ಬೂಡಪೆಸ್ಟ್:ಐತಿಹಾಸಿಕ ಪರಂಪರೆಯ ಸುಂದರ ನಗರ

ಇತ್ತೀಚಿನ ಪೂರ್ವಯೂರೋಪ್ ರಾಷ್ಟ್ರಗಳ ಪ್ರವಾಸದಲ್ಲಿಹಲವಾರುದೃಷ್ಟಿಯಿಂದಅತ್ಯಂತಆಕರ್ಷಣೀಯವಾಗಿದ್ದು, ನಮ್ಮೆಲ್ಲರ ಗಮನಸೆಳೆದ ನಗರವೇಹಂಗೇರಿದೇಶದರಾಜಧಾನಿ ಬೂಡಪೆಸ್ಟ್.

ಯುನೆಸ್ಕೊ ಮಾನ್ಯತೆ ಪಡೆದವಿಶ್ವ ಪರಂಪರೆಯನ್ನು ಪ್ರತಿಬಿಂಬಿಸುವ ಸ್ಮಾರಕಗಳು, ಅರಮನೆ, ಪ್ರಾಚೀನಕಟ್ಟಡಗಳು ಸೇರಿದಂತೆಅನೇಕ ಕುತೂಹಲಕಾರಿ ಪ್ರವಾಸೀ ತಾಣಗಳಿರುವ ಬೂಡಪೆಸ್ಟ್,ಪೂರ್ವಯೂರೋಪಿನ ಪ್ಯಾರಿಸ್ ಎಂದೇ ಪ್ರಸಿದ್ಧವಾಗಿದೆ.

ಯೂರೋಪಿನ ಉದ್ದಕ್ಕೂ ಹರಿಯುವಡಾನ್ಯೂಬ್ ನದಿ ಸಹಜವಾಗಿಉತ್ತರ-ದಕ್ಷಿಣಕ್ಕೆವಿಭಜಿಸಿರುವ ನಗರಗಳೇ ಬೂಡ ಮತ್ತು ಪೆಸ್ಟ್.ನದಿಯ ಪಶ್ಚಿಮ ದಡದಲ್ಲಿ, ಬೆಟ್ಟಗುಡ್ಡಗಳ ನಡುವೆ ಬೂಡ ಪ್ರದೇಶವಾದರೆ, ಪೂರ್ವ ದಿಕ್ಕಿನಲ್ಲಿ ಬೆಳೆದಿರುವ ನಗರ ಪೆಸ್ಟ್.ಈ ಪ್ರದೇಶದಇತಿಹಾಸ ಸುಮಾರು3000 ವರ್ಷಗಳಷ್ಟು ಪುರಾತನವಾದರೂ, ಇವೆರಡೂ ನಗರಗಳ ಒಂದುಗೂಡುವಿಕೆಯಾದದ್ದು 1873ರಲ್ಲಿ.

ಈಗ ಬೂಡಪೆಸ್ಟ್‍ಜಗತ್ತಿನ 25ನೇ ಅತಿಹೆಚ್ಚುಅಂದರೆ 4.4 ದಶಲಕ್ಷ ಪ್ರವಾಸಿಗರು ಪ್ರತಿ ವರ್ಷ ಭೇಟಿಕೊಡುವ ನಗರ ಮತ್ತುಯೂರೋಪ್‍ನ 6ನೇ ಅತ್ಯಂತಜನಪ್ರಿಯ ನಗರ.

ಹೀರೋಸ್ ಸ್ಕೇರ್

ಬೂಡಪೆಸ್ಟ್‍ನಲ್ಲಿ ಚಿತ್ರಿಸಿದ ಅನೇಕ ಬಾಲಿವುಡ್ ಚಿತ್ರಗಳ ಕುರಿತುಬಸ್ಸಿನಲ್ಲಿನ ನಮ್ಮ ಹರಟೆಯ ಸುಳಿವು ಗೈಡ್‍ಗೆತಿಳಿಯಿತು. ಹಾಗಾಗಿ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ ಶುರುವಾದದ್ದು ಹೀರೋಸ್ ಸ್ಕೇರ್‍ನಿಂದ!1900ರಲ್ಲಿ ನಿರ್ಮಿಸಲಾದ ಈ ರಾಷ್ಟ್ರೀಯ ಸ್ಮಾರಕ ವಿಶಾಲವಾಗಿಯೂ, ಆಕರ್ಷಣೀಯವಾಗಿಯೂಇದೆ.ನಗರದ ಅನೇಕ ಮುಖ್ಯ ಉತ್ಸವಗಳ ವೇದಿಕೆ ಸಜ್ಜಾಗುವುದುಇಲ್ಲೇ.ಇದರಎಡ ಭಾಗಕ್ಕೆ ಕಲಾವಸ್ತು ಸಂಗ್ರಹಾಲಯವೂ [Museum of Fine Arts] ಬಲ ಭಾಗಕ್ಕೆ ಕಲಾ ಅರಮನೆಯೂ [Art Palace] ಇದೆ.

Thermal bath

ಹೀರೋಸ್ ಸ್ಕೇರ್ ಪಕ್ಕದಲ್ಲೇಇರುವ ವಿಶೇಷವಾದಆಕರ್ಷಣೆ ಬಿಸಿನೀರಿನ ಸ್ನಾನದ ಕೊಳಗಳು. ಇವುಗಳಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಶೆಚೆನ್ವಿ ಕೊಳಗಳಿಗೆ ನೂರು ವರ್ಷಗಳ ಇತಿಹಾಸವಿದೆ. ಹಾಂ! ಇದು ಸಾಮಾನ್ಯವಾದ ಬಿಸಿನೀರಿನ ಕೊಳಗಳಷ್ಟೇ ಅಲ್ಲ! ಇಲ್ಲಿನನೀರಿನಲ್ಲಿ ನೈಸರ್ಗಿಕಗುಣಪಡಿಸುವ ಶಕ್ತಿಯಿದೆಯೆನ್ನುತ್ತಾರೆ. ಈ ಆವರಣದಲ್ಲಿ ಮಸಾಜ್, ಸೌನ, ಜಾಕುಜಿû, ವರ್ಲ್‍ಪೂಲ್, ಜಿಮ್‍ಗಳಂತಹ ಆಧುನಿಕ ವ್ಯವಸ್ಥೆಗಳಿದ್ದು, ಸ್ಥಳೀಯರಿಗೆ ಇದೊಂದು ಸೌಂದರ್ಯವರ್ಧಕ ಮತ್ತುಆರಾಮದಾಯಕಆರೋಗ್ಯಧಾಮವೂ ಹೌದು. ಪ್ರವಾಸಿಗರೂ ಸಹ ನೈಸರ್ಗಿಕಬಿಸಿನೀರಿನ ಸ್ನಾನದಆನಂದವನ್ನುಅನುಭವಿಸಬಹುದು.

ರಾಯಲ್‍ಕ್ಯಾಸೆಲ್:ಡಾನ್ಯೂಬ್ ನದಿಯದಡದಲ್ಲಿ, ತನ್ನಅಗಾಧವಾದ ಪ್ರಭಾವವನ್ನು ಬೀರುತ್ತಿರುವಯುನೆಸ್ಕೊ ಮಾನ್ಯತೆ ಪಡೆದಿರುವರಾಯಲ್‍ಕ್ಯಾಸೆಲ್‍ಸಂಕೀರ್ಣ,ಬೂಡಪೆಸ್ಟ್‍ನ ಪ್ರಮುಖಆಕರ್ಷಣೆ.

ಯೂರೋಪಿನ ಸಾಂಸ್ಕೃತಿಕ ಮತ್ತುಐತಿಹಾಸಿಕ ನಗರವೆಂದೂ ಹೆಸರುವಾಸಿಯಾಗಿರುವ ಬೂಡಪೆಸ್ಟ್‍ನಖ್ಯಾತಿಗೆ ಮೆರುಗುಕೊಡುವಂತಿರುವರಾಯಲ್‍ಪ್ಯಾಲೇಸಿನ ವಾಸ್ತುಶಿಲ್ಪವನ್ನೂ, ಅದರ ಭವ್ಯತೆಯನ್ನೂ, ಅಚ್ಚುಕಟ್ಟಾಗಿರುವಸಂಕೀರ್ಣದನಿರ್ವಹಣೆಯನ್ನೂ, ಅದೆಷ್ಟುಬಣ್ಣಿಸಿದರೂ ಸಾಲದು. 13ನೇ ಶತಮಾನದಲ್ಲಿಮೂಲ ಪ್ಯಾಲೇಸ್ ನಿರ್ಮಿತವಾದರೂ, ನಿರಂತರವಾಗಿ ನಡೆಯುತ್ತಿದ್ದ ದಾಳಿಗಳಿಂದಲೂ, ಯುದ್ಧಗಳಿಂದಲೂನಾಶವಾಗುತ್ತಿತ್ತು; ಈಗಿರುವ ಪ್ಯಾಲೇಸ್‍ಎರಡನೇ ಮಹಾಯುದ್ಧದ ನಂತರ ಪುನ:ನಿರ್ಮಾಣವಾದದ್ದು.ಪಕ್ಕದಲ್ಲಿರುವಮಥಿಯಾಸ್‍ಚರ್ಚ್‍ಇನ್ನೊಂದುಆಕರ್ಷಣೆ.

ಹಾಂ! ಚೈನ್ ಬ್ರಿಡ್ಜಿನಿಂದ ಪ್ಯಾಲೇಸಿಗೆ ಹೋಗಲು ಕೇಬಲ್ ರೈಲ್[ಈuಟಿiಛಿuಟಚಿಡಿ ಖಚಿiಟತಿಚಿಥಿ] ವ್ಯವಸ್ಥೆಯಿದೆ.

ಡಾನ್ಯೂಬ್‍ಕ್ರೂಸ್

ಒಂದುಗಂಟೆಯಧ್ವನಿ ಮತ್ತುದೃಷ್ಟಿ [Souಟಿಜ & ಐighಣ] ಪ್ರದರ್ಶನದೊಂದಿಗೆ ಶುರುವಾಗುವ ಈ ಕ್ರೂಸ್, ಪ್ರವಾಸಿಗರಿಗೆ ರಾಜ ಮಹಾರಾಜರ, ಕವಿಗಳ, ಸಂಶೋಧಕರ ಸ್ವಾರಸ್ಯಕಥೆಗಳನ್ನು ವಿವರಿಸುತ್ತಾಇಲ್ಲಿನಭವ್ಯಇತಿಹಾಸದ ಪರಿಚಯ ಮಾಡಿಸುತ್ತದೆ. ಎರಡೂಕಡೆಯಪ್ರಾಚೀನಕಟ್ಟಡಗಳ ವಿದ್ಯುತ್ ದೀಪಾಲಂಕಾರ, ನದಿಯನೀರಿನಲ್ಲಿ ಪ್ರತಿಬಿಂಬದದೃಶ್ಯ, ಬೂಡಪೆಸ್ಟ್‍ನ ಪ್ರಾಕೃತಿಕ ಸೌಂದರ್ಯ ಮತ್ತು ವೈಶಿಷ್ಟ್ಯತೆಯನ್ನು ಎತ್ತಿಹಿಡಿಯುತ್ತದೆ.

ರೂಯಿನ್ಡ್ ಪಬ್ಸ್

ಒಂದುಅದ್ಭುತವಾದಆಶ್ಚರ್ಯ! ಇನ್ನಿತರಯೂರೋಪ್ ರಾಷ್ಟ್ರಗಳಂತೆ ಇಲ್ಲಿನಬೆಲೆಗಳುಅಷ್ಟೊಂದುದಂಗುಬಡಿಸುವುದಿಲ್ಲ.ನಮ್ಮರೂಪಾಯಿಗೆ ಮರ್ಯಾದೆಕೊಡುವ ಕೆಲವೇ ದೇಶಗಳಲ್ಲಿ ಇದೂಒಂದು.ಈ ದೇಶದಕರೆನ್ಸಿಯನ್ನು ¥sóÉೂೀರಿಂಟ್ [ಈoಡಿiಟಿಣ: ಊUಈ]ಎನ್ನುತ್ತಾರೆ;ಒಂದು ಫೋರಿಂಟಿಗೆ ನಾಲ್ಕು ರೂಪಾಯಿ!!!!

ಬೀರ್ ಪ್ರಿಯರೇ ಬನ್ನಿ! ಈ ನಗರದಲ್ಲಿ ಬೀರ್‍ಅತಿ ಅಗ್ಗ! ನಮ್ಮಐವತ್ತುರೂಪಾಯಿಗೆಇಲ್ಲಿಬೀರ್ ಸೇವಿಸಬಹುದು; ಆದರೆಕಾಫಿ/ಟೀ ಮಾತ್ರ ಬೀರ್‍ಗಿಂತದುಬಾರಿ!

ಬೆಂಗಳೂರು ಪಬ್ ಸಿಟಿಯೆಂದು ಹೆಸರುವಾಸಿ.ಆದರೆ, ಬೂಡಪೆಸ್ಟ್‍ನಲ್ಲಿರುವರೂಯಿನ್ಡ್ ಪಬ್‍ಗಳ [ಖuiಟಿeಜ Pubs]ವೈಶಿಷ್ಟ್ಯದ ಪರಿಕಲ್ಪನೆಯೇ ಬೇರೆ!ಗೈಡ್‍ನಒತ್ತಾಯ ಹಾಗೂ ಕುತೂಹಲದಿಂದ ಕೆಲವು ಪಬ್‍ಗಳನ್ನು ವೀಕ್ಷಿಸಲು ತೀರ್ಮಾನಿಸಿದೆವು.

ಇಲ್ಲಿನ ಪಬ್‍ಗಳಿಗೂ ಮತ್ತುಜಗತ್ತಿನಎರಡನೇ ಮಹಾಯುದ್ಧಕ್ಕೂ ನೇರ ಸಂಬಂಧವಿದೆ.ಆ ಸಮಯದಲ್ಲಿ ಯಹೂದಿಗಳ ಮೇಲೆ ನಡೆದಕ್ರೌರ್ಯ ಮತ್ತು ಸಾಮೂಹಿಕ ಹತ್ಯಾಕಾಂಡದ ಭೀಕರ ಮತ್ತುಜೀವಂತಚಿತ್ರಣವಿಲ್ಲಿದೆ. ನಗರದ ಮಧ್ಯಭಾಗದಲ್ಲಿರುವ ಯಹೂದಿಗಳೇ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶವನ್ನುಯುದ್ಧದಲ್ಲಿಧ್ವಂಸ ಮಾಡಲಾಗಿತ್ತು; ಸುಮಾರು 60%ಯಹೂದಿಗಳ ಹತ್ಯಾಕಾಂಡವಾಗಿದ್ದಈ ಪ್ರದೇಶದಬೀದಿಗಳಲ್ಲಿರುವಕೆಲವುಮನೆಗಳನ್ನು ಪಬ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಹೊರಗಿನಿಂದ ಸಾಮಾನ್ಯವಾಗಿಕಾಣುವಈ ನೆರೆಹೊರೆಯಲ್ಲಿಯಾವುದೇ ಚಿಹ್ನೆಗಳಿಲ್ಲ; ಗದ್ದಲವಿಲ್ಲ. 2001ರಲ್ಲಿ ಸ್ಜಿಂಪ್ಲ ಕರ್ಟ್ ಹೆಸರಿನಲ್ಲಿಮೊದಲ ರೂಯಿನ್ಡ್ ಪಬ್ ಶುರುವಾಗಿ, ಕಾಲಕ್ರಮೇಣ ಈ ವಿನೂತನ ಪರಿಕಲ್ಪನೆಜನಪ್ರಿಯವಾಗಿ, ಇನ್ನಿತರ ಪಬ್‍ಗಳಿಗೆ ಸ್ಪೂರ್ತಿಯಾಗಿದೆ. ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ಓಡಾಡುತ್ತ, ಅಲ್ಲಿನ ಪರಿಸರವನ್ನು ಗಮನಿಸಲು ನಾವೂ ಒಂದೆರಡು ಪಬ್‍ಗೆ ಹೋದೆವು.ಮಸಕು ಮಸಕಾಗಿದ್ದ ದೀಪಗಳ ಮಧ್ಯೆ, ಗತಕಾಲವನ್ನು ನೆನಪಿಸುವ ಪೀಠೋಪಕರಣದಲ್ಲಿ ಕುಳಿತಿದ್ದ ಎಲ್ಲ ವಯಸ್ಸಿನ ಜನರು ಬೀರ್ ಸೇವಿಸುತ್ತಾ, ಆಗಾಗ್ಗೆ ಪರಸ್ಪರ ಮುತ್ತಿಡುತ್ತಿದ್ದದ್ದುಕಂಡುಬಂತು.ಆದರೆ,ಇಲ್ಲಿನ ಪರಿಸರ, ವಾತಾವರಣನಮಗೆ ಉತ್ಸಾಹತರಲಿಲ್ಲ.ಹಳೆಯ ಗೋಡೆಗಳ ಗೀಚುಬರಹಗಳನ್ನು ವೀಕ್ಷಿಸುತ್ತಾ, ಆ ಮಹಾ ಯುದ್ಧದ ಘಟನೆಗಳನ್ನು ಕಲ್ಪಿಸಿಕೊಳ್ಳುತ್ತಾ, ಯಹೂದಿ ಜನಸಮೂಹದ ಮೇಲೆ ನಡೆದಿರಬಹುದಾದಘೋರದೌರ್ಜನ್ಯಗಳು ನೆನಪಿಗೆ ಬಂತು.ಮಾನವಕುಲದ ಮೇಲೆ ನಡೆದಆ ಘಟನೆಗಳಕರಾಳ ಛಾಯೆಯಲ್ಲಿಸ್ಮಾರಕವಾಗಬೇಕಿದ್ದ ಸ್ಥಳಗಳು,ಇಂದು ಮೋಜಿಗೆವೇದಿಕೆಯಾಗಿರುವುದೊಂದುವಿಪರ್ಯಾಸಮತ್ತು ದುರ್ಧೈವವೆನಿಸಿತು!

ಬೂಡಪೆಸ್ಟ್ ಮತ್ತುಚಿತ್ರರಂಗ

ಜಗತ್ತಿನಲ್ಲಿ ಬಾಲಿವುಡ್ ಸೇರಿದಂತೆವರ್ಷದಲ್ಲಿಸುಮಾರು 5 ಸಾವಿರ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ಹೊರಾಂಗಣಚಿತ್ರೀಕರಣಕ್ಕೆ ಅನೇಕ ಸ್ಥಳಗಳು ಜನಪ್ರಿಯವಾಗಿದ್ದು, ಕಾಲಕ್ರಮೇಣಅದು ಪ್ರವಾಸೋಧ್ಯಮಕ್ಕೂಉತ್ತೇಜಿನ ನೀಡಿದೆ. ಭಾರತೀಯರಿಗೆ ಸ್ವಿಟ್ಜಲ್ರ್ಯಾಂಡ್‍ನ ಆಕರ್ಷಣೆಗೆ ಬಾಲಿವುಡ್ ಸಹಾ ಕಾರಣವೆಂದರೆತಪ್ಪಾಗಲಾರದು.ಕೆ.ಆರ್.ಎಸ್.,ಊಟಿ, ಕಾಶ್ಮೀರ್ ಹೊರಾಂಗಣಚಿತ್ರೀಕರಣಕ್ಕೆಜನಪ್ರಿಯವಾಗಿದ್ದ ಕಾಲವೊಂದಿತ್ತು. ಕಾಶ್ಮೀರ್‍ನಲ್ಲಿ ಚಿತ್ರೀಕರಣಅಸಾಧ್ಯವಾದಾಗ ಪ್ರಾಕೃತಿಕವಾಗಿ ಹತ್ತಿರವಾದ ಸ್ವಿಟ್ಜಲ್ರ್ಯಾಂಡ್‍ನ ಮೊರೆ ಹೋದದ್ದು ನಿಜ. ಕಾಲಕ್ರಮೇಣ ವೈಶಿಷ್ಟ್ಯತೆಯ ಅಗತ್ಯ ಬಂದಾಗಯೂರೋಪಿನ ಇನ್ನಿತರ ದೇಶಗಳು ಸಹಾ ಜನಪ್ರಿಯವಾಗತೊಡಗಿದವು.

ಕಳೆದ ಎರಡು ದಶಕಗಳಲ್ಲಿ ಚಿತ್ರೀಕರಣಕ್ಕೇಜನಪ್ರಿಯವಾದ ನಗರಗಳಲ್ಲಿ ಪ್ರಮುಖವಾದದ್ದು ಬೂಡಪೆಸ್ಟ್.ಅಂದಾಜಿನ ಪ್ರಕಾರನೂರು ಚಿತ್ರಗಳನ್ನು ಇಲ್ಲಿಚಿತ್ರೀಕರಿಸಲಾಗಿದೆ.ಇದರಲ್ಲಿ ಹಿಂದಿ ಚಿತ್ರಗಳಾದ ಹಮ್ ದಿಲ್ ದೆ ಚುಕೆ ಸನಮ್ [1999], ಅಕ್ಸ್ [2001] ಮತ್ತು ¥sóÉೂೀರ್ಸ್ 2 [2016], ತಯಾರಿಕೆಯಕೊನೆಯ ಹಂತದಲ್ಲಿರುವಇಂಗ್ಲೀಷ್ ಚಿತ್ರಗಳಾದಃಟಚಿಜe ಖuಟಿಟಿeಡಿ 2049, ಖeಜ Sಠಿಚಿಡಿಡಿoತಿ, ಸೇರಿವೆ. ಜೊತೆಗೆಹಲವಾರು ಚಿತ್ರಗಳಲ್ಲಿ ಬೂಡಪೆಸ್ಟ್ ನಗರವನ್ನು ಬೇರೆ ನಗರಗಳಂತೆಯೂ [ಲಂಡನ್, ರೋಮ್, ವಿಯೆನ್ನ, ಮಾಸ್ಕೊಇತ್ಯಾದಿ] ಬಿಂಬಿಸಲಾಗಿದೆ. ಅನೇಕ ಟೆಲಿವಿಷನ್ ಸೀರಿಯಲ್‍ಗಳಿಗೂ ಬೂಡಪೆಸ್ಟ್‍ಜನಪ್ರಿಯತಾಣ; ಅದರಲ್ಲೂ, 16ನೇ ಶತಮಾನದಚೈನ್ ಬ್ರಿಡ್ಜ್, ಈ ನಗರದ ಹೆಗ್ಗುರುತು ಮತ್ತುಚಿತ್ರೀಕರಣಕ್ಕೆಜನಪ್ರಿಯ.

“ಹಾಲಿವುಡ್‍ನ ಅನೇಕ ಚಿತ್ರಗಳಿಗೆ ಬೂಡಪೆಸ್ಟ್‍ನಲ್ಲಿಚಿತ್ರೀಕರಣ ನಡೆದಿದ್ದು, ಇದುಚಿತ್ರರಂಗದಅಭಿವೃದ್ಧಿಗೆ ಪ್ರಚೋದನೆ ನೀಡಿದೆಯಷ್ಟೇಅಲ್ಲ, ಹಂಗೇರಿಯಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೂ ಸಹಾಯವಾಗಿದೆ” ಎಂದುಜನಪ್ರಿಯ ಪತ್ರಿಕೆUSಂ ಖಿoಜಚಿಥಿ ವರದಿ ಮಾಡಿದೆ.ಈಗ ಬೂಡಪೆಸ್ಟ್‍ನ್ನುಯೂರೋಪಿನ ಹಾಲಿವುಡ್‍ಎಂದೇ ಬಿಂಬಿಸಲಾಗುತ್ತಿದೆ.

ವಿಶೇಷತೆಗಳ ತವರೂರು

ಈ ನಗರದ ವಿಶೇಷತೆಗಳಿಗೆ ಲೆಕ್ಕವಿಲ್ಲ.ಇಲ್ಲಿಯೇಯೂರೋಪ್‍ಖಂಡದಮೊದಲ ಭೂಗರ್ಭ ವಿದ್ಯುನ್ಮಾನರೈಲ್ವೆ ಶುರುವಾಗಿದ್ದು! ಇಲ್ಲಿರುವ ಮೃಗಾಲಯ ಸ್ಥಾಪನೆಯಾದದ್ದು 1865ರಲ್ಲಿ ಮತ್ತುಅತ್ಯಂತ ಪುರಾತನ ಮೃಗಾಲಯಗಳಲ್ಲೊಂದು.ಡಾನ್ಯೂಬ್‍ತೀರದಲ್ಲಿ ಪೆಸ್ಟ್ ಭಾಗದಲ್ಲಿರುವಹಂಗೇರಿದೇಶದ ಪಾರ್ಲಿಮೆಂಟ್‍ಜಗತ್ತಿನ ಮೂರನೇಅತಿಹೆಚ್ಚು ವಿಸ್ತಾರವಾದ,ಸುಂದರವಾದಕಟ್ಟಡ.ಬೂಡಪೆಸ್ಟ್ ಕಲೆ ಮತ್ತು ಸಂಗೀತಕ್ಷೇತ್ರದಲ್ಲೂ ಹೆಸರುವಾಸಿ; ಪ್ರತಿವರ್ಷದಆಗಸ್ಟ್‍ನಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಸುಮಾರು ನಾಲ್ಕು ಲಕ್ಷಜನರು ಭಾಗವಹಿಸುತ್ತಾರೆ.ಇತ್ತೀಚೆಗೆಮಧ್ಯ ಮತ್ತು ಪೂರ್ವಯೂರೋಪಿನ ಪ್ರಾಂತ್ಯದಲ್ಲಿ ವಾಸಿಸಲು ಅತ್ಯಂತಯೋಗ್ಯನಗರವೆಂಬ ಬಿರುದನ್ನೂ ಪಡೆದಿದೆ!

ಡಿಸೆಂಬರ್ ಮತ್ತುಜನವರಿಯಲ್ಲಿ ಹಿಮಪಾತದಿಂದರಕ್ತ ಹೆಪ್ಪುಗೊಳಿಸುವಂತಹ ಛಳಿ; ಪ್ರವಾಸಕ್ಕೆ ಉಳಿದ ತಿಂಗಳುಗಳು ಸೂಕ್ತ.ಬೆಂಗಳೂರಿನಿಂದ ದುಬೈ, ದೋಹ, ಪ್ಯಾರಿಸ್‍ಅಥವಾ ¥sóÁ್ರಂಕ್¥sóÀರ್ಟ್ ಮುಖಾಂತರ12-15 ಗಂಟೆಗಳಲ್ಲಿ ತಲುಪಬಹುದು.ನಿಮಗೆ ಭಾರತೀಯಆಹಾರವೇ ಬೇಕೆಂಬ ಅನಿವಾರ್ಯತೆಯಿದ್ದರೂಚಿಂತೆಯಿಲ್ಲ. ಇಲ್ಲಿಅನೇಕ ಭಾರತೀಯ ರೆಸ್ಟೋರೆಂಟ್‍ಗಳಿವೆ ಮತ್ತು ಸಸ್ಯಾಹಾರಿಆಹಾರಕೂಡಲಭ್ಯ. ಸ್ಥಳೀಯ ಅಡುಗೆಯಲ್ಲಿ ಪಶ್ಚಿಮ ಯೂರೋಪಿಗೆ ಹೋಲಿಸಿದರೆ, ಕೆಂಪು ಮೆಣಸಿನಕಾಯಿ ಹಾಗು ಕರಿಮೆಣಸನ್ನು ಸ್ವಲ್ಪ ಹೆಚ್ಚಾಗಿ ಉಪಯೋಗಿಸುವುದರಿಂದ ಸಪ್ಪೆಯೆನಿಸುವುದಿಲ್ಲ. ನಮ್ಮಲ್ಲಿನ ಹಾಗೆ, ರಸ್ತೆಬದಿಯತಿಂಡಿತಿನಿಸುಗಳ ಅಂಗಡಿ, ಕಾರವಾನ್‍ಗಳು ಜನಪ್ರಿಯ;ಆಯ್ಕೆಗಳೂ ವೈವಿಧ್ಯಮಯ;ಸ್ಯಾಂಡ್‍ವಿಚ್, ಬರ್ಗರ್, ಸೂಪ್, ರೋಲ್ಸ್, ಲಾಂಗೋಸ್ [ಮಂಗಳೂರು ಬನ್ನು/ಭತೂರತರಹ], ಕೇಕ್, ಪೇಸ್ಟ್ರಿ, ಕಾಫಿ, ಟೀ, ಐಸ್‍ಕ್ರೀಮ್ ಇತ್ಯಾದಿಗಳು. ವಿಶೇಷವೆಂದರೆಇಲ್ಲಿಚಾಲ್ತಿಯಲ್ಲಿರುವ ಅನೇಕ ಯೂರೋಪಿಯನ್ ಭಾಷೆಗಳಲ್ಲಿ ಚಾಯ್ [ಅhಚಿi] ಎಂದರೆಟೀ!

ಇಲ್ಲಿನಕಾಫಿ ಸಂಸ್ಕೃತಿ ನಮ್ಮಂತೆಯೇ! ಏಕೆಂದರೆ, ಬೆಳಗಿನ ದಿನಚರಿಯ ಶುರುಕಾಫಿಯಿಂದಲೇ.16ನೇ ಶತಮಾನದಲ್ಲಿ ಶುರುವಾದ ಈ ಸಂಪ್ರದಾಯ, 19ನೇ ಶತಮಾನದ ಹೊತ್ತಿಗೆನೂರಾರು ಕಾಫಿಶಾಪ್‍ಗಳಿಂದ ಪ್ರವರ್ಧಮಾನಕ್ಕೆ ಬಂತೆಂದುಹೇಳಲಾಗುತ್ತದೆ.ಈಗ ಸುಮಾರು 600ಕ್ಕೂ ಹೆಚ್ಚು ಉತ್ತಮದರ್ಜೆಯ ಕಾಫಿಶಾಪ್‍ಗಳಿವೆ.

ಪ್ರವಾಸಗಳು ಬದುಕಿನ ಅನುಭವಗಳನ್ನು ಶ್ರೀಮಂತಗೊಳಿಸುವ ಒಂದುಆಹ್ಲಾದಕರಅನ್ವೇಷಣೆ.ಪ್ರವಾಸದಲ್ಲಿನ ವಿಸ್ಮಯಗಳು, ಅನುಭವಗಳು ನಮ್ಮೊಳಗಿನ ಚಿಂತನ ಮಂಥನಕ್ಕೊಂದು ಸ್ಪೂರ್ತಿಯಾಗಬಲ್ಲದು;ಸಂಕುಚಿತಮತ್ತು ನಕಾರಾತ್ಮಕಮನಸ್ಸುಗಳ ಪರಿವರ್ತನೆಗೆಪ್ರೇರಣೆಯಾಗಬಲ್ಲದು.ಹಾಗಾಗಿ, ಪ್ರವಾಸಗಳು ನಮ್ಮಲ್ಲಿ ಸಕಾರಾತ್ಮಕಭಾವನೆಗಳನ್ನು ಮೂಡಿಸಿ, ಬದುಕಿನ ಸಾರ್ಥಕತೆಗೆದಾರಿದೀಪವಾಗಬಲ್ಲದು.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *