1. ನಾನು ಕಳೆದ ವರ್ಷ ಬಿಕಾಂ ಮುಗಿಸಿದ್ದು ಈಗ ಮುಂದೇನು ಮಾಡುವುದೆಂಬ ಗೊಂದಲದಲ್ಲಿದ್ದೇನೆ. ಎಂಬಿಎ, ಎಲ್ಎಲ್ಬಿ, ಸಿಎ, ಎಸಿಎಸ್, ಸಿಎಫ್ಎ ಆಯ್ಕೆಗಳಲ್ಲಿ ಯಾವುದು ಉತ್ತಮ?
ಈ ಎಲ್ಲಾ ಕೋರ್ಸ್ ಸಂಬAಧಿತ ವೃತ್ತಿಗಳಿಗೆ ಬೇಡಿಕೆಯಿದೆ; ಆದರೆ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ನಿರ್ಧರಿಸಬೇಕು.
ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು. ನಂತರ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ಇನ್ನಿತರ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ವೃತ್ತಿಯ ಅವಶ್ಯಕತೆಗಳಿಗೆ ತಕ್ಕಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
2. ಸರ್, ನಾನು ಎರಡು ವರ್ಷಗಳ ಹಿಂದೆ ಪಿಯುಸಿ (ವಿಜ್ಞಾನ) ಮುಗಿಸಿದ್ದು ಅನಾರೋಗ್ಯದಿಂದ ಬೇರೆ ಕೋರ್ಸ್ ಸೇರಲು ಆಗಲಿಲ್ಲ. ಈಗ, ಯಾವ ಕೋರ್ಸ್ ಮಾಡಬೇಕೆಂದು ತಿಳಿಯದಾಗಿದೆ. ಪದವಿಯ ನಂತರ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊAಡಿದ್ದೇನೆ. ಮೆಡಿಕಲ್/ಎಂಜಿನಿಯರಿAಗ್ ಅಲ್ಲದೆ ಸುಲಭವಾಗಿ ಮಾಡಬಹುದಾದ ಕೋರ್ಸ್ ಬಗ್ಗೆ ತಿಳಿಸಿ. ಪಿಯುಸಿ (ವಿಜ್ಞಾನ) ನಂತರ ಅಪಾರವಾದ ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ ಬಿ.ಎಸ್ಸಿ (ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಐಟಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಬಯೋಟೆಕ್ನಾಲಜಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ, ಅರಣ್ಯಶಾಸ್ತç, ಸೇರಿದಂತೆ ೫೦ಕ್ಕೂ ಹೆಚ್ಚು ಆಯ್ಕೆಗಳು), ಬಿ.ಫಾರ್ಮಾ, ಬಿಕಾಂ, ಬಿಕಾಂ (ಹಾನರ್ಸ್), ಬಿಎ (ಹಲವಾರು ಆಯ್ಕೆಗಳು), ಬಿಎ (ಹಾನರ್ಸ್) ಬಿಸಿಎ, ಬಿಬಿಎ, ಬಿ.ಡಿಸೈನ್, ಸಿಎ, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು. ನಿಮಗೆ ಆಸಕ್ತಿ, ಅಭಿರುಚಿಯಿರುವ ಕೋರ್ಸ್ ಮಾಡುವುದು ಸುಲಭ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://youtu.be/ChvTG9rg33A
3. ನನ್ನ ಮಗ ೧೦ನೇ ತರಗತಿಯಲ್ಲಿ ಓದುತ್ತಿದು,್ದ ಪಿಯುಸಿ (ವಾಣಿಜ್ಯ) ನಂತರ ಯಾವ ಕೋರ್ಸ್ ಮಾಡಬಹುದು? ಬಿಕಾಂ ಜೊತೆಗೆ ಸಿಎ ಮಾಡಬಹುದೇ?
ಅಕೌಂಟೆನ್ಸಿ ಕ್ಷೇತ್ರದಲ್ಲಿ ಒಲವು ಮತ್ತು ಸ್ವಾಭಾವಿಕವಾದ ಪ್ರತಿಭೆಯಿದ್ದಲ್ಲಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆAಟ್ ವೃತ್ತಿ ಅತ್ಯುತ್ತಮ ಆಯ್ಕೆ. ಪಿಯುಸಿ ನಂತರ, ಚಾರ್ಟೆಡ್ ಅಕೌಂಟೆAಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಫೌಂಡೇಷನ್ ಕೋರ್ಸ್ ಮಾಡಬೇಕು. ಬಿಕಾಂ (ಕನಿಷ್ಠ ಶೇ ೫೫) ನಂತರ, ನೇರವಾಗಿ ಸಿಎ ಮಧ್ಯಂತರ ಕೋರ್ಸ್ಗೆ ಅರ್ಹತೆ ಸಿಗುತ್ತದೆ. ಕನಿಷ್ಠ ೨ ೧/೨ ವರ್ಷದ ಆರ್ಟಿಕಲ್ಶಿಪ್ ತರಬೇತಿಯ ನಂತರ ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಇನ್ನಿತರ ಕೋರ್ಸ್ಗಳೆಂದರೆ ಬಿಕಾಂ (ಜನರಲ್, ಹಾನರ್ಸ್, ಬ್ಯಾಂಕಿAಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್ಡಬ್ಲು÷್ಯ, ಎಸಿಎಸ್, ಸಿಎಂಎ, ೫ ವರ್ಷದ ಇಂಟಿಗ್ರೇಟೆಡ್ ಎಲ್ಎಲ್ಬಿ ಇತ್ಯಾದಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/fuTaa5UjZCo
4. ಈಗ ಬಿ.ಎಸ್ಸಿ (ಸಸ್ಯಶಾಸ್ತç, ಜಿಯಾಲಜಿ) ಅಂತಿಮ ವರ್ಷದಲ್ಲಿದ್ದು, ಮುಂದೆ ಎಂ.ಎಸ್ಸಿ ಕೋರ್ಸ್ನಲ್ಲಿ ಮೈಕ್ರೊಬಯಾಲಜಿ ಅಥವಾ ಬಯೋಟೆಕ್ನಾಲಜಿ ಆಯ್ಕೆಗಳಲ್ಲಿ, ಸರ್ಕಾರಿ ವೃತ್ತಿಯನ್ನು ಅನುಸರಿಸಲು ಯಾವುದು ಉತ್ತಮ?
ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳ ಮೌಲ್ಯಮಾಪನ ಮಾಡಿ, ಅದರಂತೆ ಎಂ.ಎಸ್ಸಿ ಯಾವ ವಿಷಯದಲ್ಲಿ ಮಾಡುವುದೆಂದು ನಿರ್ಧರಿಸುವುದು ಸೂಕ್ತ. ನಮ್ಮ ಅಭಿಪ್ರಾಯದಲ್ಲಿ, ಮೈಕ್ರೊಬಯಾಲಜಿ ವಿಷಯಕ್ಕೆ ಖಾಸಗಿ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಿನ ಬೇಡಿಕೆಯಿದೆ ಎಂದೆನಿಸುತ್ತದೆ. ಸರ್ಕಾರಿ ವಲಯದ ಅವಕಾಶಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.
ಹಾಗೂ, ಬಿ.ಎಸ್ಸಿ ನಂತರ ಸರ್ಕಾರಿ ವೃತ್ತಿಯನ್ನು ಅನುಸರಿಸುತ್ತಾ, ಎಂ.ಎಸ್ಸಿ ಕೋರ್ಸ್ ಕೂಡಾ ನೀವು ಮಾಡಬಹುದು.
5. ಈಗ ಎಸ್ಎಸ್ಎಲ್ಸಿ ಓದುತ್ತಿರುವ, ಬೌದ್ಧಿಕ ಅಸಾಮರ್ಥ್ಯವಿರುವ ವಿದ್ಯಾರ್ಥಿ ಮುಂದೆ ಯಾವ ಕೋರ್ಸ್ ಮಾಡಬಹುದು?
ನೀವು ನೀಡಿರುವ ಕಿರುಮಾಹಿತಿಯಿಂದ ಸ್ಪಷ್ಟವಾದ ಮಾರ್ಗದರ್ಶನ ನೀಡುವುದು ಕಷ್ಟವೆನಿಸುತ್ತದೆ. ಸಾಮಾನ್ಯವಾಗಿ,
ಬೌದ್ಧಿಕ ಅಸಾಮರ್ಥ್ಯವನ್ನು ವಿವಿಧ ಹಂತಗಳಲ್ಲಿ ಗುರುತಿಸಲಾಗುತ್ತದೆ. ಈ ಮಾಹಿತಿ ಮತ್ತು ವಿದ್ಯಾರ್ಥಿಯಲ್ಲಿರುವ ಆಸಕ್ತಿ, ಅಭಿರುಚಿ, ವಿಶೇಷ ಸಾಮರ್ಥ್ಯಗಳ ಆಧಾರದ ಮೇಲೆ, ಮುಂದಿನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಚಿಕಿತ್ಸೆ, ಮಾರ್ಗದರ್ಶನ, ಶಿಕ್ಷಣ, ಪೋಷಣೆ, ಪ್ರೋತ್ಸಾಹದ ಅಗತ್ಯಗಳನ್ನು ನಿರ್ಧರಿಸಬಹುದು. ಅದರಂತೆ ಕಲೆ, ಸಾಹಿತ್ಯ, ಬರವಣಿಗೆ, ಅನುವಾದ, ಸಬ್ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್, ಪ್ಯಾರಾಮೆಡಿಕಲ್, ಸಾಫ್ಟ್ವೇರ್, ಕೋಡಿಂಗ್, ಡಿಸೈನಿಂಗ್, ಗುಣಮಟ್ಟದ ನಿಯಂತ್ರಣ ಮತ್ತು ನಿರ್ವಹಣೆ, ಆತಿಥ್ಯ ಮತ್ತು ಪ್ರವಾಸೋದ್ಯಮ, ಸ್ವಯಂ-ಉದ್ಯೋಗ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಶಿಕ್ಷಣದ ನಂತರ, ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಅನ್ವೇಷಿಸಬಹುದು. ಹಾಗೂ, ಸರ್ಕಾರಿ ಮತ್ತು ಖಾಸಗಿ ವಲಯದ ಅನೇಕ ಸಂಸ್ಥೆಗಳ ಬೆಂಬಲಿತ ಉದ್ಯೋಗ ಕಾರ್ಯಕ್ರಮಗಳೂ ಇವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ವಿಷಯ ತಜ್ಞರೊಂದಿಗೆ ಖುದ್ದಾಗಿ ಸಮಾಲೋಚಿಸುವುದು ಸೂಕ್ತ.
6. ನನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದು ಎಂಎ (ದೂರಶಿಕ್ಷಣ) ಮಾಡಬೇಕೆಂದುಕೊAಡಿದ್ದಾನೆ. ಎಂಎ (ದೂರಶಿಕ್ಷಣ) ಪದವಿಗೆ ಸರ್ಕಾರದ ಮಾನ್ಯತೆಯಿದೆಯೇ? ಈ ಎರಡೂ ಕೋರ್ಸ್ಗಳ ಮಾನ್ಯತೆಯಲ್ಲಿ ವ್ಯತ್ಯಾಸಗಳೇನು?
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ರಾಷ್ಟಿçÃಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ‘ಎ’ ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ. ಹಾಗಾಗಿ, ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮತ್ತು ಆನ್ಲೈನ್ ಮೂಲಕ ನಡೆಸುವ ಕೋರ್ಸ್ಗಳಿಗೆ ದೂರ ಶಿಕ್ಷಣ ಬ್ಯೂರೊ, ಯುಜಿಸಿ ಮಾನ್ಯತೆಯನ್ನು ಪಡೆದಿರಬೇಕು. ಪ್ರತಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಮಾನ್ಯತೆ ಪಡೆದಿರುವ ಕೋರ್ಸ್ಗಳ ಪಟ್ಟಿಯನ್ನು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸುತ್ತದೆ. ಈ ಜಾಲತಾಣದಲ್ಲಿ ಕಳೆದ ಹಲವಾರು ವರ್ಷಗಳಿಗೆ ಅನ್ವಯವಾಗುವ ಮಾನ್ಯತೆ ಪಡೆದ ಕೋರ್ಸ್ಗಳ ಮಾಹಿತಿಯೂ ಲಭ್ಯ.
ಆದರೆ, ಕಲಿಕೆಯ ದೃಷ್ಟಿಯಿಂದ ರೆಗ್ಯುಲರ್ ಮತ್ತು ದೂರಶಿಕ್ಷಣ ಕೋರ್ಸ್ಗಳಲ್ಲಿ ವ್ಯತ್ಯಾಸವಿರುವುದು ಸಹಜ. ಆದ್ದರಿಂದ, ಹೆಚ್ಚಾಗಿ ಖಾಸಗಿ ವಲಯದ ವೃತ್ತಿ ಸಂಬAಧಿತ ವೈಯಕ್ತಿಕ ಸಂದರ್ಶನಗಳಲ್ಲಿ, ವಿಷಯದ ಕುರಿತು ಸಂದರ್ಶಕರು ಉದ್ದೇಶಪೂರ್ವಕವಾಗಿ ಒತ್ತಡ ತರುವಂತ ಪ್ರಶ್ನೆಗಳನ್ನೂ, ಸನ್ನಿವೇಶಗಳನ್ನೂ ಸೃಷ್ಟಿಸಿ, ಅಭ್ಯರ್ಥಿಗಳ ಕಲಿಕೆಯ ಮಟ್ಟ, ವೃತ್ತಿ ಸಂಬAಧಿತ ಕೌಶಲಗಳು ಹಾಗೂ ವ್ಯಕ್ತಿತ್ವವನ್ನು ಪರಿಶೀಲಿಸುವುದು ಸಾಮಾನ್ಯ. ಇಂತಹ ಒತ್ತಡ ತರುವ ಪ್ರಶ್ನೆಗಳಿಂದ ಕಂಗಾಲಾಗದೆ, ಆತ್ಮವಿಶ್ವಾಸದಿಂದ ಉತ್ತರಿಸುವುದರಿಂದ ವ್ಯಕ್ತಿತ್ವದ ಪ್ರೌಢತೆ ಎದ್ದುಕಾಣುತ್ತದೆ. ಆದ್ದರಿಂದ, ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳನ್ನು ನಿರೀಕ್ಷಿಸಿ, ಸೂಕ್ತವಾಗಿ ತಯಾರಾಗುವುದೇ ಕಾರ್ಯತಂತ್ರವಾಗಿರಬೇಕು. ಈ ಕುರಿತು, ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://deb.ugc.ac.in/, https://www.youtube.com/watch?v=T_z3ngIeyWk
7. ನಾನು ಪಿಯುಸಿ ಮಾಡುತ್ತಿದ್ದು, ನೀಟ್ ಮತ್ತು ಸಿಇಟಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಆದರೆ, ಮೆಡಿಕಲ್ ಮತ್ತು ಎಂಜಿನಿಯರಿAಗ್ ಎರಡರಲ್ಲೂ ಆಸಕ್ತಿಯಿರುವುದರಿಂದ ಆಯ್ಕೆ ಮಾಡುವುದು ಹೇಗೆ? ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಮೆಡಿಕಲ್ ಮತ್ತು ಎಂಜಿನಿಯರಿAಗ್ಗಳೆರಡೂ ಬೇಡಿಕೆಯಲ್ಲಿರುವ ಕ್ಷೇತ್ರಗಳು. ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕೆ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
8. ನಾನು ಪಿಯುಸಿ ಮುಗಿಸಿ, ಸಿಇಟಿಗೆ ತಯಾರಿ ನಡೆಸುತ್ತಿದ್ದೇನೆ. ಯಾವ ಎಂಜಿನಿಯರಿAಗ್ ಕೋರ್ಸಿಗೆ ಉತ್ತಮ ಉದ್ಯೋಗಾವಕಾಶಗಳಿವೆ?
ಈಗ ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ, ಸಾಂಪ್ರದಾಯಿಕ ವಿಭಾಗಗಳಾದ ಎಲೆಕ್ಟಾçನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್, ಬಯೋಮೆಡಿಕಲ್, ಬಯೋಟೆಕ್, ಏರೋನಾಟಿಕಲ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್ ಇತ್ಯಾದಿ ವಿಭಾಗಗಳಿಗೂ ಸಾಧಾರಣವಾದ ಬೇಡಿಕೆಯಿದೆ. ಎಂಜಿನಿಯರಿAಗ್ನಲ್ಲಿ ಐವತ್ತಕ್ಕೂ ಹೆಚ್ಚಿನ ವಿಭಾಗಗಳಿದ್ದು. ಕೋರ್ಸ್ ಫಲಿತಾಂಶ ಉತ್ಕöÈಷ್ಟವಾಗಿದ್ದರೆ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗೂ, ಆಯಾ ವಿಭಾಗಗಳ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
9. ಸರ್, ನಾನು ಬಿಸಿಎ ಪದವಿಯನ್ನು ಮುಗಿಸಿದ್ದು, ಕೆಪಿಎಸ್ಸಿ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ, ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಈ ಕುರಿತ ಕೆಪಿಎಸ್ಸಿ ಅಧಿಸೂಚನೆಯಂತೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪಟ್ಟಿಯಲ್ಲಿ ಬಿಸಿಎ ಪದವಿ ಸೇರಿರುವುದಿಲ್ಲ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಎ ಪದವೀಧರರಿಗೆ ಅರ್ಹತೆಯಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ಕೆಪಿಎಸ್ಸಿ ಕಛೇರಿಯನ್ನು ಸಂಪರ್ಕಿಸಿ.