1. ನಾನು ಪಿಯುಸಿ ಪರೀಕ್ಷೆಯನ್ನು ಮುಂದಿನ ವರ್ಷ ಮುಗಿಸುತ್ತಿದ್ದು, ಮುಂದೆ ಎಂಬಿಬಿಎಸ್ ಅಥವಾ ಎಂಜಿನಿಯರಿಂಗ್ ಮಾಡುವುದೇ ಎಂಬಗೊಂದಲದಲ್ಲಿದ್ದೇನೆ. ದಯವಿಟ್ಟು ಮಾರ್ಗದರ್ಶನ ನೀಡಿ.
ನೀವು ಕೇಳಿರುವ ಎರಡೂ ಆಯ್ಕೆಗಳು ಉತ್ತಮವಾದದ್ದಾದರೂ, ನಿಮಗೆ ಯಾವುದು ಹೆಚ್ಚು ಸೂಕ್ತವೆಂದು ಮೌಲ್ಯಮಾಪನ ಮಾಡಬೇಕು. ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
2. ನಾನು ಅಂತಿಮ ವರ್ಷದ ಬಿ.ಟೆಕ್ ಮಾಡುತ್ತಿದ್ದು ಮುಂದಿನ ವರ್ಷ ಕೆಲಸ ಸಿಗುವುದೇ ಎಂಬ ಯೋಚನೆಯಾಗಿದೆ. ಹಾಗಾಗಿ, ವೃತ್ತಿಯ ದೃಷ್ಟಿಯಿಂದ ಮುಂದೆ ಎಂಟೆಕ್ ಮಾಡುವುದೇ ಅಥವಾ ಎಂಬಿಎ ಮಾಡುವುದು ಒಳ್ಳೆಯದೇ ತಿಳಿಸಿ.
ನೀವು ಬಿ.ಟೆಕ್ ಯಾವ ವಿಭಾಗದಲ್ಲಿ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ನಮ್ಮ ಅಭಿಪ್ರಾಯದಂತೆ, ಮುಂದಿನ ವರ್ಷ ಎಂಜಿನಿಯರಿAಗ್ ವಿದ್ಯಾರ್ಥಿಗಳ ಕ್ಯಾಂಪಸ್ ನೇರ ನೇಮಕಾತಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲ್ಯಗಳ ಮೌಲ್ಯಮಾಪನ ಮಾಡಿ ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿ. ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದ್ದಲ್ಲಿ ಎಂಟೆಕ್ ಮಾಡಬಹುದು; ಮ್ಯಾನೇಜ್ಮೆಂಟ್ ಕ್ಷೇತ್ರ ಅಥವಾ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಮಾಡುವ ಆಸಕ್ತಿಯಿದ್ದರೆ ಎಂಬಿಎ ಮಾಡಬಹುದು. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಕಲಿಕೆಯಾಗುವುದರಿಂದ, ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸನ್ನು ಸಾಧಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=1TcHjPKJ1gw
3. ನಾನೀಗ ದ್ವಿತೀಯ ಪಿಯುಸಿ ಮಾಡುತ್ತಿದ್ದು, ಮುಂದೆ ಏನು ಮಾಡುವುದೆಂದು ಯೋಚಿಸುತ್ತಿದ್ದೇನೆ. ಆದ್ದರಿಂದ, ವೃತ್ತಿ ಯೋಜನೆ ಎಂದರೇನು? ಮಾಡುವುದು ಹೇಗೆ? ದಯವಿಟ್ಟು ತಿಳಿಸಿ.
ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು. ನಂತರ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ. ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0
4. ಸರ್, ನಾನು ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ, ಇತಿಹಾಸದಲ್ಲಿ ಎಷ್ಟು ಪ್ರಯತ್ನ ಮಾಡಿದರೂ ಇಸವಿಗಳ ನೆನಪು ಉಳಿಯುತ್ತಿಲ್ಲ. ಆದ್ದರಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಭೂಗೋಳಶಾಸ್ತçವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ, ಇಂಗ್ಲಿಷ್ ಕಲಿಕೆ ಸ್ವಲ್ಪ ಕಷ್ಟವಾಗುತ್ತಿದೆ. ಇಂಗ್ಲಿಷ್ ಕಲಿಯಲು ನಿಮ್ಮ ಸಲಹೆ ಕೇಳಬಯಸುತ್ತೇನೆ. ಹಾಗೂ, ಯುಪಿಎಸ್ಸಿ ತಯಾರಿಗಾಗಿ ಪುಸ್ತಕಗಳ ಪಟ್ಟಿಯನ್ನು ನೀಡಿ.
ಇತಿಹಾಸದ ಪ್ರಮುಖ ಘಟನೆಗಳನ್ನು ಮತ್ತು ವರ್ಷಗಳನ್ನು ಸಾಮಾನ್ಯ ರೀತಿಯಲ್ಲಿ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸ. ಆದರೆ, ಇತಿಹಾಸದ ಅಧ್ಯಾಯಗಳನ್ನು ಆಸಕ್ತಿಯಿಂದ ಕಥಾರೂಪದಲ್ಲಿ ಓದುತ್ತಾ, ಘಟನೆಗಳನ್ನು ಕಾಲಾನುಕ್ರಮದಂತೆ, ಮನಸ್ಸಿನಲ್ಲಿ ಮರುಸೃಷ್ಠಿ ಮಾಡಿಕೊಳ್ಳುತ್ತಾ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಲ್ಲ. ಜೊತೆಗೆ, ಇತಿಹಾಸದ ಸಾಕ್ಷ÷್ಯಚಿತ್ರಗಳನ್ನು ಮತ್ತು ವಿಡಿಯೊಗಳನ್ನು ವೀಕ್ಷಿಸಿ. ಹಾಗೂ, ಓದುತ್ತಿರುವಾಗ ಟಿಪ್ಪಣಿಯನ್ನು ಬರೆದುಕೊಂಡು, ಘಟನೆಗಳ ಶೀರ್ಷಿಕೆಗಳನ್ನು ಮತ್ತು ಇಸವಿಗಳನ್ನು ಹೈಲೈಟ್ ಮಾಡಿಕೊಳ್ಳುವುದರಿಂದ, ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಯುಪಿಎಸ್ಸಿ ಪರೀಕ್ಷೆಯ ಪಠ್ಯಕ್ರಮವನ್ನು ಅರ್ಥೈಸಿಕೊಂಡು, ಅನೇಕ ಮೂಲಗಳಿಂದ ಆಯ್ದ ಅಧ್ಯಯನ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು. ವಿಷಯಕ್ಕೆ ಸಂಬAಧಿಸಿದ ಪುಸ್ತಕಗಳ ಮಾಹಿತಿಗಾಗಿ ಗಮನಿಸಿ: https://iasbaba.com/geography-strategy-2/
ನಿಮ್ಮ ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA
5. ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದು, ಮುಂದೆ ಮೂರು ವರ್ಷದ ಬಿಬಿಎ ಮಾಡುವುದೋ ಅಥವಾ ನಾಲ್ಕು ವರ್ಷದ ಬಿಬಿಎ ಮಾಡುವುದೋ ಎಂಬ ಗೊಂದಲದಲ್ಲಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.
ಬಿಸಿನೆಸ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ, ನಿಮಗೆ ಸಂಶೋಧನೆಯ ಮೂಲಕ ಪಿಎಚ್ಡಿ ಮಾಡುವ ಹಂಬಲವಿದ್ದರೆ, ನಾಲ್ಕು ವರ್ಷದ ಬಿಬಿಎ ಮಾಡಿ ನೇರವಾಗಿ ಪಿಎಚ್ಡಿ ಮಾಡುವ ಅವಕಾಶವಿದೆ. ಆದರೆ, ಉದ್ಯಮ ಕ್ಷೇತ್ರದಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳುವ ಯೋಜನೆಯಿದ್ದರೆ, ಮೂರು ವರ್ಷದ ಬಿಬಿಎ ಮಾಡಿ ನಂತರ ವೃತ್ತಿಯನ್ನು ಅನುಸರಿಸುತ್ತಾ, ಒಂದು ವರ್ಷದ ವಾರಾಂತ್ಯದ ಎಂಬಿಎ (ಎಕ್ಸಿಕ್ಯೂಟಿವ್) ಮಾಡಬಹುದು. ಅಥವಾ, ಅನುಕೂಲವಿದ್ದಲ್ಲಿ ಎರಡು ವರ್ಷದ ಎಂಬಿಎ (ರೆಗ್ಯುಲರ್) ಮಾಡಬಹುದು. ಬಿಬಿಎ/ಎಂಬಿಎ ಪದವೀಧರರಿಗೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
6. ನಾನು ಅಂತಿಮ ವರ್ಷದ ಬಿ.ಎಸ್ಸಿ ಮಾಡುತ್ತಿದ್ದು, ಮುಂದೆ ನೀಟ್ ಪರೀಕ್ಷೆಗೆ ತಯಾರಾಗಲೋ ಅಥವಾ ಕೆಲಸಕ್ಕೆ ಸೇರುವುದೋ ತಿಳಿಯದು. ನಮ್ಮದು ಬಡತನದ ಕುಟುಂಬ. ದಯವಿಟ್ಟು ಮಾರ್ಗದರ್ಶನ ನೀಡಿ.
ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಜೀವನದ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ.
ಬಿ.ಎಸ್ಸಿ ನಂತರ ಸೂಕ್ತವಾದ ಕೆಲಸಕ್ಕೆ ಸೇರಿ, ನಿಮ್ಮ ವೃತ್ತಿಯೋಜನೆಗೆ ಅನುಗುಣವಾಗಿ ಮುಂದೆ ಯಾವü ಕೋರ್ಸ್ ಮಾಡಬೇಕೆಂದು ತೀರ್ಮಾನಿಸಿ, ಸಂಜೆ ಕಾಲೇಜು/ದೂರ ಶಿಕ್ಷಣದ ಮೂಲಕ ಅಧ್ಯಯನವನ್ನು ಮುಂದುವರೆಸಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU
7. ನಾನು ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಮನೆಂiÀi ಜವಾಬ್ದಾರಿಯಿರುವುದರಿಂದ, ಕೆಲಸದಿಂದ ಬಂದ ನಂತರವೇ ಓದಲು ಸಾಧ್ಯ. ಕೋಚಿಂಗ್ ಪಡೆಯಲು ಸಾಧ್ಯವಿಲ್ಲ. ಯಾವುದನ್ನು ಹೇಗೆ, ಯಾವ ರೀತಿ ಓದುವುದು ತಿಳಿಯುತ್ತಿಲ್ಲ. ಪರಿಹಾರ ತಿಳಿಸಿ.
ಈ ಸಲಹೆಗಳನ್ನು ಗಮನಿಸಿ:
- ಸರ್ಕಾರಿ ವಲಯದಲ್ಲಿ ವೃತ್ತಿಯನ್ನು ಪಡೆಯಲು ಆಯೋಜಿಸುವ ಪರೀಕ್ಷೆಗಳು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಈವರೆಗಿನ ನಿಮ್ಮ ಅನುಭವವನ್ನು ಪರಿಗಣಿಸಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
- ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
- ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
- ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
- ಪರಿಣಾಮಕಾರಿ ಅಧ್ಯಯನಕ್ಕೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
8. ನಾನು ಮೊದಲು ಚೆನ್ನಾಗಿ ಓದುತ್ತಿದ್ದು, ಮೊಬೈಲ್ ತೆಗೆದುಕೊಂಡ ನಂತರ ಓದಲು ಆಗುತ್ತಿಲ್ಲ. ದಯವಿಟ್ಟು ನಿಮ್ಮ ಸಲಹೆ ನೀಡಿ.
ನೀವು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂದು ತಿಳಿಸಿಲ್ಲ. ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಈಗಾಗಲೇ ಅರಿವಾಗಿರುವುದು ಶ್ಲಾಘನೀಯ. ಮೊಬೈಲ್ ಬಳಕೆಯನ್ನು ಮಿತಿಗೊಳಿಸುವುದರ ಜೊತೆಗೆ, ಮೊಬೈಲ್ ತಂತ್ರಜ್ಞಾನದ ಸದುಪಯೋಗದಿಂದ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದೆಂದು ಗಮನಿಸಿ. ಉದಾಹರಣೆಗೆ, ಕಷ್ಟಕರವಾದ ವಿಷಯಗಳನ್ನು, ಪರಿಕಲ್ಪನೆಗಳನ್ನು ಗೂಗಲ್, ಯೂಟ್ಯೂಬ್ ಮುಂತಾದ ಸಾಧನಗಳಿಂದ ಅರ್ಥ ಮಾಡಿಕೊಳ್ಳುವುದು ಸಾಧ್ಯ. ಹಾಗೂ, ಇ-ಲರ್ನಿಂಗ್, ಇ-ಕ್ಲಾಸ್ರೂಮ್, ವೆಬಿನಾರ್ ಮುಂತಾದ ಮಾಧ್ಯಮಗಳಿಂದ ಉಪಯುಕ್ತವಾದ ಮಾಹಿತಿಯ ವಿತರಣೆ ಮತ್ತು ತಜ್ಞರ/ಉಪನ್ಯಾಸಕರ ಮಾರ್ಗದರ್ಶನವನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ಪಡೆಯಬಹುದು.
ನಿಮ್ಮ ಭವಿಷ್ಯದ ಕನಸುಗಳಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಸ್ಪಷ್ಟವಾದ, ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಿ. ಈ ಗುರಿಗಳು ದೃಡವಾಗಿದ್ದರೆ, ಸ್ವಯಂಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ.
ಆದ್ದರಿಂದ, ಮೊಬೈಲ್ನ ಸದುಪಯೋಗದ ಅಭ್ಯಾಸವನ್ನು ರೂಡಿಸಿಕೊಂಡು, ದೃಡಸಂಕಲ್ಪದಿAದಲೂ ಏಕಾಗ್ರತೆಯಿಂದಲೂ, ನಿಮ್ಮ ಗುರಿಗಳನ್ನು ಸಾಧಿಸುವತ್ತ ಕಠಿಣವಾದ ಪರಿಶ್ರಮವಿರಲಿ.
9. ನಾನು 2023ರಲ್ಲಿ ಬಿಎ ಪದವಿ ಮುಗಿಸಿದ್ದು ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಒಳ್ಳೆಯ ಕೋರ್ಸ್ ಬಗ್ಗೆ ತಿಳಿಸಿ.
ಕಲಾ ವಿಭಾಗ ವಿಸ್ತಾರವಾದ ಕ್ಷೇತ್ರ. ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಮುಂದೇನು ಮಾಡಬೇಕೆಂದು ನಿರ್ಧರಿಸಬಹುದು. ಬಿಎ ನಂತರ ಮಾಡಬಹುದಾದ ಕೋರ್ಸ್ಗಳೆಂದರೆ, ಬಿಎಲ್, ಬಿ.ಇಡಿ, ಎಂಎ, ಎಂಬಿಎ, ಎಂ.ಡಿಸೈನ್, ಪತ್ರಿಕೋಧ್ಯಮ, ಹೋಟೆಲ್ ಮ್ಯಾನೇಜ್ಮೆಂಟ್ ಇತ್ಯಾದಿ. ಇದಲ್ಲದೆ ಬಿಎ ನಂತರ ಆಸಕ್ತಿಯಿದ್ದಲ್ಲಿ, ಬಿಸಿನೆಸ್ ಅನಾಲಿಟಿಕ್ಸ್, ಡೇಟಾ ಸೈನ್ಸ್, ಸಾಫ್ಟ್ವೇರ್ ಡೆವಲಪ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಇತ್ಯಾದಿ ಕ್ಷೇತ್ರಗಳಲ್ಲಿ ಅಲ್ಪಾವದಿ/ಆನ್ಲೈನ್ ಕೋರ್ಸ್ಗಳನ್ನು ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಹಾಗೂ, ಸರ್ಕಾರಿ ವಲಯದ ಯುಪಿಎಸ್ಸಿ, ಕೆಪಿಎಸ್ಸಿ, ಎಸ್ಎಸ್ಸಿ, ರೈಲ್ವೇಸ್, ಬ್ಯಾಂಕಿAಗ್ ಮುಂತಾದ ಕ್ಷೇತ್ರಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ರೂಪಿಸಿಕೊಳ್ಳಬಹುದು.
10. ನನಗೆ ಡ್ರಾಯಿಂಗ್ನಲ್ಲಿ ಆಸಕ್ತಿಯಿದ್ದು, ಯಾವ ಕೋರ್ಸ್ ಮಾಡಬಹುದು? ಮುಂದೆ ಹೇಗೆ ಉಪಯೋಗವಾಗಬಹುದು? ಉತ್ತಮ ಕಾಲೇಜುಗಳ ಬಗ್ಗೆ ತಿಳಿಸಿ.
ನೀವು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂದು ತಿಳಿಸಿಲ್ಲ. ಡ್ರಾಯಿಂಗ್ ಸಂಬAಧಿತ ಅಸಂಪ್ರದಾಯಿಕ ವೃತ್ತಿಯನ್ನು ಅನುಸರಿಸಲು, ಆಸಕ್ತಿಯ ಜೊತೆಗೆ ಅಸಾಧಾರಣವಾದ ಪ್ರತಿಭೆ ಮತ್ತು ಕೌಶಲಗಳಿರಬೇಕು. ಹಾಗಾಗಿ, ಡ್ರಾಯಿಂಗ್ನಲ್ಲಿರುವ ನಿಮ್ಮ ಆಸಕ್ತಿಯಿಂದ ಭವಿಷ್ಯವನ್ನು ರೂಪಿಸಿಕೊಳ್ಳಬಹುದೇ ಅಥವಾ ಅರ್ಥಪೂರ್ಣವಾದ ಹವ್ಯಾಸವಾಗಬಹುದೇ ಎಂದು ನೀವು ಯೋಚಿಸಿ.
ಡ್ರಾಯಿಂಗ್ ಸಂಬಂಧಪಟ್ಟ ಕ್ಷೇತ್ರಗಳೆಂದರೆ ಆರ್ಕಿಟೆಕ್ಚರ್, ಅನಿಮೇಷನ್, ಗ್ರಾಫಿಕ್ ಡಿಸೈನಿಂಗ್, ಫ್ಯಾಷನ್ ಡಿಸೈನ್, ಪ್ರಾಡಕ್ಟ್ ಡಿಸೈನ್, ಇಂಟೀರಿಯರ್ ಡಿಸೈನ್, ಆರ್ಟ್ ಡೈರೆಕ್ಷನ್ ಇತ್ಯಾದಿ. ನಿಮಗೆ ಆಸಕ್ತಿಯಿರುವ, ಕ್ಷೇತ್ರವನ್ನು ಆಯ್ಕೆಮಾಡಿ, ಅದರಂತೆ ಸೂಕ್ತವಾದ ಕೋರ್ಸ್/ಕಾಲೇಜು ಆಯ್ಕೆ ಮಾಡಬಹುದು.
11. ಸರ್, ನಾನು ಎರಡು ವರ್ಷದ ಹಿಂದೆ ಎಂಬಿಎ (ಎಚ್ಆರ್) ಮಾಡಿ ಒಳ್ಳೆಯ ಕೆಲಸಕ್ಕಾಗಿ ಈಗಲೂ ತಡಕಾಡುತ್ತಿದ್ದೇನೆ. ಈಗಿರುವ ಕೆಲಸದಲ್ಲಿ ತೃಪ್ತಿಯಿಲ್ಲ. ಒಳ್ಳೆಯ ಕೆಲಸವಿಲ್ಲದೆ, ಜೀವನದಲ್ಲಿ ನೆಲೆಯೂರಲೂ ಆಗುತ್ತಿಲ್ಲ. ಈ ಕಷ್ಟದಿಂದ ಪಾರಾಗುವುದು ಹೇಗೆ? ದಯವಿಟ್ಟು ತಿಳಿಸಿ.
ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಹಾಗಿದ್ದರೆ ಮಾತ್ರ, ನಿಮ್ಮ ಕಾರ್ಯಾಚರಣೆ ಉದ್ಯೋಗದಾತರ ನಿರೀಕ್ಷೆಯಂತಿದ್ದು, ನಿಮಗೂ ವೃತ್ತಿಯಲ್ಲಿ ತೃಪ್ತಿಯಿರುತ್ತದೆ. ಹಾಗಾಗಿ, ಈಗಿರುವ ವೃತ್ತಿಯಲ್ಲಿ ತೃಪ್ತಿಯಿಲ್ಲದಿರುವ ಕಾರಣಗಳನ್ನು ಸ್ವಯಂ ಮೌಲ್ಯಮಾಪನದಿಂದ ಅರ್ಥಮಾಡಿಕೊಂಡು, ಇದೇ ವೃತ್ತಿಯಲ್ಲಿ ಪ್ರಗತಿ ಸಾಧ್ಯವೇ ಎಂದು ಪರಿಶೀಲಿಸಿ.
ಹಾಗೂ, ಬೇಡಿಕೆಯಲ್ಲಿರುವ ಎಂಬಿಎ (ಮಾನವ ಸಂಪನ್ಮೂಲ) ಪದವಿಯ ನಂತರವೂ ಉತ್ತಮ ಕೆಲಸ ಸಿಗದಿರಲು ಇನ್ನಿತರ ಕಾರಣಗಳನ್ನು ವಿಶ್ಲೇಷಿಸಬೇಕು. ಉದಾಹರಣೆಗೆ, ನಿಮ್ಮಲ್ಲಿರುವ ವಿಶಿಷ್ಟ ಅರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳನ್ನು ನಿಮ್ಮ ಬಯೋಡೇಟ ಅಚ್ಚುಕಟ್ಟಾಗಿ ಪ್ರತಿಬಿಂಬಿಸುತ್ತಿದೆಯೇ? ಅದೇ ರೀತಿ, ವೃತ್ತಿಯ ಸಂದರ್ಶನಗಳನ್ನು ಸೂಕ್ತವಾದ ಕಾರ್ಯತಂತ್ರದಿಂದಲೂ, ಆತ್ಮವಿಶ್ವಾಸದಿಂದಲೂ ಎದುರಿಸಲು ಆಗುತ್ತಿದೆಯೇ ಎಂದು ಪರಿಶೀಲಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
12. ನಾನು ಈಗ ದ್ವಿತೀಯ ಪಿ.ಯು.ಸಿ. (ಕಾಮರ್ಸ್) ಮಾಡುತ್ತಿದ್ದು ಸಿಎ ಮಾಡುವುದು ಕಷ್ಟವೆನಿಸುತ್ತಿದೆ. ಮುಂದೆ ಯಾವ ಕೋರ್ಸ್ ಮಾಡಬಹುದು?
ಪಿಯುಸಿ (ಕಾಮರ್ಸ್) ನಂತರ, ಬಿಕಾಂ, ಬಿಕಾಂ (ಹಾನರ್ಸ್), ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಐಟಿ ಸೇರಿದಂತೆ ಹಲವಾರು ಆಯ್ಕೆಗಳು), ಬಿಎ, ಬಿಸಿಎ, ಬಿಬಿಎ, ಬಿ.ಡಿಸೈನ್, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು.
ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳನ್ನು ಗಮನಿಸಿ, ಸೂಕ್ತವಾದ ಕಾರ್ಯತಂತ್ರ ಮತ್ತು ಕಠಿಣವಾದ ಪರಿಶ್ರಮವಿದ್ದಲ್ಲಿ, ಬೇಡಿಕೆಯಿರುವ ಸಿಎ ಕೋರ್ಸ್ ಮಾಡುವುದು ಅಸಾಧ್ಯವಲ್ಲ. ಸಿಎ ಮಾಡುವ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo