Q1. ಎನ್ಐಒಎಸ್ ಸರ್ಟಿಫಿಕೇಟ್ ಅನ್ನು ಎಲ್ಲಿ ಪಡೆದುಕೊಳ್ಳಬೇಕು. ಸಂಪೂರ್ಣ ಮಾಹಿತಿ ತಿಳಿಸಿ.
ಎನ್ಐಒಎಸ್ ಸರ್ಟಿಫಿಕೇಟ್ ಪಡೆದುಕೊಳ್ಳುವ ಮಾಹಿತಿಗಾಗಿ ಗಮನಿಸಿ: https://nios.ac.in/student-information-section/procedure-for-obtaining-duplicate-certificate.aspx
Q2. ನಾನು ಬಿಎ (ಜರ್ನಲಿಸಂ) ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಇದು ಮುಗಿದ ನಂತರ ಯಾವ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಹಾಗೂ, ಪದವಿಯಲ್ಲಿ ಓದುತ್ತಾ ಯಾವ ರೀತಿ ಹಣ ಸಂಪಾದನೆ ಮಾಡಬಹುದೆಂದು ತಿಳಿಸಿ.
ಬಿಎ (ಜರ್ನಲಿಸಂ) ನಂತರ ಮುದ್ರಣ, ರೇಡಿಯೊ, ಟೆಲಿವಿಷನ್, ಆನ್ಲೈನ್ ಮತ್ತು ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ಹಾಗೂ, ಭಾಷೆಯ ತಜ್ಞತೆಯಿದ್ದರೆ, ವಿಷಯಾಭಿವೃದ್ಧಿ, ಅನುವಾದ, ಸಬ್ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ. ಈಗ, ವಿಧ್ಯಾಭ್ಯಾಸದ ಜೊತೆಗೆ ಮಾಡಬಹುದಾದ ಅನೇಕ ಉದ್ಯೋಗಗಳಿವೆ. ಈ ಅರೆಕಾಲಿಕ ಉದ್ಯೋಗಗಳು ನಿಮ್ಮನ್ನು ವೃತ್ತಿಪರ ಜೀವನಕ್ಕಾಗಿ ಸಿದ್ಧಪಡಿಸುವುದರ ಜೊತೆಗೆ ನಿಮ್ಮ ವ್ಯಕ್ತಿತ್ವದ ಮೌಲ್ಯವನ್ನು ವೃದ್ಧಿಸಿ ಒಂದು ಹೊಸ ಜಗತ್ತನ್ನೇ ನಿಮಗೆ ಪರಿಚಯಿಸುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/earn-while-you-learn-3/
Q3. ನಾನು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಕನ್ನಡದಲ್ಲಿ ಮತ್ತು ಆರನೆಯ ತರಗತಿಯಿಂದ ಹತ್ತನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೇನೆ. ಪಿಯುಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತಿರುವೆ. ನಾನು ಅರ್ಜಿ ಹಾಕುವಾಗ ಯಾವ ಮಾಧ್ಯಮ ಎಂದು ನಮೂದಿಸಬೇಕು, ತಿಳಿಸಿ.
ನೀವು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅರ್ಹತಾ ಪರೀಕ್ಷೆಯಲ್ಲಿನ ಮಾಧ್ಯಮವನ್ನು ನಮೂದಿಸುವುದು ಸೂಕ್ತ.
Q4. ನಾನು ಬಿ.ಕಾಂ ಪದವಿ ಪಡೆದಿದ್ದು, ಬಿ.ಇಡಿ ಮಾಡಬೇಕು ಎಂದುಕೊಂಡಿದ್ದೇನೆ. ಆಮೇಲೆ ನಾನು ಶಿಕ್ಷಕ ವೃತ್ತಿಯನ್ನು ಅನುಸರಿಸಬಹುದೇ? ಹಾಗೂ, ಯಾವ ವಿಷಯವನ್ನು ಬೋಧಿಸಬಹುದು?
ನಮಗಿರುವ ಮಾಹಿತಿಯಂತೆ, ಬಿಕಾಂ, ಬಿ.ಇಡಿ ನಂತರ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪದವಿ ಕೋರ್ಸ್ನಲ್ಲಿ ಓದಿರುವ ಪ್ರಮುಖ ವಿಷಯಗಳನ್ನು ಪ್ರೌಢಶಾಲೆಗಳಲ್ಲಿ ಭೋಧಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://collegedunia.com/courses/bachelor-of-education-bed/how-to-become-a-teacher#2
Q5. ನಾನು ದ್ವಿತೀಯ ಬಿಕಾಂ ಓದುತ್ತಿದ್ದೇನೆ. ನನಗೆ ಬ್ಯಾಂಕ್ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಬ್ಯಾಂಕ್ ಪರೀಕ್ಷೆಯ ತರಬೇತಿಗೆ ಹೋಗಬೇಕು. ಈ ಬಗ್ಗೆ ಮಾಹಿತಿ ನೀಡಿ.
Q6. ದೂರಶಿಕ್ಷಣದ ಮೂಲಕ ಪಡೆದ ಪದವಿಯನ್ನು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುವುದಕ್ಕೆ ಏಕೆ ಪರಿಗಣಿಸುವುದಿಲ್ಲ ತಿಳಿಸಿ.
ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಪದವಿ ಗಳಿಸಿದ ನಂತರ ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ. ಆದರೆ, ಕಲಿಕೆಯ ದೃಷ್ಟಿಯಿಂದ ರೆಗ್ಯುಲರ್ ಮತ್ತು ದೂರಶಿಕ್ಷಣ ಕೋರ್ಸ್ಗಳಲ್ಲಿ ವ್ಯತ್ಯಾಸವಿರುವುದು ಸಹಜ. ಹಾಗಾಗಿ, ದೂರ ಶಿಕ್ಷಣದ ಮೂಲಕ ಪದವಿ ಗಳಿಸಿರುವವರು ಬ್ಯಾಂಕ್ ಆಫೀಸರ್ ಪರೀಕ್ಷೆಗಳಿಗೆ ಸೂಕ್ತ ರೀತಿಯಲ್ಲಿ ತಯಾರಾಗಬೇಕು. ಬ್ಯಾಂಕ್ ಆಫೀಸರ್ ಪರೀಕ್ಷೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyamata.in/ibps-po-2022/
Q7. ನಾನು ಐಟಿಐ (ಫಿಟ್ಟರ್) ಮುಗಿಸಿದ್ದೇನೆ. ನಂತರ, ಡಿಪ್ಲೊಮಾ (ಮೆಕ್ಯಾನಿಕಲ್) ಮುಗಿಸಿದ್ದೇನೆ. ನನ್ನ ತಂದೆಯವರು ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನನ್ನನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ದ್ವಿತೀಯ ಪಿಯುಸಿಗೆ ತತ್ಸಮಾನವನ್ನು ಕೇಳುತ್ತಿದ್ದು ನಾನು ಮಾಡಿರುವ ಐಟಿಐ(ಫಿಟ್ಟರ್) ಮತ್ತು ಡಿಪ್ಲೊಮಾ(ಮೆಕ್ಯಾನಿಕಲ್), ಪಿಯುಸಿಗೆ ತತ್ಸಮಾನ ಆಗುವುದಿಲ್ಲವೇ?
ನಮಗಿರುವ ಮಾಹಿತಿಯಂತೆ ನೀವು ಮಾಡಿರುವ ಎರಡು ವರ್ಷದ ಐಟಿಐ (ಫಿಟ್ಟರ್) ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕು.
Q8. ಸರ್, ದೂರ ಶಿಕ್ಷಣದಲ್ಲಿ ಪಡೆದ ಪದವಿ, ಯುಜಿಸಿ ಮಾನ್ಯತೆ ಹೊಂದಿದೆಯೇ ಎಂಬುದನ್ನು ನಾವು ಹೇಗೆ ಖಚಿತ ಪಡಿಸಿಕೊಳ್ಳಬೇಕು?
ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ರಾಷ್ಟಿçÃಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ‘ಎ’ ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ. ಹಾಗಾಗಿ, ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮತ್ತು ಆನ್ಲೈನ್ ಮೂಲಕ ನಡೆಸುವ ಕೋರ್ಸ್ಗಳಿಗೆ ದೂರ ಶಿಕ್ಷಣ ಬ್ಯೂರೊ, ಯುಜಿಸಿ ರವರ ಮಾನ್ಯತೆಯನ್ನು ಪಡೆದಿರಬೇಕು. ಪ್ರತಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಮಾನ್ಯತೆ ಪಡೆದಿರುವ ಕೋರ್ಸ್ಗಳ ಪಟ್ಟಿಯನ್ನು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸುತ್ತದೆ. ಈ ಜಾಲತಾಣದಲ್ಲಿ ಕಳೆದ ಹಲವಾರು ವರ್ಷಗಳಿಗೆ ಅನ್ವಯವಾಗುವ ಮಾನ್ಯತೆ ಪಡೆದ ಕೋರ್ಸ್ಗಳ ಮಾಹಿತಿಯೂ ಲಭ್ಯ. ಹಾಗಾಗಿ, ದೂರ ಶಿಕ್ಷಣ ಮತ್ತು ಆನ್ಲೈನ್ ಕೋರ್ಸ್ಗೆ ಸೇರುವ ಮೊದಲು ಈ ಜಾಲತಾಣದಲ್ಲಿನ ಮಾಹಿತಿಯನ್ನು ಪರಾಮರ್ಶಿಸಿ: https://deb.ugc.ac.in/
Q9. ನಾನು ವಿಜ್ಞಾನ ಪದವಿ ಮುಗಿಸಿದ್ದೇನೆ. ಪ್ರಸ್ತುತ, ಒಂದು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಓದಿನ ಜೊತೆಗೆ ಅರೆಕಾಲಿಕ ಕೆಲಸ ಪಡೆಯಲು ಕಡಿಮೆ ಅವಧಿಯ ಒಳ್ಳೆಯ ಕೋರ್ಸ್ ತಿಳಿಸಿ. ಮಾಹಿತಿ ತಂತ್ರಜ್ಞಾನ ವಲಯದಲ್ಲಿದ್ದರೆ ಉತ್ತಮ.
ನಿಮ್ಮ ಆಸಕ್ತಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನ ವಲಯದ ಗ್ರಾಫಿಕ್ ಡಿಸೈನ್, ವೆಬ್ ಡಿಸೈನ್, ವಿಎಫ್ಎಕ್ಸ್, ಅನಿಮೇಷನ್, ಎಸ್ಇಒ, ಡಿಜಿಟಲ್ ಮಾರ್ಕೆಟಿಂಗ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು. ಹಾಗೂ, ಯಾವುದೇ ಕೋರ್ಸ್ ಮಾಡುವ ಅಗತ್ಯವಿಲ್ಲದೇ ಮಾಡಬಹುದಾದ ಅನೇಕ ಅರೆಕಾಲಿಕ ಉದ್ಯೋಗಾವಕಾಶಗಳೂ ಲಭ್ಯ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/earn-while-you-learn-3/
Q10. ಸರ್, ನಾನು 2021ರಲ್ಲಿ ಬಿಸಿಎ ಮುಗಿಸಿದ್ದೇನೆ. ಈಗ ಎಂಸಿಎ/ಎಂಟೆಕ್ ಮಾಡುವುದೋ ಅಥವಾ ಬೇರೆ ಯಾವುದಾದರೂ ಕೋರ್ಸ್ ಮಾಡುವುದೋ ಎಂಬ ಗೊಂದಲದಲ್ಲಿದ್ದೇನೆ. ಹಾಗಾಗಿ ಬಿಸಿಎ ಮುಗಿಸಿದವರಿಗೆ ಯಾವ ಪ್ರೋಗ್ರಾಮಿಂಗ್ ಕೋರ್ಸ್ ಆಯ್ಕೆ ಒಳ್ಳೆಯದು, ತಿಳಿಸಿ?
ಐಟಿ ವಿಸ್ತಾರವಾದ ಕ್ಷೇತ್ರ. ಈಗ ತ್ವರಿತವಾದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಐಟಿ ಕ್ಷೇತ್ರದ ಅನೇಕ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ, ಪ್ರತಿ ಭಾಷೆಗೆ (ಉದಾಹರಣೆಗೆ, ಜಾವಾ, ಜಾವಾ ಸ್ಕಿçಪ್ಟ್, ಸಿ, ಸಿ++, ಎಚ್ಟಿಎಮ್ಎಲ್, ಪೈಥಾನ್, ಸ್ವಿಫ್ಟ್, ಯೂನಿಟಿ, ಗೋ, ರಸ್ಟ್ ಇತ್ಯಾದಿ) ತನ್ನದೇ ಆದ ಉಪಯುಕ್ತತೆ ಮತ್ತು ಇತಿಮಿತಿಯಿರುತ್ತದೆ. ಹಾಗೂ, ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಸ್ಪಷ್ಟವಾದ ವೃತ್ತಿಯೋಜನೆಯಿರಲೇ ಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಪ್ರೋಗ್ರಾಮಿಂಗ್ ಭಾಷೆಯ ಪರಿಣತಿ ಬೇಕಾಗುತ್ತದೆ ಎಂದು ಅರಿವಾಗುತ್ತದೆ. ಬಿಸಿಎ ನಂತರ ಪ್ರೋಗ್ರಾಮಿಂಗ್ ಅಲ್ಲದೇ ಡೇಟಾ ಸೈಂಟಿಸ್ಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಡಕ್ಟ್ ಮ್ಯಾನೇಜ್ಮೆಂಟ್, ಬ್ಲಾಕ್ಚೈನ್ ಮುಂತಾದ ಕ್ಷೇತ್ರಗಳಲ್ಲೂ ವೃತ್ತಿಯನ್ನು ಅರಸಬಹುದು.
ಹೆಚ್ಚಿನ ತಜ್ಞತೆಗಾಗಿ ಎಂಸಿಎ/ಎಂಟೆಕ್ ಮಾಡಬಹುದು.
ನಾನು ಡಿಪ್ಲೊಮಾ ಮಾಡಿದ್ದು ಪೊಲೀಸ್ ಕಾನ್ಸ್ಟೇಬಲ್ ಆಗಬೇಕು ಅಂತ ತುಂಬಾ ಆಸೆ ಇದೆ. ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಬಹುದೇ?
ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅಥವಾ ಎರಡು ವರ್ಷದ ಐಟಿಐ ಕೋರ್ಸ್ ಅನ್ನು ಪಿಯುಸಿ ಗೆ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksp.karnataka.gov.in/page/Administration/Recruitment
Q11. ನಾನು ಕೆಪಿಎಸ್ಸಿ ಇಲಾಖೆ ನಡೆಸುತ್ತಿರುವ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದೆನೆ. ಈ ಮೊದಲು ಇರುವಂತೆ “ಕನ್ನಡ ವಿಷಯ ಪತ್ರಿಕೆ-2” ಈ ಮುಂದೆ ನಡೆಯುವ ಪರೀಕ್ಷೆಗೆ ಇರಲಿದೆಯೇ? ಅದನ್ನು ತಾವು ತಿಳಿಸಿಕೊಡಲು ವಿನಂತಿ.
ಎಫ್ಡಿಎ/ಎಸ್ಡಿಎ ಪರೀಕ್ಷೆಗಳು ಇದೇ ವರ್ಷದ ಸೆಪ್ಟೆಂಬರ್ 18 ಮತ್ತು 19 ರಂದು ನಡೆಯಲಿದೆ. ಪರೀಕ್ಷೆಯ ಇನ್ನಿತರ ವಿವರಗಳ ನಿಖರವಾದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.kpsc.kar.nic.in/
Q12. ನಾನು ಕನ್ನಡ ಶಿಕ್ಷಕನಾಗಲು ಇಚ್ಛಿಸಿದ್ದೇನೆ . ನಾನು ಈಗ ಬಿಎ ಪದವಿಯಲ್ಲಿ ಐಚ್ಛಿಕ ಕನ್ನಡ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಕನಾಗಬೇಕಾದರೆ ಮುಂದೆ ಯಾವ ಕೋರ್ಸ್ಗಳನ್ನು ಮಾಡಬೇಕು?
ಪ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಲು ಬಿಎ, ಬಿ.ಇಡಿ ನಂತರ ಟಿಇಟಿ/ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪದವಿ ಕೋರ್ಸ್ನಲ್ಲಿ ಓದಿರುವ ಪ್ರಮುಖ ವಿಷಯಗಳನ್ನು ಭೋಧಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://collegedunia.com/courses/bachelor-of-education-bed/how-to-become-a-teacher#2
13. ನಾನು ಬಿಕಾಂ ಮುಗಿಸಿದ್ದೇನೆ. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಕೆಲಸಕ್ಕೆ ಹೋಗುವುದೋ ಅಥವಾ ಮುಂದೆ ಓದುವುದೋ? ಪೈಥಾನ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ ಕೋರ್ಸ್ಗಳನ್ನು ಮಾಡುವುದು ಸೂಕ್ತವೇ? ಇದರಿಂದ ಕೆಲಸ ಸಿಗುವುದೇ?
14. ನಾನು ಎಂಬಿಎ ಪದವಿಯನ್ನು ಮಾಡುತ್ತಿದ್ದೇನೆ ಹಾಗೂ ಯುಪಿಎಸ್ಸಿಗೆ ತಯಾರಿ ಮಾಡುತ್ತಿದ್ದೇನೆ. ಮುಂದೆ ನಾನು ಕೆಲಸಕ್ಕೆ ಹೋಗುವುದೋ ಅಥವಾ ಯುಪಿಎಸ್ಸಿಗೆ ತಯಾರಿ ಮಾಡುವುದೋ ಎಂಬ ಯೋಚನೆಯಲ್ಲಿ ಇದ್ದೇನೆ. ನಿಮ್ಮ ಮಾರ್ಗದರ್ಶನ ನೀಡಿ.
15. ನಾನು ಕಂಸ್ಟçಕ್ಷನ್ ಮ್ಯಾನೇಜ್ಮೆಂಟ್ನಲ್ಲಿ ಎಂಟೆಕ್ ಮಾಡುತ್ತಿದ್ದೇನೆ. ಎಂಟೆಕ್ ಮುಗಿದ ಬಳಿಕ ನಾನು ಉದ್ಯೋಗಕ್ಕೆ ಸೇರುವುದೋ ಅಥವಾ ಸಂಶೋಧನೆಗೋ? ನನಗೆ ಪ್ರಾಧ್ಯಾಪಕ ವೃತ್ತಿ ಮಾಡುವ ಆಸೆಯೂ ಇದೆ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು. ನೀವು ಪರಿಶೀಲಿಸುತ್ತಿರುವ ಎಲ್ಲಾ ಆಯ್ಕೆಗಳು ವೃತ್ತಿಯ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳ ದೃಷ್ಟಿಯಿಂದ ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯೋಜನೆಯನ್ನು ಮಾಡಿ ಅದರಂತೆ ವೃತ್ತಿಯ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೀಕ್ಷಿಸಿ:
ನಾನು 2021 ರಲ್ಲಿ ಬಿಎ ಗೆ ಸೇರಿದ್ದೇನೆ. ನನಗೆ ಕೆಎಎಸ್ ಪರೀಕ್ಷೆ ಬರೆಯುವ ಹಂಬಲವಿದೆ. ನಾನು ಈಗಲೇ ತಯಾರಿ ನಡೆಸುವುದೋ ಅಥವಾ ಪದವಿ ಮುಗಿದ ಮೇಲೆ ತಯಾರಿ ಆರಂಭಿಸಿದರೆ ಉತ್ತಮವೋ ತಿಳಿಸಿ.
ಒಬ್ಬ ದಕ್ಷ ಕೆಎಎಸ್ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಆಯ್ಕೆಯ ಪ್ರಕ್ರಿಯೆಯಲ್ಲಿ ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ ಮತ್ತು ಅಭಿರುಚಿಯ ಆಧಾರದ ಮೇಲೆ ಕೆಎಎಸ್ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಸ್ವಯಂವಿಮರ್ಶೆ ಮಾಡುವುದು ಒಳ್ಳೆಯದು. ಆ ನಂತರ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಕಠಿಣವಾದ ಆಯ್ಕೆ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ನೀವು ಎರಡನೇ ವರ್ಷದ ಪದವಿ ಕೋರ್ಸ್ ಮಾಡುವಾಗಲೇ ಕೆಎಎಸ್ ಪರೀಕ್ಷೆಗೆ ತಯಾರಿ ಶುರು ಮಾಡುವುದು ಸೂಕ್ತ.
16. ನಾನು ಎಂಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಇತ್ತೀಚೆಗೆ ಹೊರಡಿಸಿದ ಸಿವಿಲ್ ಪೇದೆ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ಪೇದೆ ಹುದ್ದೆಗೆ ಸೇರಿದರೆ ಮುಂದಿನ ವಿದ್ಯಾಭ್ಯಾಸ ಕಡಿತಗೊಳ್ಳುವ ಆತಂಕವಿದೆ, ಹುದ್ದೆಯಲ್ಲಿದ್ದುಕ್ಕೊಂಡು ರೆಗ್ಯುಲರ್ ಪದವಿ ಪಡೆಯಲು ಅವಕಾಶವಿದೆಯೇ?
ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ರೆಗ್ಯುಲರ್ ಪದವಿಯನ್ನು ಮುಂದುವರೆಸಲು ಸಾಧ್ಯವಿಲ್ಲ. ಆದರೆ, ನೀವು ಈಗಾಗಲೇ ಎಂಎಸ್ಸಿ ಅಂತಿಮ ವರ್ಷದಲ್ಲಿರುವುದರಿಂದ ವೇತನರಹಿತ ರಜೆ ಸಾಧ್ಯವೇ ಅಥವಾ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಬಹುದೇ ಎಂದು ಪರಿಶೀಲಿಸಿ.
17. ನಾನು ರಾಜ್ಯ ಸರ್ಕಾರಿ ನೌಕರನಾಗಿದ್ದು ಕಾನ್ಸ್ಟೇಬಲ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದೂರ ಶಿಕ್ಷಣದ ಮೂಲಕ ಬಿಎ ಪದವಿಯನ್ನು ಪಡೆದಿದ್ದು, ಇಲಾಖೆಯಿಂದ ಎನ್ಓಸಿ(ನಿರಾಕ್ಷೇಪಣಾ ಪ್ರಮಾಣ ಪತ್ರ) ಪಡೆದಿರುವುದಿಲ್ಲ. ಇದರಿಂದಾಗಿ ಮುಂದೆ ಸರ್ಕಾರಿ ಉದ್ಯೋಗ ಪಡೆಯಲು ತೊಂದರೆಯಾಗುವುದೇ? ದಯಮಾಡಿ ತಿಳಿಸಿ.
ನೀವು ಈಗಲೂ ನಿಮ್ಮ ಮೇಲಧಿಕಾರಿಯವರೊಡನೆ ಸಮಾಲೋಚಿಸಿ, ಸರ್ಕಾರದಿಂದ ಘಟನೋತ್ತರ ಮಂಜೂರಾತಿಯನ್ನು ಪಡೆದುಕೊಳ್ಳಬಹುದು.
18. ಕೆಪಿಟಿಸಿಎಲ್ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡುವುದು, ಮನೆಯಲ್ಲೇ ಕುಳಿತುಕೊಂಡು ಓದುವುದೇ ಅಥವಾ ಕೋಚಿಂಗ್ ಕ್ಲಾಸ್ ಸೇರುವುದೇ? ಪರಿಹಾರ ತಿಳಿಸಿ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ಸ್ವಂತ ಪರಿಶ್ರಮದಿಂದ ಐಎಎಸ್/ ಕೆಎಎಸ್ ನಂತಹ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಆದ್ದರಿಂದ, ಕೋಚಿಂಗ್ ಸೆಂಟರ್ಗಳನ್ನು ಸೇರುವುದು ಕಡ್ಡಾಯವಲ್ಲ. ಹಾಗಾಗಿ, ನೀವೇ ತಯಾರಾಗಬಹುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೆ ಎನ್ನುವುದು ನಿಮ್ಮ ನಿರ್ಧಾರ.
19. ಶಿಕ್ಷಕರಾಗಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆ? ಹೌದು, ಎಂದಾದರೆ ಏಕೆ ಬರೆಯಬೇಕು?
ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಹಾಗಾಗಿ, ಶಿಕ್ಷಕರ ನೇಮಕಾತಿಗಾಗಿ ರಾಷ್ಟ್ರೀಯ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಶಿಕ್ಷಕರ ಅರ್ಹತೆಯನ್ನು ಪರಿಶೀಲಿಸುವ ಸಲುವಾಗಿ ಸಿಇಟಿ ಮತ್ತು ಎಸ್ಸಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಲ್ಲಿ ಈ ಅರ್ಹತೆಗಳು ಇವೆಯೇ ಎಂದು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.
20. ನಾನು 2021 ರಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಮುಗಿಸಿದ್ದೇನೆ. ಈಗ ನಾನು ಗೇಟ್ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಯಾವುದಾದರೂ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಮಾಡುವಾಸೆ. ಐಐಟಿಯಲ್ಲಿ ಮಾಡಿದರೆ ಉತ್ತಮವೇ? ಕೆಲವರು ಅಲ್ಲಿ ಮಾಡುವುದು ಉಪಯೋಗವಿಲ್ಲ ಎನ್ನುತ್ತಿದ್ದಾರೆ. ನನಗೆ ಗೊಂದಲವಾಗುತ್ತಿದೆ.
ಐಐಟಿ, ನಮ್ಮ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ, ಸ್ನಾತಕೋತ್ತರ ಪದವಿಯನ್ನು ಐಐಟಿ ಯಲ್ಲಿ ಮುಗಿಸಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಶುಭಹಾರೈಕೆಗಳು.
21. ನಾನು ಎಚ್ಆರ್ ಮತ್ತು ಮಾರ್ಕೆಟಿಂಗ್ನಲ್ಲಿ ಎಂಬಿಎ ಮಾಡುತ್ತಿದ್ದೇನೆ. ಈ ವಿಭಾಗಗಳಿಗೆ ಸಂಬಂಧಿಸಿದಂತೆ ಸರ್ಕಾರಿ ವಲಯವೂ ಸೇರಿದಂತೆ ಯಾವ ಉದ್ಯೋಗಾವಕಾಶಗಳಿವೆ?
ಎಂ.ಬಿ.ಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಎಂಬಿಎ ಕೋರ್ಸ್ ನಂತರ ಆಕರ್ಷಕ ವೃತ್ತಿಯ ಅವಕಾಶಗಳಿವೆ. ಐಟಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಸ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು. ಹಾಗೂ, ಯುಪಿಎಸ್ಸಿ/ಕೆಪಿಎಸ್ಸಿ ಪರೀಕ್ಷೆಯ ಮುಖಾಂತರ ಅನೇಕ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನೂ ಪಡೆದುಕೊಳ್ಳಬಹುದು. ಅನುಭವದ ನಂತರ ಸ್ವಂತ ಉದ್ಯಮವನ್ನೂ ಆರಂಭಿಸಬಹುದು.
22. ನನಗೀಗ 43 ವರ್ಷ. ನಾನು 1993–95 ರ ಬ್ಯಾಚ್ನಲ್ಲಿ ಐಟಿಐ ಮಾಡಿದ್ದೆ. ಈಗ ನಾನು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದೇನೆ. ನನಗೆ ಎಲ್ಎಲ್ಬಿ ಮಾಡುವ ಆಸೆ ಇದೆ. ಇದರ ವಯೋಮಿತಿ ಏನು? ಈ ಕೋರ್ಸ್ಗೆ ಯಾವ ಕಾಲೇಜು ಉತ್ತಮ ತಿಳಿಸಿ.
ಕಾನೂನು ವೃತ್ತಿಯನ್ನು ಅನುಸರಿಸಲು ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್ಎಲ್ಬಿ ಕೋರ್ಸ್ ಅಥವಾ ಪಿಯುಸಿ ನಂತರ 5 ವರ್ಷದ ಇಂಟಗ್ರೇಡೆಡ್ ಎಲ್ಎಲ್ಬಿ ಕೋರ್ಸ್ ಮಾಡಬೇಕು. ಪ್ರಮುಖವಾಗಿ, ನೀವು ಮಾಡುವ ಕೋರ್ಸಿಗೆ ಬಾರ್ ಕೌಂಸಿಲ್ ಅಫ್ ಇಂಡಿಯ ಮಾನ್ಯತೆಯಿರಬೇಕು. ಸಾಮಾನ್ಯವಾಗಿ, ಸಿಎಲ್ಎಟಿ/ಎಲ್ಎಸ್ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿಯಾಗುತ್ತದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಅನುಸಾರ ಈಗ ಎಲ್ಎಲ್ಬಿ ಕೋರ್ಸ್ ಮಾಡಲು ವಯೋಮಿತಿಯ ನಿರ್ಬಂಧವಿಲ್ಲ. ಆದರೂ, ನೀವು ಕೋರ್ಸ್ ಮಾಡಲು ಇಚ್ಛಿಸುವ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಈ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಿ. ಎಲ್ಎಲ್ಬಿ ಕೋರ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.getmyuni.com/llb-course#llb-admission-process