ಇತ್ಯಾದಿ ವಿಷಯಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿ ನಿಮ್ಮ ವೃತ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.
ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ತಜ್ಞತೆಗಾಗಿ ಮತ್ತು ಸಮಾಜದ ಒಳಿತಿಗಾಗಿ, ಸಂಶೋಧನೆಯ ಮೂಲಕ ಪಿ.ಎಚ್‌ಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/Mb4PKUb35_Q
2. ಸರ್, ನಾನು ಪಿಯುಸಿ ಓದುತ್ತಿದ್ದು ಪದವಿಯ ನಂತರ, ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಸೆಯಿದೆ. ವಿಜ್ಞಾನ ವಿಭಾಗದ ಯಾವ ವಿಷಯದಲ್ಲಿ ಪದವಿ ಮಾಡಿದರೆ ಸೂಕ್ತ?
ಯುಪಿಎಸ್‌ಸಿ ಮೂಲಕ ಒಬ್ಬ ದಕ್ಷ ಆಡಳಿತಗಾರರಾಗಲು ಇಂತದ್ದೇ ಪದವಿಯನ್ನು ಮಾಡಬೇಕು ಎನ್ನುವ ನಿಯಮವೇನಿಲ್ಲ. ಹಾಗಾಗಿ, ಯುಪಿಎಸ್‌ಸಿ ಪರೀಕ್ಷೆಯನ್ನು ವಿಜ್ಞಾನ ಸೇರಿದಂತೆ ಯಾವುದೇ ಪದವಿಯ ನಂತರ ಮಾಡಬಹುದು. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಿರುವ ವಿಷಯಗಳು ಮತ್ತು ಯುಪಿಎಸ್‌ಸಿ ನಂತರ ನೀವು ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ಅನುಸರಿಸಲು ಬಯಸುತ್ತೀರಿ ಎನ್ನುವುದರ ಆಧಾರದ ಮೇಲೆ ಪದವಿ ಕೋರ್ಸ್ ಆಯ್ಕೆ ಮಾಡಬಹುದು. ವಿಜ್ಞಾನ ವಿಷಯಗಳಾದ ಭೌತಶಾಸ್ತç, ರಸಾಯನ ಶಾಸ್ತç, ಸಸ್ಯಶಾಸ್ತç, ಪ್ರಾಣಿಶಾಸ್ತç, ಪಶುವೈದ್ಯ ವಿಜ್ಞಾನ, ಸಂಖ್ಯಾಶಾಸ್ತç ಇತ್ಯಾದಿಗಳನ್ನು ನಿಮ್ಮ ಆದ್ಯತೆಯಂತೆ ಪರಿಗಣಿಸಬಹುದು.
ಯುಪಿಎಸ್‌ಸಿ ಮಾಡಬೇಕೆನ್ನುವ ನಿಮ್ಮ ಬಯಕೆಯ ಅನುಸಾರ ವೃತ್ತಿಯೋಜನೆಯನ್ನು ಮಾಡಿ ಪದವಿ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
3. ನಾನೀಗ ದ್ವಿತೀಯ ಪಿಯುಸಿ ಮಾಡುತ್ತಿದ್ದು ಮುಂದೆ ಬಿಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುವುದೇ ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮಾಡುವುದೇ ಎಂಬ ಗೊಂದಲದಲ್ಲಿದ್ದೇನೆ. ನಿಮ್ಮ ಮಾರ್ಗದರ್ಶನ ನೀಡಿ.
ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ಗಳು ಬೇಡಿಕೆಯಲ್ಲಿರುವ ಕಂಪ್ಯೂಟರ್ ಸೈನ್ಸ್ (ಸಿಎಸ್) ಕ್ಷೇತ್ರಕ್ಕೆ ಸಂಬAಧಿಸಿದೆಯಾದರೂ, ಎಂಜಿನಿಯರಿAಗ್ (ಸಿಎಸ್) ಮತ್ತು ಬಿ.ಎಸ್ಸಿ (ಸಿಎಸ್) ಕೋರ್ಸ್ಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ.
ಎಂಜಿನಿಯರಿAಗ್ ಕೋರ್ಸ್ಗಳು ಕಂಪ್ಯೂಟರ್ ವಿಜ್ಞಾನದ ತಾಂತ್ರಿಕತೆಯತ್ತ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಹಾಗೂ, ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಮೂಲ ಎಂಜಿನಿಯರಿAಗ್ ಕೋರ್ಸ್ಗಳ ವಿಷಯಸೂಚಿಯಿರುತ್ತದೆ. ಮೂರನೇ ಸೆಮಿಸ್ಟರ್‌ನಿಂದ ನೀವು ಆಯ್ಕೆ ಮಾಡಿರುವ ವಿಷಯದ ಕಲಿಕೆ ಪ್ರಾರಂಭವಾಗುತ್ತದೆ.
ಬಿ.ಎಸ್ಸಿ (ಸಿಎಸ್) ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಈ ವಿಷಯಗಳಲ್ಲಿ ಹೆಚ್ಚಿನ ತಜ್ಞತೆಗಾಗಿ ಅಥವಾ ಸಂಶೋಧನೆ ಮಾಡುವ ಆಸಕ್ತಿಯಿದ್ದರೆ, ನಾಲ್ಕು ವರ್ಷದ ಬಿ.ಎಸ್ಸಿ ನಂತರ ನೇರವಾಗಿ ಪಿ.ಎಚ್‌ಡಿ ಮಾಡಬಹದು.
ಪ್ರಮುಖವಾಗಿ ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
4. ನಾನು ಈ ವರ್ಷ ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯುತ್ತಿದ್ದು, ಮೆಡಿಕಲ್ ಮತ್ತು ಎಂಜಿನಿಯರಿAಗ್ ಎರಡೂ ಕೋರ್ಸ್ಗಳಿಗೆ ಪ್ರವೇಶ ಸಿಕ್ಕಿದರೆ, ಮುಂದಿನ ನಿರ್ಧಾರ ಮಾಡುವುದು ಹೇಗೆ? ದಯವಿಟ್ಟು ತಿಳಿಸಿ.
ಮೆಡಿಕಲ್ ಮತ್ತು ಎಂಜಿನಿಯರಿAಗ್ ಎರಡೂ ಕ್ಷೇತ್ರಗಳಿಗೆ ಭವಿಷ್ಯದಲ್ಲೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಹಾಗಾಗಿ, ಈ ಎರಡೂ ಕ್ಷೇತ್ರಗಳು ಪಿಯುಸಿ ನಂತರ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವಿಲ್ಲ.
ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ನಿಮ್ಮಲ್ಲಿ ಸೇವಾ ಮನೋಭಾವ, ಅನುಭೂತಿ, ಸಮರ್ಪಣಾ ಮನೋಭಾವ, ನಿರಂತರ ಪರಿಶ್ರಮ, ಜ್ಞಾಪಕ ಶಕ್ತಿ, ತಾಳ್ಮೆಯಿರಬೇಕು.
ಎಂಜಿನಿಯರಿAಗ್ ಕ್ಷೇತ್ರದಲ್ಲಿ ಯಶಸ್ಸಿಗಾಗಿ ತಾರ್ಕಿಕ ಪ್ರತಿಪಾದನಾ ಕೌಶಲ, ಗಣಿತದಲ್ಲಿ ಸ್ವಾಭಾವಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿವರಗಳಿಗೆ ಗಮನ ಇತ್ಯಾದಿ ಕೌಶಲಗಳಿರಬೇಕು.
ಹಾಗಾಗಿ, ನಿಮ್ಮ ಆಕಾಂಕ್ಷೆ, ಆಸಕ್ತಿ, ಅಭಿರುಚಿ, ಕೌಶಲಗಳ ಮೌಲ್ಯಮಾಪನ ಮಾಡಿ ನಿರ್ಧಾರ ಮಾಡುವುದು ಸೂಕ್ತ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/oyUMPrEKPPU
5. ನಾನು ಎಂ.ಎಸ್ಸಿ (ಗಣಿತ) ಮುಗಿಸಿದ್ದೇನೆ. ಶಿಕ್ಷಕ ವೃತ್ತಿಯಲ್ಲದೆ ಬೇರೆ ಯಾವ ವೃತ್ತಿಯ ಅವಕಾಶಗಳಿವೆ? ವೃತ್ತಿ ಸಂಬAಧಿತ ಯಾವ ಕೋರ್ಸ್ಗಳನ್ನು ಮಾಡಬಹುದು?
ಎಂ.ಎಸ್ಸಿ (ಗಣಿತ) ನಂತರ ಖಾಸಗಿ ಕ್ಷೇತ್ರದ ಬ್ಯಾಂಕಿAಗ್, ಐಟಿ, ಕಂಪ್ಯೂಟಿAಗ್, ಡೇಟಾಬೇಸ್ ಮ್ಯಾನೇಜ್‌ಮೆಂಟ್, ಅನಲಿಟಿಕ್ಸ್, ರಿಸರ್ಚ್, ಇನ್ವೆಸ್ಟ್ಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೀವು ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಈ ಕ್ಷೇತ್ರಗಳಲ್ಲಿ, ಪ್ರತಿ ಉದ್ಯೋಗಿಗೆ ಅನ್ವಯವಾಗುವ ಉದ್ಯೋಗದ ವಿವರಗಳಿಗೆ (ಕರ್ತವ್ಯಗಳು, ಹೊಣೆಗಾರಿಕೆಗಳು, ಚಟುವಟಿಕೆಗಳು ಇತ್ಯಾದಿ) ಅನುಗುಣವಾಗಿ ಜ್ಞಾನ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ವಿಷಯದ ಜ್ಞಾನ ಮತ್ತು ವೃತ್ತಿ ಸಂಬAಧಿತ ಕೌಶಲಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು. ಸಾಫ್ಟ್ವೇರ್ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್ಗಳಾದ ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿಗಳನ್ನು ಮಾಡಬಹುದು. ಹಾಗೂ, ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು.
ಹಾಗಾಗಿ, ಎಂ.ಎಸ್ಸಿ (ಗಣಿತ) ನಂತರ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ಪ್ರಮುಖವಾಗಿ ನಿಮ್ಮ ಆಕಾಂಕ್ಷೆ, ಆಸಕ್ತಿ, ಅಭಿರುಚಿ, ಕೌಶಲಗಳ ಮೌಲ್ಯಮಾಪನ ಮಾಡಿ, ಯಾವ ವೃತ್ತಿ ನಿಮಗೆ ಸೂಕ್ತವೆಂದು ನಿರ್ಧರಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
6. ನಾನು ಪಿಯುಸಿ (ವಿಜ್ಞಾನ ಓದುತ್ತಿದ್ದು) ಮುಂದೆ ಮೆಡಿಕಲ್ ಹಾಗೂ ಎಂಜಿನಿಯರಿAಗ್ ಎರಡರಲ್ಲೂ ಆಸಕ್ತಿಯಿಲ್ಲ. ಹಾಗಾಗಿ, ಮುಂದೇನು ಮಾಡಬಹುದು?
ಪಿಯುಸಿ (ವಿಜ್ಞಾನ) ನಂತರ ಅಪಾರವಾದ ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಐಟಿ, ವಿಜ್ಞಾನ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಬಯೋಟೆಕ್ನಾಲಜಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ, ಫೊರೆನ್ಸಿಕ್, ಫಾರೆಸ್ಟಿç ಸೇರಿದಂತೆ ಹಲವಾರು ಆಯ್ಕೆಗಳು), ಬಿ.ಫಾರ್ಮಾ, ಬಿಕಾಂ, ಬಿಕಾಂ (ಹಾನರ್ಸ್), ಬಿಎ, ಬಿಎ (ಹಾನರ್ಸ್) ಬಿಸಿಎ, ಬಿಬಿಎ, ಬಿ.ಡಿಸೈನ್, ಸಿಎ, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು.
ಈ ಕೋರ್ಸ್ಗಳಿಗೆ ಸಂಬAಧಪಟ್ಟ ವೃತ್ತಿಯ ಯಶಸ್ಸಿಗೆ ಬೇಕಾಗುವ ಆಸಕ್ತಿ, ಕೌಶಲಗಳು ವಿಭಿನ್ನವಾಗಿರುವುದು ಸಹಜ. ಹಾಗಾಗಿ, ನಿಮ್ಮ ಆಕಾಂಕ್ಷೆ, ಆಸಕ್ತಿ, ಅಭಿರುಚಿ, ಕೌಶಲಗಳ ಮೌಲ್ಯಮಾಪನ ಮಾಡಿ, ಯಾವ ವೃತ್ತಿ ನಿಮಗೆ ಸೂಕ್ತವೆಂದು ನಿರ್ಧರಿಸಿ, ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
7. ಸರ್, ನಾನೀಗ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಹಾಗೂ, ಎಸಿಎಸ್ (ಎಕ್ಸಿಕ್ಯೂಟಿವ್) ಮಾಡುತ್ತಿದ್ದೇನೆ. ಆದರೆ, ಈ ಎರಡೂ ಕೋರ್ಸ್ಗಳ ಪರೀಕ್ಷೆ ಸಮೀಪಿಸುತ್ತಿದ್ದು, ಇವೆರಡರ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದೆ, ಕಷ್ಟವಾಗುತ್ತಿದೆ. ಹಾಗೂ, ಎಸಿಎಸ್ ಕೋರ್ಸ್ ಜೊತೆಗೆ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದೇ?
ಎರಡು ಪ್ರಮುಖ ಕೋರ್ಸ್ಗಳನ್ನು ಒಟ್ಟಿಗೆ ಮಾಡುವುದು ಸುಲಭವಲ್ಲ, ಹಾಗಾಗಿ, ನಿಮ್ಮ ಕಷ್ಟ ಅರ್ಥವಾಗುತ್ತದೆ. ನಮ್ಮ ಅಭಿಪ್ರಾಯದಂತೆ, ಏಕಾಗ್ರತೆ ಮತ್ತು ಪರಿಶ್ರಮದಿಂದ, ಬಿಕಾಂ ಪರೀಕ್ಷೆಯನ್ನು ಬರುವ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಮುಗಿಸಿ, ಈ ವರ್ಷದ ಡಿಸೆಂಬರ್‌ನಲ್ಲಿ ಎಕ್ಸಿಕ್ಯೂಟಿವ್ ಕಂಪನಿ ಸೆಕ್ರೆಟರಿ ಕೋರ್ಸ್ (ಎಸಿಎಸ್) ಪರೀಕ್ಷೆಯನ್ನು ಬರೆಯುವುದು ಸೂಕ್ತ. ಎಸಿಎಸ್ ಕೋರ್ಸ್ ಜೊತೆಗೆ ಎಲ್‌ಎಲ್‌ಬಿ ಕೋರ್ಸ್ ಮಾಡುವುದರಿಂದ ಕಂಪನಿ ಸೆಕ್ರೆಟರಿ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ಆದರೆ, ಬಾರ್ ಕೌಂಸಿಲ್ ಮಾನ್ಯತೆಯಿರುವ ಎಲ್‌ಎಲ್‌ಬಿ (ರೆಗ್ಯುಲರ್) ಕೋರ್ಸ್ ಮಾಡಬೇಕೆನ್ನುವುದು ನಿಮ್ಮ ಗಮನದಲ್ಲಿರಲಿ.