Q & A for Students – September 2022

Q1. ನಾನು ಬಿಎ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ನನ್ನ ಮುಂದಿನ ಭವಿಷ್ಯಕ್ಕೆ ಎಂಬಿಎ ಮತ್ತು ಎಂಎ ಕೋರ್ಸುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ನಿಮ್ಮ ಸಲಹೆ ನೀಡಿ.

ಎಂಬಿಎ ಮತ್ತು ಎಂಎ ಕೋರ್ಸ್ ನಂತರದ ಉದ್ಯೋಗಾವಕಾಶಗಳ ಸ್ವರೂಪ ಸಂಪೂರ್ಣವಾಗಿ ವಿಭಿನ್ನ. ನಿಮ್ಮ ವಿದ್ಯಾಭ್ಯಾಸದ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಇರಲಿ.

ಎಂಎ ಮಾಡುವುದಕ್ಕೆ ಸೂಕ್ತವಾದ ಕಾರಣಗಳಿಲ್ಲದಿದ್ದರೆ ಹೆಚ್ಚಿನ ಉದ್ಯೋಗಾವಕಾಶಗಳಿರುವ ಎಂಬಿಎ ಕೋರ್ಸ್ ಮಾಡುವುದು ಉತ್ತಮ. ಹಾಗೂ, ಎಂಬಿಎ ಕೋರ್ಸಿನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೈಯಕ್ತಿಕ ಜೀವನದಲ್ಲೂ ಉಪಯುಕ್ತ.

ಎಂಬಿಎ ನಂತರ ಆಕರ್ಷಕ ಅವಕಾಶಗಳಿವೆ. ಐಟಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್‌ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q2. ನಾನು ಬಿ.ಎಸ್ಸಿ ಪದವಿ ಮುಗಿಸಿ ಎಂ.ಎಸ್ಸಿ ಅಪರಾಧ ಶಾಸ್ತç ಮತ್ತು ವಿಧಿ ವಿಜ್ಞಾನ ಓದುತ್ತಿದ್ದೇನೆ. ಈ ವಿಷಯಗಳ ಕುರಿತ ಅವಕಾಶಗಳ ಬಗ್ಗೆ ತಿಳಿಸಿ.

ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅಪರಾಧ ಶಾಸ್ತç ಮತ್ತು ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್), ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ.

ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

Q3. ನಾನು 2015ರಲ್ಲಿ ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿಭಾಗಕ್ಕೆ ಪ್ರವೇಶ ಪಡೆದೆ. ಕಾರಣಾಂತರಗಳಿAದ ಯಾವುದೇ ತರಗತಿ, ಪರೀಕ್ಷೆಗಳಿಗೆ ಹಾಜರಾಗಲಿಲ್ಲ. ಈಗ ಮೂಲ ದಾಖಲಾತಿಗಳನ್ನು ಕೇಳಲು ಹೋದರೆ 17,000/- ರೂಪಾಯಿ ಹಣ ಪಾವತಿಸಲು ಹೇಳುತ್ತಿದ್ದಾರೆ. ಏಕೆ ಎಂದು ಕೇಳಿದರೆ, ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರವೇನು ತಿಳಿಸಿ?

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) 2018 ರ ಸುತ್ತೋಲೆಯ ಪ್ರಕಾರ ವಿಶ್ವವಿದ್ಯಾಲಯಗಳು ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ಸ್ವಯಂ-ದೃಢೀಕೃತ ಪ್ರತಿಗಳನ್ನು ಮಾತ್ರ ಪಡೆಯಬೇಕು. ಹಾಗೂ, ಪ್ರವೇಶ ಹಿಂಪಡೆದ ವಿದ್ಯಾರ್ಥಿಗಳು ಕಟ್ಟಿದ ಶುಲ್ಕಗಳನ್ನು ಕೆಲವು ನಿಯಮಾವಳಿಗಳ ಅನುಸಾರ ಮರುಪಾವತಿ ಮಾಡಬೇಕು. ಈ ವಿಚಾರವಾಗಿ, ವಿಶ್ವವಿದ್ಯಾಲಯಗಳು ಯುಜಿಸಿಯ ಸೂಚನೆಗಳನ್ನು ಪಾಲಿಸದಿದ್ದಲ್ಲಿ, ವಿದ್ಯಾರ್ಥಿಗಳು ಯುಜಿಸಿಗೆ ದೂರನ್ನು ಸಲ್ಲಿಸುವ ಅವಕಾಶವಿದೆ. ಆದ್ದರಿಂದ, ಈ ಸುತ್ತೋಲೆಯನ್ನು ಪರಾಮರ್ಶಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಿ. https://www.ugc.ac.in/ugc_notices.aspx?id=MjE3Ng==

Q4. ನಮ್ಮ ಸಂಬಂಧಿಕರ ಮಗಳು ಮಹಾರಾಷ್ಟçದಲ್ಲಿ ಪಿಯುಸಿ ಮಾಡುತ್ತಿದ್ದು ಮುಂದಿನ ವ್ಯಾಸಂಗವನ್ನು ಕರ್ನಾಟಕದಲ್ಲಿ ಮಾಡುವ ಇಚ್ಛೆ ಇದೆ. ಅವಳು ಕರ್ನಾಟಕದಲ್ಲಿ ಹೇಗೆ ಪ್ರವೇಶ ಪಡೆಯಬಹುದು?

Q5. ಹಾಗೂ, ಮುಂದೆ ಕರ್ನಾಟಕದಲ್ಲಿ ಉದ್ಯೋಗ ಪಡೆಯಬಹುದೇ?

ಪಿಯುಸಿ ನಂತರ ಯಾವ ಕೋರ್ಸ್ ಮಾಡಬೇಕು ಎನ್ನುವ ಮಾಹಿತಿಯನ್ನು ನೀವು ತಿಳಿಸಿಲ್ಲ. ಏಕೆಂದರೆ, ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶದ ನಿಯಮಾವಳಿಗಳಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ, ಎಂಬಿಬಿಎಸ್ ಕೋರ್ಸ್ ಮಾಡಲು ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕದ ನಿವಾಸಿಗಳಿಗಿರುವ ಕೋಟಾದ (ಶೇ 85) ಆಡಿಯಲ್ಲಿ ಪ್ರವೇಶ ಸಿಗುವ ಸಾಧ್ಯತೆಯಿಲ್ಲ. ಹಾಗಾಗಿ, ಅಖಿಲ ಭಾರತ ಕೋಟಾದ (ಶೇ 15) ಅಡಿಯಲ್ಲಿ ಅರ್ಜಿ ಸಲ್ಲಿಸಿ, ಕರ್ನಾಟಕದಲ್ಲಿ ಎಂಬಿಬಿಎಸ್ ಮಾಡಬಹುದು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿAಗ್) ಪ್ರವೇಶ ಪಡೆಯಬಹುದು.

ಪ್ರಮುಖವಾಗಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಅನುಸಾರ ವೃತ್ತಿ ಯೋಜನೆಯನ್ನು ಮಾಡಿ ಅದರ ಅನುಸಾರ ಕೋರ್ಸ್ ಆಯ್ಕೆ ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವಿದ್ಯಾಭ್ಯಾಸವನ್ನು ಎಲ್ಲಿ ಮುಗಿಸಿದರೂ ಸಹ, ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲಿ ಬೇಕಾದರೂ ಉದ್ಯೋಗವನ್ನು ಅರಸಬಹುದು.

Q6. ನಾನು ಬಿಎ ಪದವಿಯ ವಿದ್ಯಾರ್ಥಿ. ನನ್ನ ಐಚ್ಛಿಕ ವಿಷಯಗಳಾದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ಹಾಗೂ ಅಪರಾಧ ಶಾಸ್ತç ಮತ್ತು ವಿಧಿ ವಿಜ್ಞಾನ ಓದುತ್ತಿದ್ದು, ಇವೆರಡರಲ್ಲಿ ಎಂಎ ಮಾಡಲು ಯಾವುದು ಉತ್ತಮ ವೃತ್ತಿಪರ ಕೋರ್ಸ್ ಆಗಿದೆ ಎಂದು ಸಲಹೆ ನೀಡಿ.

ನೀವು ಓದುತ್ತಿರುವ ವಿಷಯಗಳು ಬೇಡಿಕೆಯಲ್ಲಿವೆ ಹಾಗೂ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದಾದ ಕ್ಷೇತ್ರಗಳು. ಆದ್ದರಿಂದ, ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಒಲವಿರುವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದು.

Q7. ನಾನು ಬಿಕಾಂ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಮುಂದೆ ಎಂಬಿಎ (ಎಂಟರ್‌ಪ್ರಿನರ್‌ಶಿಪ್) ಮಾಡುವ ಆಸೆ ಇದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ, ಉದ್ಯೋಗಾವಕಾಶಗಳು ಹಾಗೂ ಕಾಲೇಜಿನ ವಿವರ ತಿಳಿಸಿ.

ಎಂಬಿಎ-ಉದ್ಯಮಶೀಲತೆ (ಎಂಟರ್‌ಪ್ರಿನರ್‌ಶಿಪ್) ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕೋರ್ಸ್ ಮಾಡುವುದರಿಂದ ಉದ್ಯಮವನ್ನು ಸ್ಥಾಪಿಸಲು ಬೇಕಾಗುವ ಜ್ಞಾನ, ಕೌಶಲಗಳ ಅಭಿವೃದ್ಧಿ ಮತ್ತು ಪ್ರಕ್ರಿಯೆಯ ಅರಿವಾಗುತ್ತದೆ. ಈ ಕೋರ್ಸಿನಲ್ಲಿ ಸಣ್ಣ ವ್ಯಾಪಾರ ನಿರ್ವಹಣೆ, ಉದಯೋನ್ಮುಖ ಮಾರುಕಟ್ಟೆಗಳ ನಿರ್ವಹಣೆ, ರೀಟೇಲ್ ಮತ್ತು ಫ್ರಾಂಚೈಸಿAಗ್ ಅವಕಾಶಗಳು, ಸಾಮಾಜಿಕ ಉದ್ಯಮಶೀಲತೆ, ಉದ್ಯಮದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆ, ಹಣಕಾಸು, ಬಂಡವಾಳ ಹೂಡಿಕೆ, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ವಿಷಯಗಳನ್ನು ನಿಮ್ಮ ಆಸಕ್ತಿಯಂತೆ ಆರಿಸಿಕೊಳ್ಳಬಹುದು. ಈ ಕೋರ್ಸ್ ನಂತರ ನವೋದ್ಯಮ, ಸಣ್ಣ ಮತ್ತು ಮದ್ಯಮ ಗಾತ್ರದ ಉದ್ಯಮಗಳಲ್ಲಿ ಸೇವೆ ಸಲ್ಲಿಸಿ, ಅನುಭವದ ನಂತರ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು. ಎಂಟರ್‌ಪ್ರಿನರ್‌ಶಿಪ್ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಮುಂತಾದ ಸಂಸ್ಥೆಗಳಲ್ಲಿ ಈ ಕೋರ್ಸ್ ಮಾಡಬಹುದು. ಎಂಬಿಎ ಕೋರ್ಸಿನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಯಶಸ್ವಿಯಾಗಿ ರೂಪಿಸಲು ಉಪಯುಕ್ತ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

Q8. ನಾನು ಪ್ಯಾರಾ ಮೆಡಿಕಲ್ (ಡಿಎಮ್‌ಎಲ್‌ಟಿ) ಮಾಡುತ್ತಿದ್ದೀನಿ ಮತ್ತು ಫೊರೆನ್ಸಿಕ್ ಮಾಡುವ ಆಸೆ ಇದೆ. ನಾನು ಈ ಕೋರ್ಸ್ ಹೇಗೆ ಮಾಡಬಹುದು? ಫೊರೆನ್ಸಿಕ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಆದರೆ, ನಮ್ಮ ಮನೆಯಲ್ಲಿ ತುಂಬಾ ತೊಂದರೆಗಳಿವೆ; ನಮಗೆ ಖಾಸಗಿ ಕಾಲೇಜು ಫೀಸ್ ಕಟ್ಟಲು ಆಗುವುದಿಲ್ಲ; ಸರ್ಕಾರಿ ಕಾಲೇಜಿಗೆ ಸೇರಬಹುದಾ?

ನೀವು ಡಿಎಮ್‌ಎಲ್‌ಟಿ ಕೋರ್ಸ್ ನಂತರ ನೇರವಾಗಿ ಕೆಲಸಕ್ಕೆ ಸೇರಬಹುದು ಅಥವಾ ನಿಮ್ಮ ಇಚ್ಛೆಯಂತೆ ಬಿ.ಎಸ್ಸಿ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಮಾಡಬಹುದು.

ವಿಧಿ ವಿಜ್ಞಾನ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು. ಬಿ.ಎಸ್ಸಿ (ವಿಧಿವಿಜ್ಞಾನ) ಕೋರ್ಸ್ ಮಾಡಬಹುದಾದ ಕಾಲೇಜುಗಳ ವಿವರಕ್ಕಾಗಿ ಗಮನಿಸಿ:
https://collegedunia.com/bsc/forensic-science/karnataka-colleges

Q9. ನಾನು ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಬಿಎ ಪ್ರವೇಶ ಪಡೆದಿರುತ್ತೇನೆ. ವಿಶ್ವವಿದ್ಯಾನಿಲಯಗಳಲ್ಲಿ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ತೆಗೆದುಕೊಳ್ಳುವುದು ಹೇಗೆ ಎಂದು ದಯವಿಟ್ಟು ತಿಳಿಸಿ.

ಅತ್ಯುತ್ತಮ ಸಾಧನೆ ಮಾಡುವ ಮೈಸೂರು ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿಯಮಾವಳಿಗಳ ಅನುಸಾರ ಚಿನ್ನದ ಪದಕವನ್ನು ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಸಂಪ್ರದಾಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ:
https://uni-mysore.ac.in/sites/default/files/content/provisional_list_of_102nd_ug_gold_medal.pdf

Q10. ನನ್ನ ಮಗಳು ದ್ವಿತೀಯ ಪಿಯುಸಿ ಮಾಡುತ್ತಿದ್ದಾಳೆ. ಮುಂದೆ, ಕಂಪ್ಯೂಟರ್ ಸೈನ್ಸ್ ಮಾಡಬೇಕೆಂದಿದ್ದಾಳೆ. ಅದಕ್ಕೆ ಭವಿಷ್ಯ ಇದೆಯಾ? ಸರ್ಕಾರಿ ನೌಕರಿ ಸಿಗುತ್ತದೆಯೇ?

ಕಂಪ್ಯೂಟರ್ ಸೈನ್ಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಪಿಯುಸಿ ನಂತರ ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್) ಅಥವಾ ಬಿಸಿಎ ಮಾಡಿ, ಖಾಸಗಿ ಕ್ಷೇತ್ರದಲ್ಲಿನ ಆಕರ್ಷಕ ಉದ್ಯೋಗಾವಕಾಶಗಳನ್ನು ಅರಸಬಹುದು. ಸರ್ಕಾರಿ ನೌಕರಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪಡೆಯಬಹುದು.

Q11. ನಾನು ಬಿಇ (ಮೆಕ್ಯಾನಿಕಲ್ ಎಂಜಿನಿಯರಿAಗ್) ಪದವೀಧರ. ಮುಂದೆ, ನಾವು ಟಿಇಟಿ ಪರೀಕ್ಷೆಗೆ ಅರ್ಹರೇ? ನಾವು ಯಾವ ವಿಷಯದಲ್ಲಿ ಭೋದನಾಹ9ರು? ಈ ಬಗ್ಗೆ ಮಾಹಿತಿ ತಿಳಿಸಿ. ಧನ್ಯವಾದಗಳು..

ನಮಗಿರುವ ಮಾಹಿತಿಯಂತೆ ಎಂಜಿನಿಯರಿAಗ್ ಪದವೀಧರರು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಗಳಲ್ಲಿ 6-8ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಭೋಧಿಸಬಹುದು. ಆದರೆ, ಇದೇ ವರ್ಷದ ನವೆಂಬರ್ 6ನೇ ದಿನಾಂಕ ನಡೆಯಲಿರುವ ಟಿಇಟಿ ಪರೀಕ್ಷೆಯ ಅಧಿಸೂಚನೆಯಲ್ಲಿ ಎಂಜಿನಿಯರಿAಗ್ ಪದವೀಧರರ ಅರ್ಹತೆಯ ಬಗ್ಗೆ ಸೂಚನೆಯಿಲ್ಲ. ಹಾಗಾಗಿ, ಖಚಿತವಾದ ಮಾಹಿತಿ ಮತ್ತು ಇನ್ನಿತರ ನಿಯಮಾವಳಿಗಾಗಿ ಗಮನಿಸಿ:

https://schooleducation.kar.nic.in/indexKn.html

Q12. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಮುಂದೆ ಬಿ.ಇಡಿ ಮಾಡಲೇ ಅಥವಾ ಎಂಕಾA ಮಾಡಲೇ ಎನ್ನುವ ಗೊಂದಲವಿದೆ. ಎಲ್ಲದಕ್ಕೂ ಹಣಕಾಸಿನ ತೊಂದರೆ ಅಡ್ಡಿಯಾಗುತ್ತಿದೆ. ಇದರಿಂದ ರೋಸಿ ಹೋಗಿದ್ದೇನೆ. ಎಲ್ಲರೂ ಒಂದೊAದು ತರ ಹೇಳುತ್ತಿದ್ದಾರೆ. ಮುಂದೇನು ಮಾಡಲಿ ಗುರುಗಳೇ?

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಜೊತೆಗೆ, ನಿಮಗೆ ಸಹಾಯವಾಗಬಹುದಾದ ಅನೇಕ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು. ವೃತ್ತಿ ಯೋಜನೆಯನ್ನು ಮಾಡುವ ಪ್ರಕ್ರಿಯೆ ಕುರಿತ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

ಬಿಕಾಂ ಪದವಿ ಹೊಂದಿದವರು ಕೂಡ ಸಾಫ್ಟ್ವೇರ್ ಎಂಜಿನಿಯರ್ ಆಗಬಹುದೇ? ಇದಕ್ಕೆ ಏನು ಓದಬೇಕು ಹಾಗೂ ಇದರ ಬೇಡಿಕೆ ಹೇಗಿದೆ ಎಂದು ತಿಳಿಸಿ.

ಸಾಫ್ಟ್ವೇರ್ ಬೇಡಿಕೆಯಲ್ಲಿರುವ ಕ್ಷೇತ್ರ. ನೀವು ಪಿಯುಸಿ/ಪದವಿಯಲ್ಲಿ ಗಣಿತವನ್ನು ಓದಿ, ಕನಿಷ್ಠ ಶೇ 50 ಅಂಕಗಳನ್ನು ಗಳಿಸಿದ್ದರೆ, ಆಯ್ದ ಕೆಲವು ಕಾಲೇಜುಗಳಲ್ಲಿ ಎಂಸಿಎ ಮಾಡಿ ಸಾಫ್ಟ್ವೇರ್ ವೃತ್ತಿಯನ್ನು ಅರಸಬಹುದು. ಗಣಿತ ಓದಿಲ್ಲದಿದ್ದರೆ, ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್ಗಳಾದ ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ ಕೋರ್ಸ್ಗಳನ್ನು ಮಾಡಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Q13. ಓದಿ ಉತ್ತಮ ಅಂಕ ಪಡೆಯುವುದು ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗಲೆಂದು. ಅಂದರೆ, ಎಲ್ಲರೂ ಓದುವುವುದು ಹಣದ ಚೀಲ ಹಿಡಿಯುವುದಕ್ಕಾಗಿಯೇ; ಯಾರಿಗೂ ಜ್ಞಾನಾರ್ಜನೆ ಬೇಕಿಲ್ಲ ಅನಿಸುತ್ತದೆ. ಆದರೂ, ಚೆನ್ನಾಗಿ ಕಲಿತು ಜೀವನದಲ್ಲಿ ಮುಂದೆ ಬರುವುದು ಹೇಗೆ ಎಂದು ಹೇಳಿಕೊಡುವಿರಾ ಸರ್?

ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಮೂರು ಮೂಲಭೂತ ಅಂಶಗಳ ಅಗತ್ಯವಿದೆ. ಒಂದು, ನಮಗಿಷ್ಟವಿರುವ ವಿಷಯದ ಬಗ್ಗೆ ಜ್ಞಾನಾರ್ಜನೆ, ಎರಡು, ನಾವು ಕಲಿತ ಜ್ಞಾನವನ್ನು ವೃತ್ತಿಯಲ್ಲಿ ಉಪಯೋಗಿಸಲು ಅಗತ್ಯವಾದ ಪ್ರಾಥಮಿಕ ಮತ್ತು ವೃತ್ತಿ ಸಂಬAಧಿತ ಕೌಶಲ್ಯಗಳು (ಉದಾಹರಣೆಗೆ, ಸೇವಾ ಮನೋಭಾವ, ಜ್ಞಾಪಕ ಶಕ್ತಿ, ಗಣಿತದಲ್ಲಿ ತಜ್ಞತೆ, ಸಂಖ್ಯಾಶಾಸ್ತ್ರ ತಜ್ಞತೆ, ಕ್ರಮಾವಳಿ, ವಿಶ್ಲೇಷಾತ್ಮಕ ಕೌಶಲ, ದತ್ತಾಂಶ ನಿರ್ವಹಣೆ, ಯೋಜನೆಯ ನಿರ್ವಹಣೆ, ನಾಯಕತ್ವದ ಸಾಮರ್ಥ್ಯ ಇತ್ಯಾದಿ). ಮೂರನೆಯ ಮತ್ತು ಅತಿ ಮುಖ್ಯವಾದ ಅಂಶವೇನೆAದರೆ ನಿಮ್ಮ ಮನೋಭಾವ ಅಥವಾ ನಿಮ್ಮ ನಿಲುವುಗಳು (ಪ್ರಾಮಾಣಿಕತೆ, ನಿಷ್ಠೆ, ಸ್ವಯಂ ಪ್ರೇರಣೆ, ಆಶಾಭಾವನೆ, ಉತ್ಸಾಹ, ದೃಡತೆ, ಸಹಕಾರ ಇತ್ಯಾದಿ).

ಇವೆಲ್ಲದರ ಜೊತೆಗೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳನ್ನು ಸಾಧಿಸುವ ಆತ್ಮವಿಶ್ವಾಸವಿದ್ದರೆ, ನೀವು ಯಶಸ್ಸನ್ನು ಗಳಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ:

http://www.vpradeepkumar.com/master-the-triangle-of-success-knowledge-skills-attitudes/

Q14. ನಾನು ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಕಾರಣಾಂತರದಿAದ ಬಿಎ ಪದವಿಯನ್ನು ದೂರಶಿಕ್ಷಣದಲ್ಲಿ ಕಲಿತಿದ್ದೇನೆ. ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ (2009) ಉತ್ತೀರ್ಣನಾಗಿದ್ದು, ಇನ್ನೂ ಹೆಚ್ಚಿನ ಅಂಕ ಪಡೆಯುವ ಆಸಕ್ತಿ ಹೊಂದಿದ್ದೇನೆ. ಈಗ ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆ ಬರೆಯಲು ಸಾಧ್ಯವಿದೆಯೇ?

ನಮಗಿರುವ ಮಾಹಿತಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೊದಲ ಬಾರಿ ಬರೆದ ಎರಡು ವರ್ಷಗಳ ಒಳಗೆ ಮರು ಪರೀಕ್ಷೆಯನ್ನು ಬರೆಯಬಹುದು. ಖಚಿತವಾದ ಮಾಹಿತಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಸಂಪರ್ಕಿಸಿ.

Q15. ನಾನು ಬಿಕಾಂ ಮುಗಿಸಿ ಬಿ.ಇಡಿ ಮಾಡಬೇಕು ಅಂತ ಇದ್ದೀನಿ. ಆದರೆ, ನನ್ನ ಇಷ್ಟದ ವಿಷಯ ಸಮಾಜ ವಿಜ್ಞಾನ. ಇಲ್ಲಿಯವರೆಗೆ ಅಪ್ಪ ಅಮ್ಮ ಹೇಳಿದ್ದನ್ನು ಓದಿದ್ದೇನೆ. ಇನ್ನು ಮುಂದೆ ನನ್ನ ಇಷ್ಟದ ವಿಷಯ ತೆಗೆದುಕೊಂಡು, ಅದರಲ್ಲಿ ಮುಂದುವರಿಯುವುದು ಹೇಗೆ ಎಂದು ಹೇಳಬಹುದಾ ಸರ್.

ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು. ನಂತರ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.

ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q16. ಸರ್, ನಾನು ಎಂಜಿನಿಯರಿಂಗ್ (ಕಂಪ್ಯೂಟರ್ ವಿಜ್ಞಾನ) ಮಾಡಬೇಕು ಅಂದುಕೊಡಿದ್ದೇನೆ. ಇದರ ಜೊತೆಗೆ ಯಾವುದಾದರೂ ಪೂರಕ ಕೋರ್ಸ್ ಇದೆಯೇ ?

ಕಂಪ್ಯೂಟರ್ ವಿಜ್ಞಾನ ವಿಸ್ತಾರವಾದ ಕ್ಶೇತ್ರ. ಉದಾಹರಣೆಗೆ, ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪ್ರೋಗ್ರಾಮಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ನೆಟ್‌ವರ್ಕಿಂಗ್, ಗೇಮ್ಸ್, ಗ್ರಾಫಿಕ್ಸ್ ಇತ್ಯಾದಿ ವಿಭಾಗಗಳಿವೆ.

ಬಿಇ/ಬಿಟೆಕ್ ಜೊತೆಗೆ ಕೌಶಲಾಭಿವೃದ್ಧಿಗಾಗಿ, ನಿಮ್ಮ ಆಸಕ್ತಿಯ ಅನುಸಾರ ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲಿ ಅರೆಕಾಲಿಕ ಕೋರ್ಸ್ ಮಾಡುವುದು ಒಳ್ಳೆಯದು. ನಂತರ ಹೆಚ್ಚಿನ ತಜ್ಞತೆಗಾಗಿ, ಎಂಇ/ಎಂಟೆಕ್ ಕೋರ್ಸ್ ಮಾಡಬಹುದು.

Q17. ಸರ್, ನನ್ನ ಪ್ರೌಢಶಾಲೆಯ ದಾಖಲೆಗಳಲ್ಲಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂದಿದೆ. ಆದರೆ, ದಾಖಲಾತಿ ದಿನಾಂಕ ಮತ್ತು ಶಾಲೆ ಬಿಟ್ಟ ದಿನಾಂಕದ ವರ್ಷ 2011 ಮತ್ತು 2014ರ ಬದಲು, 2011 ಎಂದು ಮಾತ್ರ ನಮೂದಿಸಲಾಗಿದೆ. ಸೆಪ್ಟೆಂಬರ್ 23ರಂದು ನನಗೆ ಎಸ್‌ಡಿಎ ದಾಖಲಾತಿ ಪರಿಶೀಲನೆ ಇದೆ. ಇದರಿಂದ ತೊಂದರೆಯಾಗುತ್ತದೆಯೆ? ಸರಿಪಡಿಸುವುದು ಹೇಗೆ? ದಯವಿಟ್ಟು ಬೇಗ ತಿಳಿಸಿ.

ನಮ್ಮ ಅಭಿಪ್ರಾಯದಂತೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಸರಿಯಾದ ಮಾಹಿತಿಯಿದ್ದರೆ ದಾಖಲಾತಿ ಪರಿಶೀಲನೆಯಲ್ಲಿ ತೊಂದರೆಯಾಗಲಾರದು. ಈಗ ಸಮಯದ ಅಭಾವವಿರುವುದರಿಂದ, ಎಸ್‌ಡಿಎ ಪ್ರಕ್ರಿಯೆಯ ನಂತರ ಅಗತ್ಯವೆನಿಸಿದರೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಸಂಪರ್ಕಿಸಿ.

Q18. ಸರ್. ನಾನು ಮೊದಲ ಪಿಯುಸಿ (ಕಾಮರ್ಸ್) ಓದುತ್ತಿದ್ದೇನೆ. ನನಗೆ ಶ್ರವಣ ದೋಷವಿದೆ. ನಮಗೆ ಯಾವ ಕೆಲಸಗಳು ಸಿಗಬಹುದು? ದಯವಿಟ್ಟು ಹೇಳಿ ಸರ್.

ನಿಮಗೆ ಯಾವ ಮಟ್ಟದ ಶ್ರವಣ ದೋಷಯಿದೆಯೆಂದು ನೀವು ತಿಳಿಸಿಲ್ಲವಾದರೂ ನಿರಾಶೆಯಿಂದ ನಿಮ್ಮ ಭವಿಷ್ಯದ ಕನಸುಗಳ ಬಗ್ಗೆ ರಾಜಿಯಾಗದಿರಿ. ಗಂಭೀರವಾದ ಶ್ರವಣ ದೋಷವಿದ್ದರೂ ಸಹ ಯುಪಿಎಸ್‌ಸಿ ಅಂತಹ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಐಎಎಸ್ ಹುದ್ದೆಯನ್ನು ಗಳಿಸಿ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳುಂಟು. ಹಾಗೂ, ಐಎಎಸ್ ಸೇರಿದಂತೆ ಸರ್ಕಾರದ ಅನೇಕ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಕಲ ಚೇತನ ಅಭ್ಯರ್ಥಿಗಳಿಗೆ ಮೀಸಲಾತಿಯೂ ಇದೆ. ಇದಲ್ಲದೆ, ಖಾಸಗಿ ಕ್ಷೇತ್ರದ ಉತ್ಪಾದನೆ, ರೀಟೇಲ್, ಆರೋಗ್ಯ, ಮನರಂಜನೆ, ಶಿಕ್ಷಣ, ಹಣಕಾಸು ಮುಂತಾದ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳಿವೆ. ಆದ್ದರಿಂದ, ನಿಮಗೆ ಸ್ವಾಭಾವಿಕ ಒಲವು ಮತ್ತು ಆಸಕ್ತಿಯಿರುವ ಕ್ಷೇತ್ರವನ್ನು ಗುರುತಿಸಿ, ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಗಳಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಸೂಕ್ತವಾದ ಚಿಕಿತ್ಸೆಯಿಂದ ಶ್ರವಣ ದೋಷದ ವ್ಯಾಪ್ತಿ ಮತ್ತು ತೀವ್ರತೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿ ಮತ್ತು ಈ ಲೇಖನವನ್ನು ಗಮನಿಸಿ:

https://timesofindia.indiatimes.com/blogs/staying-alive/maniram-sharma-a-profile-in/

ಸರ್, ನಾನು ರಸಾಯನ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕು ಎಂದುಕೊAಡಿದ್ದೇನೆ. ನನಗೆ ರಸಾಯನ ವಿಜ್ಞಾನಿಯಾಗಿ ಕೆಲಸ ಮಾಡುವ ಆಸೆ ಇದೆ. ಆದರೆ, ರಸಾಯನ ವಿಜ್ಞಾನದಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ ಇದೆ. ದಯವಿಟ್ಟು ಮಾರ್ಗದರ್ಶನ ಮಾಡಿ.

ರಸಾಯನಿಕ ವಿಜ್ಞಾನಿಯಾಗಬೇಕಾದರೆ ಎಂ.ಎಸ್ಸಿ ನಂತರ ಪಿಎಚ್‌ಡಿ ಮಾಡುವುದು ಒಳ್ಳೆಯದು. ನಿಮ್ಮ ಆಸಕ್ತಿ, ಒಲವಿನಂತೆ ವೃತ್ತಿಯೋಜನೆಯನ್ನು ಮಾಡಿ ಎಂ.ಎಸ್ಸಿ ಮಾಡಿದರೆ ಸಾಕೇ ಅಥವಾ ಪಿಎಚ್‌ಡಿ ಮಾಡಬೇಕೇ ಎಂದು ನಿರ್ಧರಿಸಿ. ರಸಾಯನ ಶಾಸ್ತçದ ಪ್ರಮುಖ ಶಾಖೆಗಳೆಂದರೆ ಆರ್ಗ್ಯಾನಿಕ್, ಇನ್‌ಆರ್ಗ್ಯಾನಿಕ್, ಅನಲಿಟಿಕಲ್, ಮೆಡಿಸಿನಲ್, ಮಾಲಿಕ್ಯುಲರ್ ಮತ್ತು ಬಯೋ ಕೆಮಿಸ್ಟಿç. ಯಾವ ವಿಷಯದಲ್ಲಿ ವಿಜ್ಞಾನಿಯಾಗಬೇಕು ಎಂದು ಈಗಲೇ ನಿರ್ಧರಿಸಿದರೆ ಎಂ.ಎಸ್ಸಿ ನಂತರ ಪಿಎಚ್‌ಡಿ ಮಾಡಲು ಅನುಕೂಲ. ಪಿಎಚ್‌ಡಿ ಸಂಶೋಧನೆ ಕುರಿತು ಸಾಕಷ್ಟು ಸಂಪನ್ಮೂಲಗಳು ಇದ್ದರೂ ಸಹ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು.

ಎಂ.ಎಸ್ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ರಾಸಾಯನಿಕ ಪದಾರ್ಥಗಳು, ಫಾರ್ಮಾ, ರಸಗೊಬ್ಬರ, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ, ಆಹಾರ ಮತ್ತು ಪಾನೀಯ ಸಂಸ್ಕರಣೆ, ಸಂಶೋಧನೆ, ಪ್ರಯೋಗಾಲಯಗಳು, ವಿದ್ಯಾಸಂಸ್ಥೆಗಳು ಸೇರಿದಂತೆ ಅನೇಕ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q19. 10ನೇ ತರಗತಿಯನ್ನು ಓದುತ್ತಿದ್ದೇನೆ. ನಾನು ರಾಜ್ಯ ಪಠ್ಯಕ್ರಮ ಅಥವಾ ಐಸಿಎಸ್‌ಇ ಪಠ್ಯಕ್ರಮ ಮುಂದುವರಿಸಬೇಕೆ? ಈಗಿನಿಂದಲೇ ಸಿಎ ಮಾಡಲು ಹೇಗೆ ತಯಾರಿ ನಡೆಸುವುದು? ಪೂರಕ ಕೋರ್ಸ್ಗಳನ್ನು ಮಾಡಿಕೊಳ್ಳಬಹುದೇ?

ಚಾರ್ಟೆಡ್ ಅಕೌಂಟೆAಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಐದು ಪ್ರಮುಖ ಹಂತಗಳಿವೆ.

  • ಯಾವುದೇ ಪಠ್ಯಕ್ರಮದ 10ನೇ ತರಗತಿಯ ನಂತರ, ಸಿಎ ಫೌಂಡೇಷನ್ ಕೋರ್ಸ್ಗೆ ಇನ್‌ಸ್ಟಿಟ್ಯೂಟ್ ಅಫ್ ಚಾರ್ಟೆಡ್ ಅಕೌಂಟೆAಟ್ಸ್ ಅಫ್ ಇಂಡಿಯ (ಐಸಿಎಐ) ಅವರಲ್ಲಿ ನೋಂದಾಯಿಸಿಕೊAಡು, ಫೌಂಡೇಷನ್ ಕೋರ್ಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು. ಈ ಪರೀಕ್ಷೆಗೆ ಪಿಯುಸಿ ನಂತರ ಅರ್ಹತೆ ಸಿಗುತ್ತದೆ. ಈಗಲೇ ನೋಂದಾಯಿಸುವುದರಿAದ, ಪರೀಕ್ಷೆಯ ತಯಾರಿಗೆ ಹೆಚ್ಚಿನ ಸಮಯ ಸಿಗುತ್ತದೆ. ಫೌಂಡೇಷನ್ ಕೋರ್ಸ್ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ ಶೇ 40 ಅಂಕಗಳು ಗಳಿಸಿರಬೇಕು.
  • ಫೌಂಡೇಷನ್ ಕೋರ್ಸ್ ನಂತರ ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್ಗೆ ನೋಂದಾಯಿಸಬೇಕು.
  • ಮಧ್ಯಂತರ ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆAಟ್ ಅವರಲ್ಲಿ ಸೇರಬೇಕು.
  • ಕನಿಷ್ಠ 2 ಳಿ ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
  • ಸಿಎ ವೃತ್ತಿಗೆ ಪೂರಕವಾಗುವ ಅನೇಕ ಕೋರ್ಸ್ಗಳಿವೆ. ಈ ಸಾಧ್ಯತೆಗಳನ್ನು ಇಂಟರ್‌ಮೀಡಿಯೆಟ್ ಕೋರ್ಸ್ ನಂತರ ಪರಿಶೀಲಿಸುವುದು ಸೂಕ್ತ. ಅಂತಿಮ ಪರೀಕ್ಷೆಗೆ ಮುಂಚೆ, ಐಸಿಎಐ ನಡೆಸುವ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಬೇಕು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

ನಾನು ಬಿಎ ಪದವಿಯನ್ನು (ಎಚ್‌ಇಪಿ) ಮುಗಿಸಿದ್ದೇನೆ. ಬಿ.ಇಡಿಯಲ್ಲಿ ಐಚ್ಛಿಕ ಇಂಗ್ಲಿಷ್ ತೆಗೆದುಕೊಳ್ಳಬಹುದೇ? ಈ ರೀತಿ ಆಯ್ಕೆ ಇದೆಯೇ ತಿಳಿಸಿ, ಸರ್.

ಸಾಮಾನ್ಯವಾಗಿ ಬಿ.ಇಡಿ ಕೋರ್ಸಿನಲ್ಲಿ ಕಡ್ಡಾಯವಾದ ವಿಷಯಗಳ ಜೊತೆಗೆ ಪದವಿ ಕೋರ್ಸಿನಲ್ಲಿ ಓದಿರುವ ಎರಡು ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳಬಹುದು. ಅದರೆ, ಆರಿಸಿಕೊಳ್ಳುವ ಐಚ್ಛಿಕ ವಿಷಯಗಳಲ್ಲಿ ಭೋಧಿಸುವ ಆಸಕ್ತಿ ಮತ್ತು ಪರಿಣತಿಯಿರಬೇಕು. ಉದಾಹರಣೆಗೆ, ನಿಮಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿಯಿದ್ದು ಬಿ.ಇಡಿ ನಂತರ ಶಾಲೆಗಳಲ್ಲಿ ಇಂಗ್ಲಿಷ್ ಭೋಧಿಸುವ ಆಸಕಿಯಿದ್ದರೆ, ಇಂಗ್ಲಿಷ್ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಬಹುದು. ಜೊತೆಗೆ, ನಿಮಗೆ ಭೋಧಿಸಲು ಆಸಕ್ತಿ ಮತ್ತು ಪರಿಣತಿಯಿರುವ ಇನ್ನೊಂದು (ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç) ವಿಷಯವನ್ನು ಆರಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿ, ಪಠ್ಯಕ್ರಮ ಮತ್ತು ನಿಯಮಾವಳಿಗಳ ವಿವರಗಳಿಗೆ ನೀವು ಓದಲು ಬಯಸುವ ವಿಶ್ವವಿದ್ಯಾಲಯದ ಜಾಲತಾಣವನ್ನು ಗಮನಿಸಿ.

ನಾನು ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ಬಿಎ ಪದವಿಯನ್ನು ಪಡೆದಿದ್ದು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯಿರುವುದೇ?

ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು, ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ನೀವು ಮಾಡಿರುವ ಪದವಿ ಕೋರ್ಸಿಗೆ ಮಾನ್ಯತೆ ಇದೆಯೇ ಎಂದು ಈ ಲಿಂಕ್ ಮುಖಾಂತರ ಪರಿಶೀಲಿಸಿ: https://deb.ugc.ac.in/