Q & A for Students – October 2022

Q1. ನಾನು ಅಂತಿಮ ವರ್ಷದ ಎಂಜಿನಿಯರಿAಗ್ (ಇಂಡಸ್ಟಿçಯಲ್ ಎಂಜಿನಿಯರಿAಗ್ ಮತ್ತು ಮ್ಯಾನೇಜ್‌ಮೆಂಟ್) ಮಾಡುತ್ತಿದ್ದೇನೆ. ನನಗೆ ಕೆಲಸಕ್ಕೆ ಹೋಗುವುದೋ ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗುವುದೋ ಎಂಬ ಗೊಂದಲವಿದೆ. ಒಂದು ವೇಳೆ ಎಂಬಿಎ  ಮಾಡುವುದಾದರೆ ಕ್ಯಾಟ್, ಜಿಮ್ಯಾಟ್  ಪರೀಕ್ಷೆಗಳಿಗೆ ಸರಿಯಾದ ವೇದಿಕೆ ಯಾವುದು?

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ, ಯಾವ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ, ಅದರಂತೆ  ವೃತ್ತಿಯೋಜನೆಯನ್ನು ತಯಾರಿಸಿ. ಉತ್ಪಾದನಾ ಕ್ಷೇತ್ರವನ್ನು ಹೊರತುಪಡಿಸಿ ಮಾರುಕಟ್ಟೆಯ ನಿರ್ವಹಣೆ, ಮಾನವ ಸಂಪನ್ಮೂಲದ ನಿರ್ವಹಣೆ, ಲಾಜಿಸ್ಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಎಂಬಿಎ ಮಾಡಬಹುದು.

ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಈಗ, ಎಂಬಿಎ ಪ್ರವೇಶ ಪರೀಕ್ಷೆಗಳ ತರಬೇತಿ ಆನ್‌ಲೈನ್ ಮತ್ತು  ಆಫ್‌ಲೈನ್ ಆಯ್ಕೆಗಳಲ್ಲಿ ಲಭ್ಯ. ಹಾಗಾಗಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಿ.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ.

https://www.youtube.com/c/EducationalExpertManagementCareerConsultant

Q2. ಸರ್, ನನಗೆ ಇಂಗ್ಲಿಷ್ ಮಾತನಾಡಲು ಹಿಂಜರಿಕೆಯಿದೆ.   ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಬರೆಯಲು ಹಾಗೂ ಮಾತನಾಡಬೇಕೆಂಬ ಆಸೆಯಿದೆ. ಇದಕ್ಕೆ ಯಾವ ರೀತಿಯ ಪರಿಣಾಮಕಾರಿ ತಯಾರಿ ಮಾಡಬೇಕು ಎಂದು ದಯವಿಟ್ಟು ತಿಳಿಸಿ.

ಇAಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:

  • ಆತ್ಮವಿಶ್ವಾಸ: ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಪ್ರಾರಂಭಿಸಿ.
  • ಓದುವುದು: ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
  • ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚ ಪಡದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
  • ಬರೆಯುವುದು: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಾಕ್ಯರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ, ಕಂಪ್ಯೂಟರ್‌ನಲ್ಲಿಯೇ ಸರಳ ವಾಕ್ಯಗಳನ್ನು ರಚಿಸಿ, ಕಾಲಕ್ರಮೇಣ ಕ್ಲಿಷ್ಟವಾದ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿ. ನೀವು ರಚಿಸಿದ ವಾಕ್ಯಗಳ ವ್ಯಾಕರಣದಲ್ಲಿನ ಲೋಪದೋಷಗಳನ್ನು ಆಪ್ಸ್ (ಮೈಕ್ರೊಸಾಫ್ಟ್ ವರ್ಡ್, ಗ್ರಾಮರ್ಲಿ ಇತ್ಯಾದಿ) ಮೂಲಕ ಸರಿಪಡಿಸಿ. ಆಪ್ಸ್ ಸೆಟಿಂಗ್ಸ್ ಅನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿ.
  • ವೀಡಿಯೊ, ಚಲನಚಿತ್ರಗಳ ವೀಕ್ಷಣೆ: ಕನ್ನಡದ ಉಪಶೀರ್ಷಿಕೆಗಳಿರುವ ಇಂಗ್ಲಿಷ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ÷್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವೀಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.
  • ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳಿವೆ (ಹೆಲೊ ಇಂಗ್ಲಿಷ್, ಡ್ಯುಒಲಿಂಗೊ, ಹೆಲೊ ಟಾಕ್ ಇತ್ಯಾದಿ). ಇವುಗಳನ್ನು ಬಳಸಿ.
  • ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ಅಗತ್ಯವಿದ್ದರೆ ಹೆಚ್ಚುವರಿ ಕೋರ್ಸ್ಗಳ ಮೂಲಕ ಪರಿಣತಿಯನ್ನು ಗಳಿಸಿ. ಶುಭಹಾರೈಕೆಗಳು.

Q3. ನಾನು ೨೦೧೪ರಲ್ಲಿ ೨ ವರ್ಷದ ಡಿಪ್ಲೊಮಾ ( ಅಗ್ರಿಕಲ್ಚರಲ್ ಎಂಜಿನಿಯರಿಂಗ್) ಕೋರ್ಸ್ ಮುಗಿಸಿ, ತದನಂತರ ಬಿ.ಟೆಕ್ ಪದವಿ ಮುಗಿಸಿದ್ದೇನೆ. ಆದರೆ, ನಾನು ಮಾಡಿರುವ ಡಿಪ್ಲೊಮಾ ಕೋರ್ಸ್ನಿಂದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಸಿಗುತ್ತದೆಯೇ?

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಿರಬೇಕು. ಮೂರು ವರ್ಷದ ಡಿಪ್ಲೊಮಾ, ಎರಡು ವರ್ಷದ ಐಟಿಐ ಕೋರ್ಸ್, ಎರಡು ವರ್ಷದ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆಒಸಿ, ಜೆಒಡಿಸಿ, ಜೆಎಲ್‌ಡಿಸಿ) ಕೋರ್ಸ್ಗಳನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಗಮನಿಸಿ:

https://ksp-recruitment.in

Q4. ಸರ್, ನನಗೆ ಯಾವುದೇ ವಿಷಯ ಬಹುಬೇಗ ಅರ್ಥವಾಗುವುದಿಲ್ಲ. ಗ್ರಹಿಕೆಯ ಶಕ್ತಿ ಕಡಿಮೆ ಇದೆ; ಗ್ರಹಿಸುವವರೆಗೂ ಕಷ್ಟಪಡುತ್ತೇನೆ. ಒಮ್ಮೆ ವಿಷಯವನ್ನು ಸರಿಯಾಗಿ ಗ್ರಹಿಸಿದ ಮೇಲೆ ಕಾರ್ಯತಂತ್ರವನ್ನು ಪಾಲಿಸುತ್ತೇನೆ. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ದಯವಿಟ್ಟು ಹೇಳಿ ಸರ್.

ನಮ್ಮ ಸಾಮರ್ಥ್ಯದ  ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಃಶಾಸ್ತçಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ನಿಮ್ಮ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ, ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ.

ನಿಮ್ಮ ಗ್ರಹಿಕೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ವೃದ್ಧಿಸಲು ಈ ಸಲಹೆಗಳನ್ನು ಅನುಸರಿಸಿ:

  • ಎಲ್ಲಾ ವಿಷಯಗಳಲ್ಲಿ ಗ್ರಹಿಕೆಯ ಕೊರತೆಯಿದೆಯೇ ಅಥವಾ ಯಾವುದಾದರೂ ಒಂದೆರಡು ವಿಷಯಗಳಲ್ಲಿ ಮಾತ್ರ ಈ ಸಮಸ್ಯೆಯಿದೆಯೇ ಎಂದು ಪರಿಶೀಲಿಸಿ.
  • ನಿಮಗಿರುವ ಗ್ರಹಿಕೆಯ ಸಮಸ್ಯೆಯ ಬಗ್ಗೆ ನಿಮ್ಮ ಅಧ್ಯಾಪಕರೊಡನೆ ಚರ್ಚಿಸಿ, ಅವರು ನೀಡುವ ಸಲಹೆಗಳನ್ನು ಪಾಲಿಸಿ.
  • ಉಪನ್ಯಾಸಗಳನ್ನು ಏಕಾಗ್ರತೆಯಿಂದ ಸಕ್ರಿಯವಾಗಿ ಆಲಿಸಬೇಕು.
  • ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯ ಜೊತೆಗೆ,  ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ. 
  • ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
  • ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು೩ಆರ್ (Sಕಿ೩ಖ) ನಂತಹ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
  • ಸಕಾರಾತ್ಮಕವಾದ ಆಶಾಭಾವನೆಯಿಂದ ಈ ಸಲಹೆಗಳನ್ನು ಅನುಸರಿಸಿದರೆ ಒಂದೆರಡು ತಿಂಗಳುಗಳಲ್ಲಿ ನಿಮ್ಮ ಕಲಿಕೆ ಸುಧಾರಿಸುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

ಪಿಯುಸಿ (ಪಿಸಿಎಂಬಿ) ಓದುತ್ತಿದ್ದೀನಿ. ಐದು ವರ್ಷಗಳಲ್ಲಿ ಎಂಬಿಬಿಎಸ್ ಬಿಟ್ಟು ವೃತ್ತಿಪರಳಾಗಲು ಯಾವ ಆಯ್ಕೆಗಳಿವೆ?

ಪಿಯುಸಿ (ಪಿಸಿಎಂಬಿ) ವಿದ್ಯಾರ್ಥಿಗಳಿಗೆ ಅಸಂಖ್ಯಾತ ಉನ್ನತ ಶಿಕ್ಷಣದ ಅವಕಾಶಗಳಿವೆ. ಉದಾಹರಣೆಗೆ, ಎಂಜಿನಿಯರಿAಗ್, ಆರ್ಕಿಟೆಕ್ಚರ್, ಡಿಸೈನ್, ಆಹಾರ ತಂತ್ರಜ್ಞಾನ, ಎನ್‌ಡಿಎ, ಐಎಎಸ್, ಮಾಧ್ಯಮ, ಪತ್ರಿಕೋದ್ಯಮ, ಕೃಷಿ ಸಂಬAಧಿತ ಕೋರ್ಸ್ಗಳು, ಬಿಎಸಿ ್ಸ(ಆನರ್ಸ್ ಸೇರಿದಂತೆ ೫೦ಕ್ಕೂ ಹೆಚ್ಚು ಆಯ್ಕೆಗಳು), ಬಿಸಿಎ, ಸಿಎ, ಎಸಿಎಸ್, ಐಸಿಡಬ್ಲು÷್ಯಎ ಸೇರಿದಂತೆ ಅನೇಕ ಕೋರ್ಸ್ ಆಯ್ಕೆಗಳಿವೆ. ಪ್ರಮುಖವಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಅಭಿರುಚಿ ಯಾವ ಕ್ಷೇತ್ರದಲ್ಲಿದೆ ಎಂದು ನೀವು ಅರಿತು, ವೃತ್ತಿಯೋಜನೆಯ ಮುಖಾಂತರ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. 

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

Q5. ಕೇವಲ ಬಿಎ ಪದವಿ ಪಡೆದವರಿಗೆ ಭವಿಷ್ಯ ಇದೆಯೇ? ಯಾವ ಕ್ಷೇತ್ರದಲ್ಲಿ ಕೆಲಸ ಹುಡುಕಬಹುದು? ಮುಂದೆ ಓದುವಷ್ಟು ಆರ್ಥಿಕ ಅನುಕೂಲವಿಲ್ಲ. ಕೆಲಸ ಪಡೆದುಕೊಂಡು ಮತ್ತೆ ಓದಬೇಕೆಂಬ ಆಸೆಯಿದೆ. ಯಾವ ಕ್ಷೇತ್ರದಲ್ಲಿ ಕೆಲಸ ಹುಡುಕಿದರೆ ಸೂಕ್ತ ಸರ್?

ಕಲಾ ವಿಭಾಗ ಅತ್ಯಂತ ವಿಸ್ತಾರವಾದ ಕ್ಷೇತ್ರ; ಹಾಗಾಗಿ, ಈ ವಿಭಾಗದಲ್ಲಿ ಅವಕಾಶಗಳು ಕಡಿಮೆ ಎನ್ನುವ ಅಭಿಪ್ರಾಯ ಸರಿಯಲ್ಲ. ಉದಾಹರಣೆಗೆ, ನಿಮಗಿರುವ ಈ ಅವಕಾಶಗಳನ್ನು ಗಮನಿಸಿ:

  • ಸರ್ಕಾರಿ ಕ್ಷೇತ್ರದ ಹೆಚ್ಚು ಕಡಿಮೆ ಎಲ್ಲಾ ಇಲಾಖೆಯ ಕೆಲಸಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಯಾಗುತ್ತಿದೆ.
  • ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕಿAಗ್ ನೇಮಕಾತಿಗಳೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗುತ್ತಿದೆ.
  • ಶಿಕ್ಷಣ ಸಂಬAಧಿತ ಡಿಪ್ಲೊಮಾ/ಪದವಿ ಕೋರ್ಸ್ ಮುಗಿಸಿ ಶಿಕ್ಷಕ ವೃತ್ತಿಯನ್ನು ಅರಸಬಹುದು.
  • ಸ್ವಂತ ಪರಿಶ್ರಮದಿಂದ ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು.
  • ಭಾಷೆ/ನಿರ್ದಿಷ್ಟ ವಿಷಯದಲ್ಲಿ ಅಭಿರುಚಿ ಮತ್ತು ಪರಿಣತಿಯಿದ್ದಲ್ಲಿ, ಅನುವಾದ/ವಿಷಯಾಭಿವೃದ್ಧಿ/ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಅರಸಬಹುದು.

ಬಿಎ ಪದವೀಧರರಿಗೆ ಇಂತಹ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ನಿಮಗೆ ಸೂಕ್ತವೆನಿಸುವ ಕೆಲಸದಲ್ಲಿ ತೊಡಗಿಸಿಕೊಂಡು ನಿಮ್ಮ ವೃತ್ತಿಯೋಜನೆಯಂತೆ ಅಲ್ಪಾವಧಿ/ಪೂರ್ಣಾವಧಿ ಸರ್ಟಿಫಿಕೆಟ್/ಡಿಪ್ಲೊಮಾ/ಸ್ನಾತಕೋತ್ತರ (ಎಂಎ, ಎಂಬಿಎ ಇತ್ಯಾದಿ) ಕೋರ್ಸ್ಗಳನ್ನು ಮಾಡಿ ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

Q6. ಸರ್, ನಾನು ಎಂಜಿನಿಯರಿಂಗ್ ಮಾಡಬೇಕು ಅಂದುಕೊAಡಿದ್ದೇನೆ. ನನಗೆ ಇಸಿ (ಎಲೆಕ್ಟಾçನಿಕ್ಸ್ ಅಂಡ್ ಕಮ್ಯೂನಿಕೇಷನ್ ) ಮತ್ತು ಸಿಎಸ್ (ಕಂಪ್ಯೂಟರ್ ಸೈನ್ಸ್) ವಿಭಾಗಗಳಲ್ಲಿ ಯಾವ ವಿಭಾಗವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗೊಂದಲವಿದೆ, ನನಗೆ ಗಣಿತ ಹಾಗೂ ರಸಾಯನಶಾಸ್ತçದ ವಿಷಯಗಳು ಸುಲಭವಾಗಿವೆ; ಭೌತಶಾಸ್ತç ಸ್ವಲ್ಪ ಮಟ್ಟಿಗೆ ಕಠಿಣವೆನಿಸುತ್ತದೆ. ಯಾವ ವಿಭಾಗವನ್ನು ತೆಗೆದುಕೊಂಡರೆ ನನ್ನ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ? ಇಸಿ ವಿಭಾಗಕ್ಕೆ  ಸರ್ಕಾರಿ ವಲಯದಲ್ಲಿ ಉತ್ತಮ ಸಂಭಾವನೆ ದೊರೆಯುತ್ತದೆಯೇ? ಆದ್ದರಿಂದ, ತಾವು ಉತ್ತಮವಾದ ಸಲಹೆಯನ್ನು ನೀಡಿ.

ಸದ್ಯಕ್ಕೆ, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ನಿಮಗೆ ಭೌತಶಾಸ್ತç ಕಠಿಣವೆನಿಸುವುದರಿಂದ ಕಂಪ್ಯೂಟರ್ ಸೈನ್ಸ್÷ವಿಭಾಗ ಸೂಕ್ತವೆನಿಸುತ್ತದೆ. ಇಸಿ ವಿಭಾಗದಲ್ಲಿ ಭೌತಶಾಸ್ತçದ ಸಿದ್ದಾಂತಗಳು, ಪರಿಕಲ್ಪನೆಗಳು, ಸೂತ್ರಗಳು ಹೆಚ್ಚಾಗಿರುತ್ತವೆ.

ಎಂಜಿನಿಯರಿಂಗ್ (ಇಸಿ) ನಂತರ ಸರ್ಕಾರಿ ಕ್ಷೇತ್ರದ ಬೃಹತ್ ಉದ್ದಿಮೆಗಳಲ್ಲಿ (ಬಿಎಸ್‌ಎನ್‌ಎಲ್, ಬಿಇಎಲ್, ಬಿಎಅರ್‌ಸಿ,  ಡಿಆರ್‌ಡಿಒ, ಐಎಸ್‌ಆರ್‌ಒ ಇತ್ಯಾದಿ), ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಖಾಸಗಿ ಕ್ಷೇತ್ರದ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳಿವೆ. ಇದೇ ರೀತಿ, ಎಂಜಿನಿಯರಿಂಗ್ (ಸಿಎಸ್) ವಿಭಾಗದಲ್ಲೂ ಆಕರ್ಷಕ ಉದ್ಯೋಗಾವಕಾಶಗಳಿವೆ. ಆದ್ದರಿಂದ, ಅಂತಿಮ ಆಯ್ಕೆಯ ಮೊದಲು ಎಂಜಿನಿಯರಿಂಗ್ (ಇಸಿ) ವಿಭಾಗದ ಪಠ್ಯಕ್ರಮ, ವಿಷಯಸೂಚಿಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

Q7. ನಾನು ಬಿಎ (ಅರ್ಥಶಾಸ್ತç) ಪದವಿ ಮುಗಿಸಿದ್ದೇನೆ. ಮುಂದೆ ಎಲ್‌ಎಲ್‌ಬಿ ಅಥವಾ ಎಂಎ, ಬಿ.ಇಡಿ ಆಯ್ಕೆಗಳಲ್ಲಿ ಯಾವುದನ್ನು ಮಾಡುವುದು ಸೂಕ್ತ ತಿಳಿಸಿ ಸರ್.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ಕ್ಷೇತ್ರವನ್ನು ಆರಿಸಿಕೊಂಡರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಲು ಸುಲಭವಾಗುತ್ತದೆ. ಹಾಗಾಗಿ, ವಕೀಲಿ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಎಲ್‌ಎಲ್‌ಬಿ ಮಾಡಬಹುದು ಮತ್ತು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿದ್ದಲ್ಲಿ ಎಂಎ, ಬಿ.ಇಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

ನಾನು ಎಂಕಾಂ ಮುಗಿಸಿ ಮೂರು ವರ್ಷ ಆಗಿದೆ. ಹೊಟ್ಟೆಪಾಡಿಗೆ ಚಹದಂಗಡಿ ಇಟ್ಟುಕೊಂಡಿದ್ದೀನಿ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ. ದಯವಿಟ್ಟು ಹೇಳಿ ಸರ್.

ನಿಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಅಭಿರುಚಿಯಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಸಾಧ್ಯತೆಗಳನ್ನು ಪರಿಶೀಲಿಸಿ:

  • ಸರ್ಕಾರಿ ಕ್ಷೇತ್ರದ ಹೆಚ್ಚು ಕಡಿಮೆ ಎಲ್ಲಾ ಇಲಾಖೆಯ ಕೆಲಸಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಯಾಗುತ್ತಿದೆ.
  • ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕಿAಗ್ ನೇಮಕಾತಿಗಳೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗುತ್ತಿದೆ.
  • ಶಿಕ್ಷಣ ಸಂಬಂಧಿತ ಡಿಪ್ಲೊಮಾ/ಬಿ.ಇಡಿ ಕೋರ್ಸ್ ಮುಗಿಸಿ ಶಿಕ್ಷಕ ವೃತ್ತಿಯನ್ನು ಅರಸಬಹುದು.
  • ಸ್ವಂತ ಪರಿಶ್ರಮದಿಂದ ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು.
  • ಭಾಷೆ/ನಿರ್ದಿಷ್ಟ ವಿಷಯದಲ್ಲಿ ಅಭಿರುಚಿ ಮತ್ತು ಪರಿಣತಿಯಿದ್ದಲ್ಲಿ, ಅನುವಾದ/ವಿಷಯಾಭಿವೃದ್ಧಿ/ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಅರಸಬಹುದು.
  • ಇದಲ್ಲದೆ, ನೀವು ಈಗ ನಡೆಸುತ್ತಿರುವ ವ್ಯಾಪಾರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಸಂತೃಪ್ತಿ ದೊರಕುವುದೇ ಎಂದೂ ಪರಿಶೀಲಿಸಿ.

Q8. ನಾನು ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ಮುಗಿಸಿ ಪಿಯುಸಿ (ಪಿಸಿಎಂಬಿ) ಮಾಡುತ್ತಿದ್ದೇನೆ. ಆದರೆ, ೩ ತಿಂಗಳಾದರೂ ವಿಷಯ ಕಠಿಣ ಆಗುತ್ತಿದೆ. ಯಾವ ರೀತಿ ಓದಬೇಕೆಂದು ಮಾಡಬೇಕೆಂದು ತಿಳಿಯುತ್ತಿಲ್ಲ. ವ್ಯಾಸಂಗದಲ್ಲಿ  ಹಿಂದೆ ಉಳಿಯುತ್ತಿದ್ದೇನೆ. ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವುದು ಹೇಗೆ? ನಿಮ್ಮ ಸಲಹೆ, ಸೂಚನೆಗಳನ್ನು ನೀಡಿ.

ಪಿಯುಸಿ ಇಂಗ್ಲಿಷ್ ಮಾಧ್ಯಮದಲ್ಲಿರುವುದರಿಂದ ನಿಮಗೆ ಕಷ್ಟವಾಗುತ್ತಿದ್ದಲ್ಲಿ, ಇಂಗ್ಲಿಷ್ ಭಾಷೆಯ ಪರಿಣತಿ ಗಳಿಸಲು ಇದೇ ತಿಂಗಳ ೩ನೇ ತಾರೀಖಿನ ಪ್ರಶ್ನೋತ್ತರದಲ್ಲಿರುವ ಸಲಹೆಗಳನ್ನು ಅನುಸರಿಸಿ.

ಆದರೆ ಭಾಷೆಯ ಸಮಸ್ಯೆಯಿಲ್ಲದೆ, ಉಪನ್ಯಾಸಗಳು ಅರ್ಥವಾಗದಿದ್ದಲ್ಲಿ ಈ ಸಲಹೆಗಳನ್ನು ಗಮನಿಸಿ:

  • ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯ ಜೊತೆಗೆ,  ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ. 
  • ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
  • ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು೩ಆರ್ (SQ3R) ನಂತಹ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

ಸರ್, ಪ್ರಥಮ ವರ್ಷದ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದೇನೆ, ನಾನು ಈಗಿನಿಂದಲೇ ಟಿಇಟಿ ಬರೆಯಲು ಅಭ್ಯಾಸ ಮಾಡಬೇಕೆಂದುಕೊಂಡಿದ್ದೇನೆ. ಬಿ.ಇಡಿ ಅಭ್ಯಾಸದ ಕಡೆ ಹೆಚ್ಚಿನ ಆಸಕ್ತಿ ಇಲ್ಲ. ಬಿ.ಇಡಿ ಹೆಚ್ಚಿನ ಅಂಕ ಪಡೆಯದೇ ಉತ್ತೀರ್ಣನಾದರೆ ಮುಂದೆ ತೊಂದರೆಯಾಗಬಹುದೇ? ಟಿಇಟಿ ಮತ್ತು ಸಿಇಟಿ  ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸೂಕ್ತವಾದ ಪುಸ್ತಕಗಳನ್ನು ತಿಳಿಸಿ.

ಒಬ್ಬ ಯಶಸ್ವಿ ಶಿಕ್ಷಕರಾಗಲು ವೃತ್ತಿಸಂಬಂಧಿತ ಜ್ಞಾನ ಮತ್ತು ಕೌಶಲಗಳನ್ನು ಬಿ.ಇಡಿ ಕೋರ್ಸಿನಲ್ಲಿ ಹೇಳಿಕೊಡಲಾಗುತ್ತದೆ. ಉದಾಹರಣೆಗೆ, ಬಾಲ್ಯ ಮತ್ತು ಬೆಳವಣಿಗೆ, ಕಲಿಕೆ ಮತ್ತು ಭೋಧನೆ, ಪಠ್ಯಕ್ರಮ, ಅಧ್ಯಾಪನ ಶಾಸ್ತç, ಸಂವಹನ, ತಾಳ್ಮೆ ಮುಂತಾದ ಶಿಕ್ಷಕ ವೃತ್ತಿಗೆ ಅತ್ಯಗತ್ಯವಾದ ವಿಷಯಗಳಿರುತ್ತವೆ. ಹಾಗಾಗಿ, ಬಿ.ಇಡಿ ಕೋರ್ಸನ್ನು ಗಂಬೀರವಾಗಿ ತೆಗೆದುಕೊಂಡು ವೃತ್ತಿಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಪಡೆಯಬೇಕು. ಇದೇ ನಿಮ್ಮ ಗುರಿಯಾಗಿರಲಿ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಕನಿಷ್ಠ ಶೇ ೫೦ ಅಂಕಗಳಿರಬೇಕು. ವೃತ್ತಿಯಲ್ಲಿ ಯಾವ ವಿಷಯವನ್ನು ಭೋಧಿಸುತ್ತೀರೋ ಅದಕ್ಕೆ ಅನುಗುಣವಾಗಿ ಟಿಇಟಿ ಪರೀಕ್ಷೆಯ ತಯಾರಿಯಿರಬೇಕು. ಪರೀಕ್ಷೆಯ ಮಾದರಿ, ಪುಸ್ತಕಗಳು ಇತ್ಯಾದಿ ಮಾಹಿತಿಗಾಗಿ ಗಮನಿಸಿ:

https://www.freshersnow.com/best-books-for-karnataka-tet-exam

Q9. ಸರ್, ನಾನು ಪಿಯುಸಿ (ವಿಜ್ಞಾನ) ವ್ಯಾಸಂಗ ಮಾಡಿ ಈಗ ಸ್ಪರ್ಧಾತ್ಮಕ ಪರೀಕ್ಷೆಗೆಂದು ಬಿಎ ಪದವಿ ಮಾಡುತ್ತಿದ್ದೇನೆ. ಪ್ರಸ್ತುತ ಬಿಎ ಮೊದಲನೇ ವರ್ಷ ಮುಗಿದಿದೆ. ಈಗ ನಮ್ಮ ತಂದೆಯವರು ಒಬ್ಬ ಉನ್ನತ ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿ ಬಳಿ ಕೇಳಿದ ಸಲಹೆಯ ಪ್ರಕಾರ ಪುನಃ ಬಿ.ಎಸ್ಸಿಗೆ ಸೇರು ಅಂತಿದ್ದಾರೆ. ಈಗ, ಯಾವುದಕ್ಕೆ ಪ್ರವೇಶ ಪಡೆಯಲಿ ಅಂತ ತುಂಬಾ ಗೊಂದಲದಲ್ಲಿದ್ದೀನಿ. ದಯವಿಟ್ಟು ಸಲಹೆ ನೀಡಿ ಸರ್.

ನೀವು ಈಗಾಗಲೇ ಬಿಎ ಮೊದಲ ವರ್ಷ ಮುಗಿಸಿದ್ದೀರಿ. ನಿಮ್ಮ ಗುರಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ಅರಸಬೇಕೆನ್ನುವುದಾದರೆ ಬಿಎ ಪದವಿಯನ್ನು ಮುಗಿಸುವುದು ಸೂಕ್ತ.

Q10. ೪ ವರ್ಷದ ಪದವಿಯ ನಂತರ ಎಂಎ ಮತ್ತು ಪಿಎಚ್‌ಡಿ ಕೋರ್ಸುಗಳು ಎಷ್ಟು ವರ್ಷ ಇರುತ್ತವೆ?

ನಾಲ್ಕು ವರ್ಷದ ಪದವಿಯನ್ನು ಮಾಡಿದ ಬಳಿಕ ಎಂಎ ಒಂದು ವರ್ಷದ್ದಾಗಿರುತ್ತದೆ. ಪದವಿ ಕೋರ್ಸಿನ ೪ನೇ ವರ್ಷ ಸಂಶೋಧನೆಗೆ ಮೀಸಲಾಗಿರುತ್ತದೆ ಹಾಗೂ ಪದವಿಯ ನಂತರ ನೇರವಾಗಿ ಪಿಎಚ್‌ಡಿ ಮಾಡಲು ಅರ್ಹತೆಯಿರುತ್ತದೆ. ಪಿಎಚ್‌ಡಿ ಮಾಡಲು ೩-೫ ವರ್ಷ ಬೇಕಾಗಬಹುದು.

Q11. ನಾನು ಎಂಜಿನಿಯರಿAಗ್ ಮಾಡಬೇಕು ಎಂದುಕೊಂಡಿದ್ದೇನೆ. ಕೃತಕ ಬುದ್ದಿಮತ್ತೆ ಮತ್ತು ಕಂಪ್ಯೂಟರ್ ಸೈನ್ಸ್ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿದರೆ ಮುಂದೆ ಅವಕಾಶಗಳಿವೆ?

ನೀವು ಕೇಳಿರುವ ಎರಡೂ ಕ್ಷೇತ್ರಗಳಿಗೆ ಬೇಡಿಕೆಯಿದೆ. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ನಿರ್ಧರಿಸಿ.

Q12. ನಾನು ೬ ರಿಂದ ೧೦ನೇ ತರಗತಿಯವರಗೆ ವಸತಿ ಶಾಲೆಯಲ್ಲಿ ಅಂಗವಿಕಲರ ಕೋಟಾದಲ್ಲಿ ಕಲಿತಿದ್ದೇನೆ. ಆದರೆ, ಪ್ರಸ್ತುತ ಕನಿಷ್ಠ ೪೦% ಅಂಗವೈಕಲ್ಯ ಬರುತ್ತಿಲ್ಲ. ಹೀಗಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಂಗವಿಕಲರ ಮೀಸಲಾತಿಯ ಅಡಿಯಲ್ಲಿ ಅರ್ಜಿ ಹಾಕಬಾರದೆಂದು ನಿರ್ಧರಿಸಿದ್ದೀನಿ. ಆದರೆ ನನ್ನ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ ಅಂಗವಿಕಲತೆಯನ್ನು ನಮೂದಿಸುವುದರಿಂದ ಮುಂದೆ ಕೆಲಸವನ್ನು ಪಡೆಯುವ ಹಂತದಲ್ಲಿ ಸಮಸ್ಯೆ ಆಗಬಹುದೇ?

ನಮ್ಮ ಅಭಿಪ್ರಾಯದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ವೃತ್ತಿಯನ್ನು ಅರಸುವ ಸಂದರ್ಭದಲ್ಲಿ ಸಮಸ್ಯೆ ಆಗಲಾರದು. ಆದರೆ, ವೈಯಕ್ತಿಕ ಸಂದರ್ಶನದಲ್ಲಿ ಈ ಕುರಿತು ವಿವರಣೆಯನ್ನು ಕೇಳಿದರೆ, ಸೂಕ್ತವಾದ ಉತ್ತರವನ್ನು ನೀಡಿ.

Q13. ಸರ್, ನಾನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಕರ್ತವ್ಯಕ್ಕೆ ದೀರ್ಘಕಾಲದವರೆಗೆ ಹಾಜರಾಗಲು ಸಾಧ್ಯವಾಗಿರುವುದಿಲ್ಲ. ಈ ಕಾರಣದಿಂದಾಗಿ ನನ್ನನ್ನು ಸಂಸ್ಥೆಯಿAದ ವಜಾ ಮಾಡಿರುತ್ತಾರೆ. ನಾನು ಸದ್ಯ ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುತ್ತೇನೆ. ಆದರೆ, ಮೇಲ್ಕಂಡ ಪ್ರಕರಣದಿಂದ ನಾನು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವಲ್ಲಿ ತೊಂದರೆ ಉಂಟಾಗುವುದೇ ಎಂಬ ಗೊಂದಲ ಕಾಡುತ್ತಿದೆ. ದಯವಿಟ್ಟು ಇದರ ಬಗ್ಗೆ ಪರಿಹಾರ ತಿಳಿಸಿ.

ನಿಮ್ಮ ನೇಮಕಾತಿಯ ನಿಯಮಗಳು, ನಿಭಂದನೆಗಳು ಹಾಗೂ ಸೇವೆಯಿಂದ ವಜಾ ಮಾಡಿರುವ ಕಾರಣಗಳನ್ನು ಪರಿಶೀಲಿಸದೆ ಸಲಹೆ ನೀಡಲಾಗುವುದಿಲ್ಲ. ಆದರೆ, ವೈಯಕ್ತಿಕ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ, ನೀವು ಸರ್ಕಾರಿ ಸೇವೆಯಿಂದ ವಜಾ ಆದ ಸಂದರ್ಭ ಮತ್ತು ಕಾರಣಗಳ ವಿವರಣೆಗಳನ್ನು ಸಂದರ್ಶಕರಿಗೆ ನೀಡಬೇಕಾಗುತ್ತದೆ.

Q14. ಜೀವಶಾಸ್ತçದಲ್ಲಿ ಎಂ.ಎಸ್ಸಿ ಮಾಡುತ್ತಿದ್ದೇನೆ. ಮುಂದಿನ ಭವಿಷ್ಯದ ಬಗ್ಗೆ ಏನು ಮಾಡಬೇಕು ತಿಳಿಸಿ.

ಎಂ.ಎಸ್ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೈವಿಧ್ಯಮಯ ಉದ್ಯೋಗಾವಕಾಶಗಳಿವೆ. ಉದಾಹರಣೆಗೆ, ಕೃಷಿ ಸಂಶೋಧನಾ ಸಂಸ್ಥೆಗಳು, ಸಮೀಕ್ಷಾ ಸಂಸ್ಥೆಗಳು, ಆಸ್ಪತ್ರೆಗಳು,

ವೈದ್ಯಕೀಯ ಸಂಶೋಧನೆ ಮತ್ತು ಪ್ರಯೋಗಾಲಯಗಳು, ಬೀಜ ಮತ್ತು ನರ್ಸರಿ ಸಂಸ್ಥೆಗಳು,

ಆಹಾರ ಸಂಸ್ಥೆಗಳು, ವನ್ಯಜೀವಿ ಮತ್ತು ಮೀನುಗಾರಿಕೆ ಇತ್ಯಾದಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸಬಹುದು. ಫ್ರಮುಖವಾಗಿ, ಎಂ.ಎಸ್ಸಿ ಕೋರ್ಸಿನಲ್ಲಿ ಯಾವ ವಿಷಯದಲ್ಲಿ ನಿಮಗೆ ಪರಿಣತಿಯಿದೆ ಎನ್ನುವುದರ ಜೊತೆಗೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಅಭಿರುಚಿ, ವೃತ್ತಿಯ ಆಯ್ಕೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ. ಹಾಗೂ, ಸರ್ಕಾರಿ ಇಲಾಖೆಗಳನ್ನು ಸೇರುವ ಆಸಕ್ತಿಯಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಲೇ ತಯಾರಿಯನ್ನು ಶುರು ಮಾಡಿಕೊಳ್ಳಬಹುದು. ಇದಲ್ಲದೆ, ನೂತನ ರಾಷ್ಟಿçÃಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅನುಷ್ಠಾನಗೊಳಿಸುತ್ತಿರುವ ಈ ಕಾಲಘಟ್ಟದಲಿ,್ಲ ಶಿಕ್ಷಕರ ಕೊರತೆಯೇ ಒಂದು ಸವಾಲಾಗಿದೆ. ಹಾಗಾಗಿ, ಈ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಬಿ.ಇಡಿ ಮಾಡಿ ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q15. ಸರ್, ನಾನು ೨ನೇ ವರ್ಷದ ಬಿ.ಎಸ್ಸಿ ಮಾಡುತ್ತಿದ್ದೀನಿ. ಆದರೆ, ಕಾಲೇಜಿಗೆ ಹೋಗುವುದಕ್ಕೆ ಮನಸ್ಸಿಲ್ಲ; ಮನಸ್ಸನ್ನು ಓದಿನ ಕಡೆಗೆ ಕೇಂದ್ರೀಕರಿಸುವುದು ಹೇಗೆ?

ಮನಸ್ಸನ್ನು ಓದಿನ ಕಡೆಗೆ ಕೇಂದ್ರೀಕರಿಸಲು ಬದುಕಿನಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಮತ್ತು ಗುರಿ ಅತ್ಯವಶ್ಯ. ಆದ್ದರಿಂದ, ಈ ಸಲಹೆಗಳನ್ನು ಗಮನಿಸಿ:

  • ಬದುಕಿನ ಗುರಿಗಳು: ಸ್ಪಷ್ಟವಾದ, ಸಾಧಿಸಬಹುದಾದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ.
  • ಸಕಾರಾತ್ಮಕ ಪರಿಸರ: ಸುತ್ತಮುತ್ತಲಿನ ಪರಿಸರ ಸಕಾರಾತ್ಮಕವಾಗಿರಲಿ.
  • ವಿಡಿಯೊ, ಪುಸ್ತಕಗಳು: ಸಾಧಕರ ಕುರಿತ ಪುಸ್ತಕಗಳನ್ನು ಓದುವುದರಿಂದಲೂ, ವಿಡಿಯೊಗಳನ್ನು ವೀಕ್ಷಿಸುವುದರಿಂದಲೂ, ಸಾಧಕರ ಯಶಸ್ಸಿನ ಹಿಂದಿರುವ ಪರಿಶ್ರಮದ ಕಥೆಗಳಿಂದ ನಿಮ್ಮ ಉತ್ಸಾಹವನ್ನೂ, ಸ್ವಯಂ-ಪ್ರೇರಣೆಯನ್ನೂ ಬೆಳೆಸಿಕೊಳ್ಳಬಹುದು.
  • ಪ್ರಶ್ನೆಗಾರಿಕೆ: ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯ ಜೊತೆಗೆ,  ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ. 
  • ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
  • ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು೩ಆರ್ (Sಕಿ೩ಖ) ನಂತಹ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

ಸಕಾರಾತ್ಮಕವಾದ ಆಶಾಭಾವನೆಯಿಂದ ಈ ಸಲಹೆಗಳನ್ನು ಅನುಸರಿಸಿದರೆ ಕಲಿಕೆಯಲ್ಲಿ ನಿಮ್ಮ ಆಸಕ್ತಿ, ಏಕಾಗ್ರತೆ ಹೆಚ್ಚುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/

Q16. ನಾನು ಪಿಹೆಚ್‌ಡಿ ಸಂಶೋಧನೆ ಮಾಡುತ್ತಿರುವ ಒಬಿಸಿ ವರ್ಗದ ವಿದ್ಯಾರ್ಥಿನಿ. ಆದರೆ, ೩೫ ವರ್ಷದ ನಂತರದವರಿಗೆ ಯಾವುದೇ ಸ್ಕಾಲರ್‌ಶಿಪ್ ಇಲ್ಲದೇ ಇರುವುದರಿಂದ, ಸಂಶೋಧನೆ ಕಷ್ಟವೆನಿಸುತ್ತಿದೆ. ಇದಕ್ಕೆ, ನಿಮ್ಮ ಸಲಹೆ ತಿಳಿಸಿ ಸರ್.

ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ನಮಗಿರುವ ಮಾಹಿತಿಯಂತೆ, ಕೆಲವು ಸೌಲಭ್ಯಗಳು ೩೫ ವರ್ಷದ ನಂತರವೂ ಲಭ್ಯ. ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಶಿಷ್ಯವೇತನ, ಅನುದಾನ,  ಸ್ಕಾಲರ್‌ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಅಗತ್ಯವಿದ್ದಲ್ಲಿ, ಬ್ಯಾಂಕ್ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಹೆಚ್ಚಿನ ವಿವರಗಳಿಗಾಗಿ ಈ ಎರಡು ಜಾಲತಾಣಗಳನ್ನು ಪರಾಮರ್ಶಿಸಿ:
https://scholarships.gov.in/
https://www.buddy4study.com/article/ugc-scholarship

Q17. ನಾನು ಒಂದೂವರೆ ವರ್ಷಗಳಿಂದ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವಿದ್ಯಾರ್ಹತೆ ಎಂ.ಎಸ್ಸಿ ಆಗಿದ್ದು ಕೆಸೆಟ್ (KSET) ಆರ್ಹತೆ ಕೂಡ ಹೊಂದಿರುತ್ತೇನೆ. ಇದೀಗ ಬಿ.ಇಡಿ ಮಾಡುವ ಮನಸ್ಸಾಗಿದು,್ದ ಸರ್ಕಾರಿ ನೌಕರನಾಗಿರುವುದರಿಂದ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಅವಕಾಶವಿದೆಯೇ? ಪಿ.ಎಚ್‌ಡಿಗೆ ಸೇರುವ ಮುಂಚೆಯೇ ಮೇಲಧಿಕಾರಿಗಳ ಪೂರ್ವಾನುಮತಿ ಇರಬೇಕೆ?

ಪೊಲೀಸ್ ನೌಕರಿಯಲ್ಲಿದ್ದು ಉನ್ನತ ಶಿಕ್ಷಣದ ಬಗ್ಗೆ ನಿಮಗಿರುವ ಆಸಕ್ತಿ ಶ್ಲಾಘನೀಯ. ನಿಮ್ಮ ಆಸಕ್ತಿಯ ಅನುಸಾರ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಅಥವಾ ಸೂಕ್ತ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಬಹುದು. ನಮಗಿರುವ ಮಾಹಿತಿಯಂತೆ, ಇಲಾಖೆಯ ಸೇವಾ ನಿಯಮಾವಳಿಗಳ ಪ್ರಕಾರ ಮೇಲಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯಬೇಕು. ಖಚಿತವಾದ ಮಾಹಿತಿಗಾಗಿ ನಿಮ್ಮ ಇಲಾಖೆಯಲ್ಲಿ ವಿಚಾರಿಸಿ.

Q18. ಎಂಎ ಮಾಡುವುದು ಹೇಗೆ ಮತ್ತು ಅರ್ಹತೆಗಳೆನು? ಯಾವ ವಿಶ್ವವಿದ್ಯಾಲಯ ಸೂಕ್ತ ಎಂದು ತಿಳಿಸಿ.

ಸಾಮಾನ್ಯವಾಗಿ ಬಿಎ ಪದವಿಯ ನಂತರ ಪದವಿಯಲ್ಲಿ ಓದಿರುವ ವಿಷಯದಲ್ಲಿ ಎಂಎ ಮಾಡಬಹುದು. ಆದರೆ, ಕೆಲವು ವಿಶ್ವವಿದ್ಯಾಲಯಗಳಲ್ಲಿ, ನಿರ್ದಿಷ್ಟ ವಿಷಯಗಳಿಗೆ ಸಂಬAಧಿಸಿದAತೆ, ಇಂತಹ ನಿಭಂದನೆಗಳಿಲ್ಲ. ಹಾಗಾಗಿ, ಎಂಎ ಮಾಡುವ ಉದ್ದೇಶ ಮತ್ತು ಯಾವ ವಿಷಯದಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿದ್ದಲ್ಲಿ, ಯಾವ ವಿಶ್ವವಿದ್ಯಾಲಯ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q19. ನಾನು ಪಿಯುಸಿ (ಕಲಾ ವಿಭಾಗ) ನಂತರ ಬಿಕಾಂ ಪದವಿ ಮಾಡಿದ್ದೇನೆ. ಮುಂದೆ ಬಿ.ಇಡಿ ಮಾಡಬೇಕು ಅಂದುಕೊಂಡಿದ್ದೇನೆ. ಬಿ.ಇಡಿ ಕೋರ್ಸ್ನಲ್ಲಿ ಭೂಗೋಳಶಾಸ್ತç ಮತ್ತು ಇತಿಹಾಸ ವಿಷಯವನ್ನು ತೆಗೆದುಕೊಳ್ಳಲು ಆಗುವುದೇ?

ನಮಗಿರುವ ಮಾಹಿತಿಯಂತೆ ಬಿ.ಇಡಿ ಕೋರ್ಸ್ನಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯಗಳನ್ನು ಪದವಿಯಲ್ಲಿ ಓದಿರಬೇಕು.

Q20. ನಾನು ಈಗ ದ್ವಿತೀಯ ಪಿಯುಸಿ (ವಾಣಿಜ್ಯ) ಓದುತ್ತಿದ್ದೇನೆ. ಮುಂದೆ ಸಿಎ ಬಿಟ್ಟು ಬೇರೆ ಯಾವ ಕೋರ್ಸ್ಗಳನ್ನು ಮಾಡಬಹುದು? ಯಾವ ಕೋರ್ಸ್ನಲ್ಲಿ ಹೆಚ್ಚು ಹಣ ಗಳಿಸಬಹುದು?

ಇತ್ತೀಚಿಗೆ ಬಿಕಾಂ ಕೋರ್ಸಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ, ಬಿಕಾಂ ಕೋರ್ಸಿನಲ್ಲಿ ಹತ್ತಕ್ಕೂ ಹೆಚ್ಚು ವರ್ಗೀಕರಣವಿದೆ (ಸ್ಟ್ರೀಮ್ಸ್). ಉದಾಹರಣೆಗೆ, ಜನರಲ್, ಬ್ಯಾಂಕಿAಗ್, ಇನ್ವೆಸ್ಟ್ಮೆಂಟ್,  ಅಕೌಂಟಿಂಗ್, ಟ್ಯಾಕ್ಶೇಷನ್, ಟೂರಿಸಮ್, ಎಕನಾಮಿಕ್ಸ್ ಇತ್ಯಾದಿ.

ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಇನ್ನಿತರ ಕೋರ್ಸ್ಗಳೆಂದರೆ ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯು, ಎಸಿಎಸ್, ಐಸಿಡಬ್ಲ್ಯು, ಸಿಎಂಎ,  ೫ ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ.   ಹಾಗಾಗಿ, ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಆದರೆ, ನೀವು ಕೇಳಿರುವ ಹಾಗೆ ಯಾವ ಕೋರ್ಸ್ ಮುಖಾಂತರ ಹೆಚ್ಚು ಹಣ ಗಳಿಸಬಹುದು ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಯಾವುದೇ ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟಕ್ಕಿದ್ದರೆ ಮಾತ್ರ ಸಂಪಾದನೆಯಲ್ಲಿ ಪ್ರಗತಿಯನ್ನು ಕಾಣಬಹುದು. ಆದ್ದರಿಂದ, ನೀವು ಅನುಸರಿಸುವ ವೃತ್ತಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಾಧಿಸುವುದು ನಿಮ್ಮ ಗುರಿಯಾಗಿರಲಿ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

Q21. ನಾನು  ಬಿಎ ಪದವಿಯನ್ನು ಮಾಡಿದ್ದೇನೆ. ಬಿಎ ಪದವಿ ಮುಗಿದ ನಂತರ ಯಾವ ಕೋರ್ಸ್ಗಳನ್ನು ಮುಂದೆ ಮಾಡಬಹುದು?

ಬಿಎ ಪದವಿಯ ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಎಂಎ, ಎಂಬಿಎ, ಬಿ.ಇಡಿ, ಎಲ್‌ಎಲ್‌ಬಿ, ಐಎಎಸ್ ಇತ್ಯಾದಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

ಪಿ.ಎಚ್‌ಡಿ ಮಾಡುವುದು ಹೇಗೆ ?

ಸಾಮಾನ್ಯವಾಗಿ ಪಿಎಚ್‌ಡಿ ಮಾಡಲು ಈ ಕೆಳಗೆ ತಿಳಿಸಿರುವ ಪ್ರಕ್ರಿಯೆ ಇರುತ್ತದೆ:

  • ಪಿಎಚ್‌ಡಿ ಕೋರ್ಸಿಗೆ ಅಗತ್ಯವಾದ  ಸಂಶೋಧನೆಯ ವಿಷಯವನ್ನು  ನಿರ್ಧರಿಸುವುದು ಸುಲಭವಲ್ಲ.  ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.
  • ಸಂಬAಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ನಂತರ ಪಿಎಚ್‌ಡಿ ಕೋರ್ಸ್ ಮಾಡಲು ಅರ್ಹತೆ ಸಿಗುತ್ತದೆ. ಆದರೆ, ಈಗ ಅನುಷ್ಠಾನಗೊಳ್ಳುತ್ತಿರುವ ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿಯ ನಂತರವೇ ಪಿಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ.
  • ಪಿಎಚ್‌ಡಿ ಕೋರ್ಸಿನಲ್ಲಿ ನೀವು ಮಾಡುವ ಸಂಶೋಧನೆ ಕುರಿತ ಸುದೀರ್ಘವಾದ ಪ್ರಸ್ತಾವನೆಯನ್ನು ತಯಾರಿಸಬೇಕು. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಅನುಮತಿ ಸಿಗುತ್ತದೆ. 
  • ಪ್ರತಿ ವಿಶ್ವವಿದ್ಯಾಲಯವು ಪ್ರತಿ ವರ್ಷ ತನ್ನ ಪಿಎಚ್‌ಡಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅವಕಾಶಗಳನ್ನು ಹೊಂದಿರುತ್ತದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆಗಳು, ಸಂದರ್ಶನಗಳು ಮತ್ತು ಸಂಶೋಧನಾ ಪ್ರಸ್ತಾವನೆಯ ಮೌಲ್ಯಮಾಪನ ಇತ್ಯಾದಿ ಪ್ರಕ್ರಿಯೆಗಳಿರುತ್ತದೆ.
  • ಪಿಎಚ್‌ಡಿ ಕೋರ್ಸಿಗೆ ಆಯ್ಕೆಯಾದ ನಂತರ ಸಂಶೋಧನೆಯನ್ನು ಪೂರ್ಣಗೊಳಿಸಿ ಮಹಾಪ್ರಬಂಧವನ್ನು (ಖಿhesis) ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇದಲ್ಲದೆ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಬೇಕು.
  • ನೀವು ಸಲ್ಲಿಸಿದ ಮಹಾಪ್ರಬಂಧವನ್ನು ವಿಷಯ ತಜ್ಞರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
  • ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಸ್ವೀಕಾರ ಮಾಡಿದ ನಂತರ ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ ೩-೫ ವರ್ಷ ಬೇಕಾಗಬಹುದು.

ಪ್ರತಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದತೆ ನಿಯಮಾವಳಿಗಳು, ಶುಲ್ಕಗಳು, ವಿದ್ಯಾರ್ಥಿ ವೇತನ, ಅನುದಾನ ಇತ್ಯಾದಿಗಳು ವಿಭಿನ್ನವಾಗಿರುತ್ತದೆ.

ನಾನು ಬಿಬಿಎ ಕೋರ್ಸ್ ಪೂರ್ಣಗೊಳಿಸಿದ್ದೇನೆ. ಎಂಬಿಎ (ಫೈನಾನ್ಸ್) ಮಾಡಬೇಕು ಎಂದುಕೊಂಡಿದ್ದೇನೆ. ಪಿಜಿಸಿಇಟಿಗೆ ಹೇಗೆ ಸಿದ್ಧತೆ ನಡೆಸಬೇಕು? ಮೈಸೂರಿನಲ್ಲಿ ಎಂಬಿಎ ಕಲಿಯಲು ಯಾವ ಕಾಲೇಜು ಉತ್ತಮ ಆಯ್ಕೆ?

ಪಿಜಿಸಿಇಟಿ ಪರೀಕ್ಷೆಯ ಮಾದರಿ, ವಿಷಯಸೂಚಿ ಇತ್ಯಾದಿಗಳನ್ನು ಅರ್ಥಮಾಡಿಕೊಂಡು, ನಿಮ್ಮ ಸಾಮರ್ಥ್ಯ ಮತ್ತು ಕುಂದುಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ನಡೆಸಬೇಕು. ಕ್ಯಾಟ್, ಜಿಮ್ಯಾಟ್ ಮುಂತಾದ ಪರೀಕ್ಷೆಗಳಿಗೆ ಹೋಲಿಸಿದರೆ ಪಿಜಿಸಿಇಟಿ ಸುಲಭವೆನ್ನಬಹುದು. ಹಾಗಾಗಿ, ಈ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದು ಉತ್ತಮ ಕಾಲೇಜಿನಲ್ಲಿ ಎಂಬಿಎ ಮಾಡಬಹುದು. ಈ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷಾ ತಜ್ಞತೆ, ಸಾಮಾನ್ಯ ಜ್ಞಾನ, ಪರಿಮಾಣಾತ್ಮಕ ತಾರ್ಕಿಕತೆ, ಸಾಮಾನ್ಯ ಬುದ್ದಿವಂತಿಕೆ ಮತ್ತು ತಾರ್ಕಿಕತೆ ವಿಭಾಗಗಳಿಂದ ೧೦೦ ಪ್ರಶ್ನೆಗಳಿರುತ್ತದೆ. ಮೈಸೂರಿನಲ್ಲಿ ಅನೇಕ ಉತ್ತಮ ಎಂಬಿಎ ಕಾಲೇಜುಗಳಿವೆ. ಹೆಚ್ಚಿನ ವಿವರಗಳಿಗಾಗಿ, ಗಮನಿಸಿ: 

https://www.shiksha.com/mba/karnataka-pgcet-exam-preparation