ಇದು ಕಾಲಾತೀತ ಪಯಣ. ಜಗತ್ತಿನಾದ್ಯಂತ ಸಮಯವನ್ನು ಏಕಸೂತ್ರದಲ್ಲಿ ಕಟ್ಟಿ ಹಾಕಲು ಮಾನವ ನಡೆಸಿದ ಅಪೂರ್ವ ಪ್ರಯತ್ನಗಳನ್ನು ಮನನ ಮಾಡಿಕೊಳ್ಳುವ ಪಯಣ!
ಸಮಯದ ಗೊಂಬೆಯ’ ಮನೆ ಎಲ್ಲಿದೆ? ಕೈಗಡಿಯಾರಗಳಲ್ಲೂ, ಮೊಬೈಲ್ಗಳಲ್ಲೂ ತಟ್ಟನೆ ಕಾಣಿಸುವ ಸಮಯದ ಹಿಂದಿರುವ ಸಂಶೋಧನೆಗಳೇನು? ಇಂದು, ಪುಟ್ಟ ಮಕ್ಕಳೂ ಗುರುತಿಸಬಲ್ಲ ಸಮಯ, ಅನಾದಿ ಕಾಲದಿಂದಲೂ ಮಾನವನಿಗೆ ಹೇಗೆ ಬೃಹತ್ ಸವಾಲಾಗಿತ್ತು ?
ಬನ್ನಿ, ಸಮಯದ ಮನೆಗೆ ಹೋಗಿ ಬರೋಣ.
ಈ ಭೂಮಿಯಲ್ಲಿ ಜನಿಸಿದ ಕ್ಷಣದಿಂದಲೇ ಶುರುವಾಗುವ, ನಮ್ಮ ಸಮಯದ ಗೊಂಬೆಯ ಟಿಕ್..ಟಿಕ್ಕಿನ ಮೂಲವಿರುವುದು ಗ್ರೀನ್ವಿಚ್ನಲ್ಲಿ ಎಂದು ತಿಳಿದಿದ್ದರೂ, ಗ್ರೀನ್ವಿಚ್ ಲಂಡನ್ನಿನಲ್ಲಿದೆಯೆಂದು ಪ್ರಾಯಶಃ ಎಲ್ಲರಿಗೂ ತಿಳಿದಿರಲಾರದು. ಹಾಗಾಗಿಯೇ, ಲಂಡನ್ಗೆ ಹೋಗುವ ಅಸಂಖ್ಯಾತ ಭಾರತೀಯರು, ಈ ಇತಿಹಾಸ ಪ್ರಖ್ಯಾತ ಸ್ಥಳವನ್ನು ನೋಡದಿರುವ ಸಂಭವವೇ ಹೆಚ್ಚು.
ರಾಯಲ್ ಅಬ್ಸರ್ವೇಟರಿ
ಲಂಡನ್ನಿನ ಗ್ರೀನ್ವಿಚ್ನಲ್ಲಿರುವ ರಾಯಲ್ ಅಬ್ಸರ್ವೇಟರಿಯನ್ನು ಸಮಯದ ಮನೆ [house oಜಿ ಣime] ಎಂದೇ ಕರೆಯುತ್ತಾರೆ. ಕೇಂದ್ರ ಲಂಡನ್ನಿನಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಗ್ರೀನ್ವಿಚ್ಗೆ ಹೋಗಲು ಅಸಂಖ್ಯಾತ ಬಸ್ಸುಗಳಿವೆ. ಕಟ್ಟಿ ಸಾರ್ಕ್ ಟ್ಯೂಬ್ ನಿಲ್ದಾಣದಲ್ಲಿಳಿದು ಗ್ರೀನ್ವಿಚ್ನ್ನು ತ್ವರಿತವಾಗಿ ಸೇರಬಹುದು. ಅಥವಾ ನಿಮಗೊಂದು ಆಹ್ಲಾದಕರ ಅನುಭವ ಬೇಕೆ? ಹಾಗಿದ್ದಲ್ಲಿ ಕೇಂದ್ರ ಲಂಡನ್ನಿನಿಂದ ದೋಣಿವಿಹಾರದ ಮೂಲಕವೂ ಗ್ರೀನ್ವಿಚ್ ಸೇರಬಹುದು.
ಂಡನ್ ಮಹಡಿ ಬಸ್ಸಿನಲ್ಲಿ ಕುಳಿತು ಇಲ್ಲಿನ ಚರಿತ್ರೆಯನ್ನು ಮೆಲುಕು ಹಾಕುತ್ತಾ ಸಂಚರಿಸಿದ ನನಗೆ, ಗ್ರೀನ್ವಿಚ್ ತಲುಪಲು ಒಂದು ಗಂಟೆಯಾಗಿದ್ದೇ ತಿಳಿಯಲಿಲ್ಲ. ರಾಯಲ್ ಮಾರಿಟೈಮ್ ವಸ್ತು ಸಂಗ್ರಹಾಲಯದ ನಿಲ್ದಾಣದಲ್ಲಿಳಿದು ವಿಶಾಲವಾದ ರಾಯಲ್ ಉದ್ಯಾನವನವನ್ನು ದಾಟಿದರೆ, ದೂರದಿಂದಲೇ ಗುಡ್ಡದ ಮೇಲಿರುವ ಯೂರೋಪಿನ ಶೈಲಿಯ ರಾಯಲ್ ಅಬ್ಸರ್ವೇಟರಿ ಕಾಣುತ್ತದೆ.
ಸನ್ಡಯಲ್ಗಳ ಬಳಕೆ
ಮುಂಜಾನೆ ಮತ್ತು ಸಂಜೆ ಗರಿಷ್ಟ ಮಟ್ಟದಲ್ಲಿರುವ ನೆರಳು, ಮಧ್ಯಾಹ್ನ ಕನಿಷ್ಠವಾಗಿರುತ್ತದೆಂದು ಆದಿಮಾನವನಿಗೂ ತಿಳಿದಿತ್ತು. ಇಂದಿನ ಗಡಿಯಾರದ ಕಾರ್ಯವೈಖರಿಯಂತೆಯೇ, ಕಲ್ಲುಗಳಿಂದ ನೆರಳಿನ ಗಾತ್ರ ಮತ್ತು ದಿಕ್ಕನ್ನು ಗುರುತಿಸಿ ಸಮಯದ ಅಂದಾಜು ಮಾಡಲಾಗುತ್ತಿತ್ತು. 3500 ವರ್ಷಗಳ ಹಿಂದೆಯೇ ಈಜಿಪ್ಟಿನಲ್ಲಿ ಕಲ್ಲಿನ ಸನ್ಡಯಲ್ಗಳ ಬಳಕೆಯಿತ್ತೆಂದು ತಿಳಿದು ಬಂದಿದೆ. ಆದರೆ, ಸನ್ಡಯಲ್ಗಳ ಬಳಕೆಗೆ ಸೂರ್ಯನ ಪ್ರಕಾಶ ಬೇಕಿತ್ತು; ಸಂಜೆಯ ನಂತರ ಸಮಯವನ್ನು ಗುರುತಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಸಮಯವನ್ನು ನಿಖರವಾಗಿ ಅಳೆಯಲು ಮಾನವನು ಸಾವಿರಾರು ವರ್ಷಗಳಿಂದ ಸಂಶೋಧನೆಯನ್ನು ಮಾಡುತ್ತಲೇ ಬಂದಿದ್ದಾನೆ. ಇದು ಕಲ್ಲಿನ ಸನ್ಡಯಲ್ಗಳಿಂದ ಆರಂಭವಾಗಿ, ಇಂದಿನ ಗಡಿಯಾರದ ಮೂಲ ಸ್ವರೂಪಕ್ಕೆ ಬಂದದ್ದು 15ನೇ ಶತಮಾನದಲ್ಲಿ!
ನೌಕಾ ಸಂಚಾರದ ಸಮಸ್ಯೆ
ಒಂದು ಕಾಲದಲ್ಲಿ ಸಾಕಷ್ಟು ದೇಶಗಳನ್ನು ಆಕ್ರಮಿಸಿದ್ದ ಬ್ರಿಟೀಶರಿಗೆ, ನೌಕಾ ಮತ್ತು ಜಲಸಂಚಾರದ ಕೌಶಲ್ಯದ ಹಿನ್ನೆಲೆಯಿತ್ತು. ಈ ಕೌಶಲ್ಯ, ಅಪರಿಮಿತ ಶಕ್ತಿಯಾಗಿ ಪರಿವರ್ತನೆಯಾಗುವುದರ ಹಿಂದೆ, ಸರ್ ಐಸಾಕ್ ನ್ಯೂಟನ್, ಫ್ಲಾಮ್ಸ್ಟೀಡ್ ಸೇರಿದಂತೆ ಅನೇಕ ವಿಜ್ಞಾನಿಗಳ ಮಹತ್ವದ ಪಾತ್ರವಿದೆ.
ಆದರೂ, 17ನೇ ಶತಮಾನದವರೆಗೆ ನಾವಿಕರಿಗೆ ಸಂಚರಿಸುವ ಹಡಗುಗಳ ಅಕ್ಷಾಂಶ [ಟಚಿಣiಣuಜe] ಮತ್ತು ರೇಖಾಂಶದ [ಟoಟಿgiಣuಜe] ವಿವರಗಳನ್ನು ಗ್ರಹಿಸಲು ಸಾಧ್ಯವಿರದೆ, ಹಡಗಿನ ನಿಖರವಾದ ಸ್ಥಾನ ಮತ್ತು ಸಮಯದ ಮಾಹಿತಿ ತಿಳಿಯುತ್ತಿರಲಿಲ್ಲ. ಇದರಿಂದ ಗಂಭೀರವಾದ ಸಮಸ್ಯೆಗಳು ಉದ್ಭವಿಸಿ ನೌಕಾ ಸಂಚಾರ ಸುರಕ್ಷಿತವಾಗಿರಲಿಲ್ಲ.
1675ರಲ್ಲಿ ಬ್ರಿಟೀಶ್ ಮಹಾರಾಜರಾದ ಚಾಲ್ರ್ಸ್-2 ಹೆಸರಾಂತ ಖಗೋಳಜ್ಞ ಜಾನ್ ಫ್ಲಾಮ್ಸ್ಟೀಡ್ರವರನ್ನು ನೇಮಕಮಾಡಿ, ರಾಯಲ್ ಅಬ್ಸರ್ವೇಟರಿಯನ್ನು ಸ್ಥಾಪಿಸಲು ನಿರ್ಣಯಿಸಿದರು. ರಾಜಾಜ್ಞೆಯ ಪ್ರಕಾರ ಫ್ಲಾಮ್ಸ್ಟೀಡ್ರವರಿಗೆ ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಸ್ಥಾನಗಳನ್ನು ನಿರ್ಧರಿಸಿ, ಜಲಸಂಚಾರದ ನೈಪುಣ್ಯತೆಗೆ ಬೇಕಾಗಿದ್ದ ರೇಖಾಂಶಗಳ ಮತ್ತು ಸ್ಥಳೀಯ ಸಮಯವನ್ನು ನಿಖರವಾಗಿ ಕಂಡುಹಿಡಿಯುವ ಜವಾಬ್ದಾರಿ ನೀಡಲಾಗಿತ್ತು.
1676ರಿಂದ ಫ್ಲಾಮ್ಸ್ಟೀಡ್ರವರು ತಾವೇ ಸ್ಥಾಪಿಸಿದ ರಾಯಲ್ ಅಬ್ಸರ್ವೇಟರಿಯಲ್ಲಿ ಸಂಶೋಧನೆಯನ್ನು ಮಾಡತೊಡಗಿದರು. 1680ರಲ್ಲಿ ಯುರೇನಸ್ ಗ್ರಹವನ್ನು ಮೊಟ್ಟ ಮೊದಲ ಬಾರಿಗೆ ಕಂಡ ವಿಜ್ಞಾನಿ. ಅದಲ್ಲದೇ ಸುಮಾರು ಮೂರು ಸಾವಿರ ನಕ್ಷತ್ರಗಳನ್ನು ಗುರುತಿಸಿ, ನಕ್ಷತ್ರಗಳ ಪಟ್ಟಿಯನ್ನೂ ತಯಾರಿಸಿದ ಖ್ಯಾತಿ ಇವರದು.
ಐಲ್ ಅಫ್ ಸಿಲಿ ದುರಂತ
ಫ್ಲಾಮ್ಸ್ಟೀಡ್ರವರ ಸಂಶೋಧನೆ ನಡೆಯುತ್ತಿದ್ದಂತೆಯೇ, 1707ರಲ್ಲಿ ಬ್ರಿಟೀಶ್ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ನೌಕಾ ದುರಂತವಾಯಿತು. ಬ್ರಿಟನ್ ಮತ್ತು ಫ್ರಾಂಸ್ ನಡುವಿನ ಯುದ್ಧದ ಬಳಿಕ, ಸ್ವದೇಶಕ್ಕೆ ಹಿಂತಿರುಗುತ್ತಿದ್ದ ಬ್ರಿಟಿಶ್ ನೌಕಾಪಡೆಗೆ ಸೇರಿದ ನಾಲ್ಕು ಹಡಗುಗಳು ಮುಳುಗಡೆಯಾಗಿ, 1400 ನಾವಿಕರು ಮೃತ್ಯುಗೀಡಾದರು. ಪ್ರತಿಕೂಲವಾದ ವಾತಾವರಣದಲ್ಲಿ, ನಾವಿಕರಿಗೆ ಅವರಿರುವ ಸ್ಥಳದ ವಿವರ ನಿಖರವಾಗಿ ತಿಳಿಯದೆ, ಹಡಗುಗಳು ನಿಗದಿತ ಹಾದಿಯನ್ನು ತಪ್ಪಿ, ಐಲ್ ಅಫ್ ಸಿಲಿ ಬಳಿಯ ಬಂಡೆಗಳಿಗೆ ಅಪ್ಪಳಿಸಿ ದುರಂತ ಸಂಭವಿಸಿತು. ಈ ದುರಂತದಿಂದ, ಫ್ಲಾಮ್ಸ್ಟೀಡ್ರವರ ಕಾರ್ಯಕ್ಕೆ ಮತ್ತಷ್ಟು ಪ್ರಾಧಾನ್ಯ ಸಿಕ್ಕಿ, ತೀರ್ವ ಗತಿಯಲ್ಲಿ ಸಂಶೋಧನೆ ಮುಂದುವರಿದು, ನಿರ್ಣಾಯಕ ಹಂತವನ್ನು ತಲುಪಿತು.
ಫ್ಲಾಮ್ಸ್ಟೀಡ್ ಹೌಸ್
ಫ್ಲಾಮ್ಸ್ಟೀಡ್ರವರು ಮಾಡಿದ ಅಮೋಘವಾದ ಸೇವೆಯ ಸ್ಮರಣೆಯಲ್ಲಿ, ಅಬ್ಸರ್ವೇಟರಿಯ ಕಟ್ಟಡವನ್ನು ಫ್ಲಾಮ್ಸ್ಟೀಡ್ ಹೌಸ್ ಎಂದು ಕರೆಯುತ್ತಾರೆ. ಈ ಕಟ್ಟಡದ ಮೇಲ್ಬಾಗದಲ್ಲಿ, ಕೆಂಪು ಬಣ್ಣದ ಚೆಂಡನ್ನು ಧ್ವಜಸ್ಥಂಭದ ಮೇಲಿರಿಸಲಾಗಿದೆ. ಈ ವಿಶಿಷ್ಟವಾದ ಚೆಂಡು ಪ್ರತಿನಿತ್ಯ ಮಧ್ಯಾಹ್ನ 12.55ಕ್ಕೆ ಸ್ಥಂಭದ ಮೇಲಕ್ಕೇರಿ, 1 ಗಂಟೆಗೆ ಕೆಳಗಿಳಿಯುತ್ತದೆ. 1833ರಲ್ಲಿ ಸ್ಥಾಪಿಸಲಾದ ಈ ಧ್ವಜಸ್ಥಂಭದಿಂದ, ನಾವಿಕರಿಗೆ ಮತ್ತು ನಾಗರಿಕರಿಗೆ, ದೂರದಿಂದಲೇ ಸಮಯವನ್ನು ಗ್ರಹಿಸಲು ಆಗುತ್ತಿತ್ತು.
ಗ್ರೀನ್ವಿಚ್ ಟೈಮ್ ಲೇಡಿ
ಆದರೆ, ಇದರಿಂದ ಸಮಯದ ಮಾಹಿತಿಯನ್ನು ಎಲ್ಲೆಡೆ ಪ್ರಸಾರಿಸಲಾಗುತ್ತಿರಲಿಲ್ಲ. ಕೊನೆಗೂ, ಸಮಸ್ಯೆಗೆ ಒಂದು ಪರಿಹಾರ ಹುಡುಕಲಾಯಿತು. ಜಾನ್ ಹೆನ್ರಿ ಎಂಬ ಟೈಮ್ ಕೀಪರ್, 1836ರಿಂದ ಲಂಡನ್ನಿನ ರೈಲು ಇಲಾಖೆ, ಗಡಿಯಾರದ ತಯಾರಕರು ಮತ್ತು ಶ್ರೀಮಂತರಿಗೆ, ಸಮಯದ ಮಾಹಿತಿಯನ್ನು ಒದಗಿಸಲಾರಂಬಿಸಿದ. 1856ರಲ್ಲಿ ಹೆನ್ರಿಯ ನಿಧನದ ನಂತರ, ಈ ಸೇವೆಯನ್ನು ಆತನ ಹೆಂಡತಿ ಮಾರಿಯ ನಡೆಸ ತೊಡಗಿದಳು.
1892ರಿಂದ ಈ ಸೇವೆಯನ್ನು ಅವರ ಮಗಳು ರುತ್ ಬೆಲ್ವಿಲ್ ಮುಂದುವರಿಸಿದಳು. ಪ್ರತಿ ಸೋಮವಾರ, ತನ್ನ ಕಾಲಮಾಪಕ ಯಂತಕ್ಕ್ರೆ [ಅhಡಿoಟಿomeಣeಡಿ] ಅಬ್ಸರ್ವೇಟರಿಯ ಸಮಯವನ್ನು ಹೊಂದಿಸಿ, ‘ಂಡಿಟಿoಟಜ ಛಿeಡಿಣiಜಿieಜ’ ಎಂದು ದೃಡೀಕರಿಸಿದ, ನಿಖರವಾದ ಸಮಯವನ್ನು ಲಂಡನ್ನ ಪ್ರಮುಖ ಗ್ರಾಹಕರಿಗೆ ಪ್ರಸಾರ ಮಾಡುತ್ತಿದ್ದಳು. ಇಂದಿನ ಯುಗದಲ್ಲಿ ಊಹಿಸಲೂ ಅಸಾಧ್ಯವೆನ್ನುವ ಈ ಸೇವೆ ಉಚಿತವಾಗಿರಲಿಲ್ಲ! 1930ವರೆಗೆ ಈ ಸೇವೆ ಸಲ್ಲಿಸಿದ ರುತ್, ಗ್ರೀನ್ವಿಚ್ ಟೈಮ್ ಲೇಡಿ ಎಂದೇ ಹೆಸರುವಾಸಿಯಾದಳು.
ಗ್ರೀನ್ವಿಚ್ ಮೀನ್ ಟೈಮ್ [ಉಒಖಿ]
19ನೇ ಶತಮಾನದ ಮಧ್ಯಂತರದಲ್ಲಿ, ರೇಖಾಂಶಗಳ ಮತ್ತು ಸ್ಥಳೀಯ ಸಮಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲಾಯಿತು. 1884ರ ಅಂತರರಾಷ್ಟ್ರೀಯ ಒಪ್ಪಂದದ ಪ್ರಕಾರ, ರಾಯಲ್ ಅಬ್ಸರ್ವೇಟರಿಯ ಕಾಲ್ಪನಿಕ ಮೂಲ ರೇಖಾಂಶದ [ಠಿಡಿimemeಡಿiಜiಚಿಟಿ – 0ಲಿ0’00” ಜegಡಿee] ಆಧಾರದಿಂದಲೇ, ಬೇರೆ ರೇಖಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಶೂನ್ಯ ರೇಖಾಂಶವೆಂದೂ ಕರೆಯಲ್ಪಡುವ ಇದನ್ನು ಗುರುತಿಸಲು, ಉಕ್ಕಿನ ಪಟ್ಟಿಯನ್ನು ಅಬ್ಸರ್ವೇಟರಿಯ ಹೊರಾಂಗಣದಲ್ಲಿ ಜೋಡಿಸಲಾಗಿದೆ. ಇಲ್ಲಿಂದಲೇ ಪ್ರಪಂಚದ ಸಮಯದ ಟಿಕ್..ಟಿಕ್..ಶುರುವಾಗಿ, ಇಲ್ಲಿನ ಸಮಯವನ್ನು ಗ್ರೀನ್ವಿಚ್ ಮೀನ್ ಟೈಮ್ [ಉಒಖಿ] ಎಂದು ಕರೆಯಲಾಗುತ್ತದೆ. ಇಲ್ಲಿಂದ ಪ್ರತಿ 15ಲಿ ರೇಖಾಂಶಕ್ಕೆ ಒಂದು ಗಂಟೆಯ ವ್ಯತ್ಯಾಸದಂತೆ ಪ್ರಪಂಚದಲ್ಲಿ ಒಟ್ಟು 24 [ಇಲ್ಲಿಂದ ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ತಲಾ 12] ವಲಯಗಳಿದ್ದು, ಆಯಾ ದೇಶಗಳ ಆಡಳಿತಾತ್ಮಕ ಕಾರಣಗಳಿಂದ ಸ್ಥಳೀಯ ಸಮಯವನ್ನು ನಿರ್ಧರಿಸಲಾಗುತ್ತದೆ.
ಉದಾಹರಣೆಗೆ, ಭಾರತದ ವಿಸ್ತೀರ್ಣ ಪಶ್ಚಿಮದಲ್ಲಿ 68ಲಿ 7 ಮತ್ತು ಪೂರ್ವದಲ್ಲಿ 97ಲಿ25′ [ಸುಮಾರು 30ಲಿ ಅಂತರ] ರೇಖಾಂಶದಲ್ಲಿದೆಯಾದರೂ, ಒಂದೇ ಸಮಯದ ವಲಯವಿದ್ದು [ISಖಿ], ಇದು ಉಒಖಿಗಿಂತ 5 ಗಂಟೆ 30 ನಿಮಿಷಗಳ ಮುಂದಿದೆ. ಇದೇ ರೀತಿ ಚೀನಾದಲ್ಲೂ, ಒಂದೇ ಸಮಯದ ವಲಯವಿದೆ. ಆದರೆ ಅಮೇರಿಕಾದಲ್ಲಿ ಹಾಗಲ್ಲ; ಹಲವಾರು ವಲಯಗಳಿದ್ದು, ಪಶ್ಚಿಮದ ಲಾಸ್ ಏಂಜಲೀಸ್ಗೂ ಪೂರ್ವದ ನ್ಯೂಯಾರ್ಕ್ಗೂ ಮೂರು ಗಂಟೆಗಳ ವ್ಯತ್ಯಾಸವಿದೆ.
ಲಂಡನ್ನಿನ ಏಕೈಕ ಪ್ಲಾನೆಟೋರಿಯಮ್
ರಾಯಲ್ ಅಬ್ಸರ್ವೇಟರಿಯಲ್ಲಿ ನೋಡಬೇಕಾದ ಸ್ಥಳಗಳು ಮತ್ತು ತಿಳಿದುಕೊಳ್ಳಬೇಕಾದ ವಿಷಯಗಳು ಅನೇಕ. ಇಲ್ಲಿ, ಲಂಡನ್ನಿ£&ಂರೈಕ ಪ್ಲಾನೆಟೋರಿಯಮ್ 2007 ರಲ್ಲಿ ಉದ್ಘಾಟನೆಯಾಯಿತು. ಸುಮಾರು 250 ಕಂಚಿನ ಪಟ್ಟಿಗಳನ್ನು ಬೆಸೆದು, ಈ ಪಟ್ಟಿಗಳು ಪುರಾತನವಾಗಿ ಕಾಣುವಂತೆ ವಿಶೇಷವಾದ ಬಣ್ಣ ಹಚ್ಚಿ, ಬುಗುರಿಯ ಆಕಾರದ ಪ್ಲಾನೆಟೋರಿಯಮ್ ಕಟ್ಟಡದ ಮೇಲೆ ಜೋಡಿಸಲಾಗಿದೆ. ಅತ್ಯಾಕರ್ಷಕವಾದ ಈ ಪ್ಲಾನೆಟೋರಿಯಮ್ನಲ್ಲಿ, ಪ್ರತಿಬಿಂಬಿಸುವ ಗಾಜಿನ ಚಾವಣಿಯಿಂದ ಭೂಮಿಯ ಅಗಾಧವಾದ ಇತಿಹಾಸವನ್ನು ಗ್ರಹಿಸಬಹುದು. ಅಂತರಿಕ್ಷದಿಂದ ಬರುವ ಛಾಯಾಚಿತ್ರಗಳನ್ನು ವೀಕ್ಷಿಸಿ ಅಧ್ಯಯನ ಮಾಡಬಹುದು.
ಅದ್ಭುತವಾಗಿ ರೂಪಿಸಿರುವ ಅಸ್ಟ್ರಾನಮಿ ಸೆಂಟರ್ನ್ನು ಸಹ ನೋಡಲೇಬೇಕು. ಇಲ್ಲಿನ ವಿಶೇಷವೇನೆಂದರೆ, 4.5 ಲಕ್ಷಕೋಟಿ [biಟಟioಟಿ] ವರ್ಷಗಳ ಹಿಂದಿನ ಉಲ್ಕೆಯ [meಣeಡಿioಡಿiಣe] ಅವಶೇಷವನ್ನು ಸ್ಪರ್ಶಿಸಬಹುದು! ಅಂತರಿಕ್ಷದ ಕ್ಷಿಪಣಿಯ ಅನುಭವವನ್ನು ನಿಮ್ಮದಾಗಿಸಿಕೊಂಡು, ನಿಗೂಢವಾದ ವಿಶ್ವನಿರ್ಮಾಣದ ಪ್ರಶ್ನೆಗಳಿಗೆ ಉತ್ತರವನ್ನೂ ಪಡೆಯಬಹುದು.
ಇಲ್ಲಿ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ವಸ್ತುಗಳಿರುವ ಸಂಗ್ರಹಾಲಯವಿದೆ. ಇಲ್ಲಿ ಗಡಿಯಾರದ ಸೃಷ್ಟಿಯ ಬೆಳವಣಿಗೆಗಳನ್ನು ಅವಲೋಕಿಸಬಹುದು. ಹಿಂದಿನಿಂದಲೂ ಸಂಶೋಧನೆಗೆ ಉಪಯೋಗಿಸಿದ್ದ ಹಲವಾರು ಟೆಲಿಸ್ಕೋಪ್ ಮತ್ತಿತರ ಉಪಕರಣಗಳನ್ನು ವೀಕ್ಷಿಸಬಹುದು.
ಅಬ್ಸರ್ವೇಟರಿಯ ಅಂಗಡಿಯಲ್ಲಿ ನೆನಪಿನ ಕಾಣಿಕೆಗಳನ್ನು ಕೊಂಡು ಹೊರಾಂಗಣಕ್ಕೆ ಬಂದಾಗ ಸೋಜಿಗವೊಂದು ಕಾದಿತ್ತು. ಮೂಲ ರೇಖಾಂಶದ ಉಕ್ಕಿನ ಪಟ್ಟಿಯ ಮೇಲೆ ಫೆÇೀಟೊ ತೆಗೆದುಕೊಳ್ಳುವುದರ ಜೊತೆಗೆ, ಪಕ್ಕದಲ್ಲಿರುವ ವೆಂಡಿಗ್ ಯಂತ್ರದಲ್ಲಿ ಒಂದು ಪೌಂಡ್ ಹಾಕಿದರೆ ನಾವು ಈ ಸ್ಥಳಕ್ಕೆ ಭೇಟಿ ಮಾಡಿರುವ ದಿನಾಂಕ ಮತ್ತು ಸಮಯದ ದಾಖಲೆ ಪತ್ರ ಸಿಗುತ್ತದೆ. ಆದರೆ ಅದರಲ್ಲಿ ನಮ್ಮ ಹೆಸರನ್ನು ನಾವೇ ಬರೆದುಕೊಳ್ಳಬೇಕು!
ಅಬ್ಸರ್ವೇಟರಿಯ ಪರಿಸರದಲ್ಲಿಯೇ ರಾಯಲ್ ಮಾರಿಟೈಮ್ ವಸ್ತ್ರು ಸಂಗ್ರಹಾಲಯವಿದೆ. ಇದಕ್ಕೆ ಹೊಂದಿಕೊಂಡಂತಿರುವ ಬ್ರಿಟನ್ನಿನ ರಾಣಿಯವರ ಅರಮನೆಯನ್ನು ಅಪರೂಪದ ಕಲಾವಸ್ತುಗಳ ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. ರಾಯಲ್ ಅಬ್ಸರ್ವೇಟರಿಯೂ ಸೇರಿದಂತೆ ಈ ಮೂರೂ ಸ್ಥಳಗಳ ಮಹತ್ವವನ್ನು ಗ್ರಹಿಸಿ, ಯುನೆಸ್ಕೊ ಇಲ್ಲಿಗೆ ತಿoಡಿಟಜ heಡಿiಣಚಿge siಣe ಎಂಬ ಸ್ಥಾನವನ್ನು ನೀಡಿದೆ. ಡಿಚಿve; ಏP
ಲಂಡನ್ನಿಗೆ ಹಿಂದಿರುಗುತ್ತಿದ್ದ ನನಗೆ, ಕಟ್ಟಿ ಸಾರ್ಕ್ ಟ್ಯೂಬ್ ನಿಲ್ದಾಣದ ದಾರಿಯಲ್ಲಿದ್ದ ಗಡಿಯಾರದ ಅಂಗಡಿಯ ಫಲಕದ ಮೇಲಿದ್ದ ಜಾಣತನದ ಜಾಹೀರಾತು: ಣhe ಜಿiಡಿsಣ shoಠಿ iಟಿ ಣhe ತಿoಡಿಟಜ – 0ಲಿ 00’04’ ಗಮನಕ್ಕೆ ಬಂತು. ಸಮಯದ ಹೆಜ್ಜೆಗುರುತುಗಳನ್ನು ಗುರುತಿಸಿ, ಸಮಯದ ಮನೆಯ ವಿಸ್ಮಯಕಾರೀ ಲೋಕದಲ್ಲಿ ತಲ್ಲೀನನಾಗಿ, ಹೀತ್ರೋ ವಿಮಾನ ನಿಲ್ದಾಣವನ್ನು ತಲುಪಿದೆ. ಗ್ರೀನ್ವಿಚ್ಗಿಂತ 5 1/2 ಗಂಟೆ ಮುಂದಿರುವ ಬೆಂಗಳೂರಿನ ಸಮಯಕ್ಕೆ ಕೈಗಡಿಯಾರದವನ್ನು ಹೊಂದಿಸಿಕೊಂಡೆ.