ಕಾಲೇಜು ಆಯ್ಕೆ ಹೇಗೆ?
ಹೊಸ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಂವಾದಗಳಲ್ಲೂ, ಪ್ರಶ್ನೋತ್ತರಗಳಲ್ಲೂ ವಿದ್ಯಾರ್ಥಿಗಳು ಕೇಳುವ ಸಾಮಾನ್ಯ ಪ್ರಶ್ನೆಯೇನೆಂದರೆ, ಉತ್ತಮವಾದ ಕಾಲೇಜನ್ನು ಆಯ್ಕೆ ಮಾಡುವುದು ಹೇಗೆ?
ಈ ಗೊಂದಲವೇಕೆ?
ನಮ್ಮ ದೇಶದಲ್ಲಿ 55,000ಕ್ಕೂ ಹೆಚ್ಚು ಕಾಲೇಜುಗಳೂ ಮತ್ತು 1000ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಒಬ್ಬ ವಿದ್ಯಾರ್ಥಿ ಇಂಜಿನಿಯರಿAಗ್ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ, ಕರ್ನಾಟಕದ 542 ಸೇರಿದಂತೆ ಭಾರತದಲ್ಲಿ ಸುಮಾರು 3500ಕ್ಕೂ ಹೆಚ್ಚು ಕಾಲೇಜುಗಳಿವೆ. ಇದೇ ರೀತಿ, ಕರ್ನಾಟಕದ 900ಕ್ಕೂ ಹೆಚ್ಚು ಕಾಲೇಜುಗಳೂ ಸೇರಿದಂತೆ 6000ಕ್ಕೂ ಹೆಚ್ಚು ಒಃಂ ಕಾಲೇಜುಗಳಿವೆ. ಬಹುತೇಕ ಎಲ್ಲಾ ಕೋರ್ಸ್ಗಳಲ್ಲೂ, ಅತ್ಯಧಿಕ ಪೈಪೋಟಿಯಿರುವ ಶಿಕ್ಷಣ ಮತ್ತು ಕೋಚಿಂಗ್ ಕ್ಷೇತ್ರ, ಈಗ ವ್ಯಾಪಾರವಾಗಿದೆ; ವಿದ್ಯಾರ್ಥಿಗಳ ಮತ್ತು ಪೋಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ, ಕಾಲೇಜುಗಳು ಅಬ್ಬರದ ಜಾಹೀರಾತುಗಳ ಮೂಲಕ ಬಿಂಬಿಸುವ ಸಾಧನೆಗಳು, ಮೂಲಭೂತ ಸೌಕರ್ಯಗಳು ಮತ್ತು ಸೌಲಭ್ಯಗಳ ಸತ್ಯಾಸತ್ಯತೆಯನ್ನು, ವಿಶ್ಲೇಷಣೆಯ ಮೂಲಕ ಮಾತ್ರ ನಿರ್ಧರಿಸಬಹುದು. ಆದ್ದರಿಂದ, ವಿದ್ಯಾರ್ಥಿಗಳು ಉತ್ತಮ ಕಾಲೇಜನ್ನು ಆಯ್ಕೆ ಮಾಡುವುದು ಸುಲಭವಲ್ಲ.
ಯಾವ ಅಂಶಗಳನ್ನು ಪರಿಗಣಿಸಬೇಕು?
ವಿದ್ಯಾರ್ಥಿಗಳ ವೃತ್ತಿಪರ ಜೀವನವನ್ನು ರೂಪಿಸುವಲ್ಲಿ ಕಾಲೇಜು ಆಯ್ಕೆ ಪ್ರಮುಖ ನಿರ್ಧಾರವಾಗಿದೆ. ಹಾಗಾಗಿ, ಕೌನ್ಸೆಲಿಂಗ್ ಅಥವಾ ಇನ್ನಿತರ ಪ್ರವೇಶ ಪ್ರಕ್ರಿಯೆಯಲ್ಲಿ ನೀಡುವ/ಸೂಚಿಸುವ ಕಾಲೇಜನ್ನು ವಸ್ತುನಿಷ್ಠವಾದ ಮೌಲ್ಯಮಾಪನವಿಲ್ಲದೆ ಸ್ವೀಕರಿಸಬಾರದು. ಕಾಲೇಜುಗಳ ಮೌಲ್ಯಮಾಪನಕ್ಕಾಗಿ ಈ ಅಂಶಗಳನ್ನು ಪರಿಗಣಿಸಬಹುದು:
1. ಪ್ರತಿಷ್ಟಿತ ಕಾಲೇಜುಗಳು
ನೂತನ ಕಾಲೇಜುಗಳು ಆರಂಭಿಕ ಸಮಸ್ಯೆಗಳನ್ನು ಬಗೆಹರಿಸಿ ಗುಣಮಟ್ಟದ ಮೂಲಸೌಕರ್ಯವನ್ನು ರಚಿಸಲು ಹಲವಾರು ವರ್ಷಗಳಾಗುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಪ್ರತಿಷ್ಟಿತ ಕಾಲೇಜುಗಳಿಗೆ ಆದ್ಯತೆ ನೀಡಬೇಕು.
2. ಆಡಳಿತ ವರ್ಗ
ಸಂಸ್ಥಾಪಕರು, ಪ್ರವರ್ತಕರು ಮತ್ತು ನಿರ್ದೇಶಕರ ಹಿನ್ನೆಲೆಯನ್ನು ಪರಿಶೀಲಿಸುವುದರಿಂದ ವಿಶ್ವಾಸಾರ್ಹತೆ ಮೂಡುತ್ತದೆ.
3. ಅಧ್ಯಾಪಕ ವರ್ಗ
ವಿದ್ಯಾರ್ಥಿ/ಅಧ್ಯಾಪಕರ ಅನುಪಾತ, ಅಧ್ಯಾಪಕರುಗಳ ಅನುಭವ, ಅರ್ಹತೆಗಳು, ಪ್ರಕಟಿತ ಪ್ರಬಂಧಗಳು, ಸಂಶೋಧನೆಗಳು, ಇನ್ನಿತರ ಸಾಧನೆಗಳ ವಿವರಗಳನ್ನು, ಕಾಲೇಜಿನ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.
4. ಶಿಕ್ಷಣಶಾಸ್ತç
ಸಾಂಪ್ರದಾಯಿಕ ಶಿಕ್ಷಣದ ಜೊತೆ ವಿಮರ್ಷಾತ್ಮಕ, ಪ್ರಾಯೋಗಿಕ ಮತ್ತು ಪರಿಕಲ್ಪನಾ ಶಿಕ್ಷಣವೂ ಇರಬೇಕು, ಆದರೆ, ಬೋಧನೆ ಮತ್ತು ಕಲಿಕೆಯ ವಿಧಾನಗಳು ಕಾಲೇಜುಗಳಲ್ಲಿ ಭಿನ್ನವಾಗಿದ್ದು, ಜ್ಞಾನಾಭಿವೃದ್ಧಿ ಮತ್ತು ಕೌಶಲಾಭಿವೃದ್ಧಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
5. ಮೂಲಸೌಕರ್ಯಗಳು
ಕೋರ್ಸ್ಗೆ ಅನುಗುಣವಾಗಿ, ಮೂಲಸೌಕರ್ಯದ ಅಗತ್ಯಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಈ ಅಂಶಗಳನ್ನು ಗಮನಿಸಿ:
- ಆಸ್ಪತ್ರೆ/ಪ್ರಯೋಗಾಲಯಗಳು.
- ಗ್ರಂಥಾಲಯ.
- ತರಗತಿಯ ಕೊಠಡಿಗಳು.
- ಸೆಮಿನಾರ್ ಹಾಲ್ಗಳು/ಚರ್ಚಾ ಕೊಠಡಿಗಳು.
- ಹಾಸ್ಟೆಲ್/ಕ್ಯಾಂಟೀನ್.
- ಕ್ರೀಡಾ ಸೌಲಭ್ಯಗಳು.
- ನೈರ್ಮಲ್ಯ ಮತ್ತು ವಾತಾವರಣ.
6. ಉದ್ಯಮಗಳ ಸಹಯೋಗ
ತಜ್ಞತೆ ಮತ್ತು ಪ್ರತಿ ವಿಭಾಗಕ್ಕೆ ಸಂಬAಧಿಸಿದ ಉದ್ಯಮಗಳ ಜೊತೆ, ಕಾಲೇಜುಗಳ ಸಹಯೋಗದಿಂದ ಇಂಟರ್ನ್ಶಿಪ್ಗಳು, ಸಮ್ಮರ್ ಪ್ರಾಜೆಕ್ಟ್ಗಳು ಮುಂತಾದ ಕಲಿಕೆಯ ಪ್ರಕ್ರಿಯೆ ಸಂಪೂರ್ಣಗೊAಡು ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಅನುವಾಗುತ್ತದೆ.
7. ನೇಮಕಾತಿ ದಾಖಲೆ
ಒಟ್ಟಾರೆ ನಿರುದ್ಯೋಗವು ಈಗ ಸುಮಾರು ಶೇ 8 ರಷ್ಟಿದ್ದು, ಕ್ಯಾಂಪಸ್ ಮುಖಾಂತರ ನೇಮಕಾತಿಯಾಗದಿದ್ದಲ್ಲಿ, ಉದ್ಯೋಗಗಳನ್ನು ಪಡೆಯುವುದು ಸವಾಲಾಗಬಹುದು. ಆದ್ದರಿಂದ, ನೇಮಕಾತಿ ಪ್ರಕ್ರಿಯೆಯ ಕಾರ್ಯಾಚರಣೆ ಮತ್ತು ದಾಖಲೆಯನ್ನು ಗಮನಿಸುವುದು ಕಡ್ಡಾಯ.
8. ಸ್ಥಳದ ಪ್ರಾಮುಖ್ಯತೆ
ಕೋರ್ಸ್ ಸಂಬAಧಿತ ಉದ್ಯಮಗಳಿಗೆ (ಮೈನಿಂಗ್, ಆಟೋಮೊಬೈಲ್, ಐಟಿ ಇತ್ಯಾದಿ) ಕಾಲೇಜುಗಳು ಹತ್ತಿರವಿದ್ದಷ್ಟೂ ಕಲಿಕೆಗೆ ಸಹಾಯವಾಗುತ್ತದೆ.
9. ಮಾನ್ಯತೆ
ಮೆಡಿಕಲ್ ಕೌಂಸಿಲ್, ಯುಜಿಸಿ, ಎಐಸಿಟಿಇ ಇತ್ಯಾದಿ ಸಂಸ್ಥೆಗಳಿAದ ಅನುಮೋದಿತ ಕೋರ್ಸ್ನ್ನೇ ಆಯ್ಕೆ ಮಾಡಿಕೊಳ್ಳಬೇಕು.
10. ಶುಲ್ಕಗಳು, ವೆಚ್ಚಗಳು
ಕಾಲೇಜುಗಳ ನಡುವಿನ ಶುಲ್ಕಗಳು ಮತ್ತು ವೆಚ್ಚಗಳನ್ನು ಹೋಲಿಸಿ ಅನುಕೂಲತೆಗಳನ್ನು ಗಮನಿಸಬೇಕು.
ಕಾಲೇಜು ಆಯ್ಕೆ ಹೇಗೆ?
ಕಾಲೇಜು ಆಯ್ಕೆಯನ್ನು ಸುಲಭಗೊಳಿಸಲು, ಸಿದ್ಧಪಡಿಸಿದ ಮೌಲ್ಯಮಾಪನದ ದತ್ತಾಂಶ ಈಗ ಲಭ್ಯವಿದೆ. ಪ್ರಮುಖ ವ್ಯಾಪಾರ ಸಂಸ್ಥೆಗಳು, ನಿಯತಕಾಲಿಕೆಗಳು ಮೇಲೆ ಉಲ್ಲೇಖಿಸಿದ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕಗಳನ್ನು ಪ್ರಕಟಿಸುತ್ತವೆ. ಆದಾಗ್ಯೂ, ಈ ಶ್ರೇಯಾಂಕಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಲ;್ಲ ಏಕೆಂದರೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಸ್ಥೆಗಳನ್ನು ಮಾತ್ರ ಒಳಗೊಂಡಿದ್ದು, ವಿದ್ಯಾರ್ಥಿಗಳು ನಿರ್ಧಿಷ್ಟವಾದ ಕಾಲೇಜುಗಳ ಮಾಹಿತಿಯನ್ನು ಅವಲೋಕಿಸಲು ಅನೇಕ ಮೌಲ್ಯಮಾಪನಗಳನ್ನು ಗಮನಿಸುವುದರ ಜೊತೆಗೆ ನಿರ್ಧಾರವನ್ನು ಮಾಡುವಾಗ ತಮ್ಮ ವಿವೇಚನೆಯನ್ನು ಬಳಸಬೇಕಾಗುತ್ತದೆ. ಆದರೆ, 2016 ರಿಂದ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರಕಟಿಸುತ್ತಿರುವ ರಾಷ್ಟಿçÃಯ ಶ್ರೇಯಾಂಕ ಮಾಹಿತಿ ಚೌಕಟ್ಟಿನಿಂದ (ಎನ್ಐಆರ್ಎಫ್) ಈ ಪ್ರಕ್ರಿಯೆ ಸ್ವಲ್ಪಮಟ್ಟಿಗೆ ಸರಾಗವಾಗಿದೆ. ಶ್ರೇಯಾಂಕವನ್ನು ಪರಿಗಣಿಸುವುದರ ಜೊತೆಗೆ, ವಿಶ್ಲೇಷಣೆಯನ್ನು ಸಮಗ್ರಗೊಳಿಸಲು ಕಾಲೇಜಿನ ವೆಬ್ಸೈಟ್ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಮತ್ತು ಹಳೆಯ/ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯುವುದು ಕೆಲವೊಮ್ಮೆ ಉಪಯುಕ್ತ.
ಅಂತಿಮವಾಗಿ ಅಗತ್ಯವೆನಿಸಿದರೆ, ಆಯ್ಕೆಮಾಡಿದ ಕಾಲೇಜಿಗೆ ಖುದ್ದಾಗಿ ಭೇಟಿ ನೀಡುವುದರಿಂದ ತೆಗೆದುಕೊಂಡ ನಿರ್ಧಾರದ ಸಮರ್ಥನೆಯೊಂದಿಗೆ ಭವಿಷ್ಯದ ಬಗ್ಗೆ ಭರವಸೆಯೂ ಮೂಡುತ್ತದೆ.