ಪಿ.ಯು.ಸಿ. ನಂತರ ಕೋರ್ಸ್: ನಿರ್ಧಾರದಲ್ಲಿ ಪೋಷಕರ ಪಾತ್ರ

ಪಿ.ಯು.ಸಿ. ನಂತರ ಮುಂದೇನು? ನಿರ್ಣಾಯಕ ಹಂತದ ಈ ಪ್ರಶ್ನೆಯ ಕುರಿತು ಎಲ್ಲಾ ವಿಧ್ಯಾರ್ಥಿಗಳಿಗೂ ಪೋಷಕರಿಗೂ ನಿರಂತರವಾಗಿ ಆಗುವ ಚರ್ಚೆ, ವಾದ ಸರ್ವೇಸಾಮಾನ್ಯ. ಇದರ ಜೊತೆಗೆ ಕೊರೊನಾ ವೈರಸ್ ವ್ಯಾಪಕವಾಗಿ ಇನ್ನೂ ಹರಡುತ್ತಿದ್ದು, ಸಧ್ಯಕ್ಕೆ ಲಸಿಕೆ ಸಿಗುವ ಸಾಧ್ಯತೆಗಳಿಲ್ಲ. ಹಾಗಾಗಿ, ಈ ವರ್ಷ ಕ್ರಮಬದ್ಧವಾದ ತರಗತಿಗಳು ಶುರುವಾಗುವ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಇಂದಿನ ಅನಿಶ್ಚಿತ ವಾತಾವರಣದಲ್ಲಿ, ಪಿ.ಯು.ಸಿ. ಮುಗಿಸಿರುವ ವಿಧ್ಯಾರ್ಥಿಗಳಿಗೂ ಮತ್ತು ಪೋಷಕರಿಗೂ ಆತಂಕ, ಒತ್ತಡಗಳಿದ್ದು ಮುಂದಿನ ಕೋರ್ಸ್ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಿದೆ.

ಈ ಸಮಯದಲ್ಲಿ ಪೋಷಕರ ಪಾತ್ರ ಹಿಂದೆಂದಿಗಿಂತಲೂ ಪ್ರಮುಖವಾಗಿದ್ದು, ಆ ಜವಾಬ್ದಾರಿಗಳ ಸಮರ್ಪಕ ನಿರ್ವಹಣೆ ಅತ್ಯಗತ್ಯ.

  • ಮಕ್ಕಳ ಆಸೆ, ಆಕಾಂಕ್ಷೆಗಳನ್ನ ನೀವೇ ತಿಳಿದುಕೊಳ್ಳೋ ಪ್ರಯತ್ನ ಮಾಡಿ. ಪ್ರೌಡಾವಸ್ಥೆಗೆ ಬಂದಿರುವ ಮಕ್ಕಳಲ್ಲಿ   ಸ್ವತಂತ್ರವಾಗಿ ಯೋಚಿಸೋ ಶಕ್ತಿಯಿರುತ್ತದೆ. ಅವರ ಭಾವನೆಗಳಿಗೆ, ಸಲಹೆಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಕೊಡಿ. ಅವುಗಳು ಸರಿ ಇಲ್ಲದಿದ್ದರೆ, ತಿಳಿ ಹೇಳಿ. ಮುಖ್ಯವಾಗಿ, ಮನೆಯಲ್ಲಿ ಮುಕ್ತವಾಗಿ ಚರ್ಚೆ ಆಗುವ ವಾತಾವರಣವನ್ನ ನೀವೇ ಸೃಷ್ಠಿ ಮಾಡಬೇಕು.
  • ನಿಮ್ಮ ಮಕ್ಕಳ ಸಾಮಥ್ರ್ಯಗಳೇನು? ಇವುಗಳನ್ನ ನೀವು ಗುರುತಿಸಿ. ಯಾವ ವೃತ್ತಿ ಜೀವನ ಅವರಿಗೆ ಸೂಕ್ತ ಅನ್ನೋ ಕಲ್ಪನೆ ನಿಮಗಿರಬೇಕು. ಹೀಗೆ ಗುರುತಿಸೋದು ಕಷ್ಟ ಎನಿಸಿದರೆ ಆಪ್ಟಿಟ್ಯೂಡ್ ಟೆಸ್ಟ್ ಮಾಡಿಸಿ, ಮಾರ್ಗದರ್ಶಕರ ಅಭಿಪ್ರಾಯಗಳನ್ನು ತಿಳಿಯಿರಿ. ಮಕ್ಕಳ ವೃತ್ತಿ ಜೀವನವನ್ನ ಮುಂದಿಟ್ಟುಕೊಂಡು, ಅವರ ಮುಂದಿನ ವಿದ್ಯಾಭ್ಯಾಸದ ಅಂದರೆ ವೃತ್ತಿಪರ/ಇನ್ನಿತರ ಕೋರ್ಸ್‍ಗಳ ಬಗ್ಗೆ ಯೋಚಿಸಿ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್‍ಗಳಾಚೆ ಇರುವ   ಅನೇಕ  ಅವಕಾಶಗಳ ಬಗ್ಗೆ ಗಮನವಿರಲಿ.
  • ಮಕ್ಕಳ ಭವಿಷ್ಯದ ಬಗ್ಗೆ ಪೆÇೀಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಇದರ ಪರಿಣಾಮವಾಗಿ, ಕೆಲವೊಮ್ಮೆ ಪೋಷಕರು ತಾವು ಮಾಡಬೇಕೆಂದುಕೊಂಡಿದ್ದ ಕೋರ್ಸ್ ಅಥವಾ ಅವರಿಗೆ ಸರಿ ಎನಿಸಿದ ಕೋರ್ಸ್ ಅಥವಾ ವೃತ್ತಿಯನ್ನ ಮಕ್ಕಳ ಮೇಲೆ ಹೇರುವ ಸಂದರ್ಭಗಳನ್ನ ನಾವು ನೋಡಿದ್ದೇವೆ. ಇಂತಹ ನಿರ್ಧಾರಗಳು ಸರಿಯಾಗಿದ್ದು ಮಕ್ಕಳು  ವಿದ್ಯಾಭ್ಯಾಸ ಮುಗಿಸಿ, ವೃತ್ತಿಯ ಯಶಸ್ಸನ್ನ ಗಳಿಸಿರೋ ಉದಾಹರಣೆಗಳು ಇರುವುದು ನಿಜ; ಆದರೆ, ಪೋಷಕರ ಒತ್ತಡ ಹೆಚ್ಚಾಗಿ, ಆಸಕ್ತಿಯಿಲ್ಲದ ಕೋರ್ಸ್‍ಗೆ ಸೇರಿ, ವೈಫಲ್ಯತೆಗಳಿಂದ ಖಿನ್ನತೆಗೊಳಗಾಗಿ ಮಕ್ಕಳ ಭವಿಷ್ಯ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವುದು ಸಹ ಅಷ್ಟೇ ನಿಜ. ಆದ್ದರಿಂದ, ನೀವು ಮಾಡಬೇಕೆಂದುಕೊಂಡಿದ್ದ ಕೋರ್ಸ್ ಅಥವಾ ವೃತ್ತಿಯನ್ನ ಮಕ್ಕಳ ಮೇಲೆ ಹೇರಬೇಡಿ. ತಮ್ಮ ಭವಿಷ್ಯವನ್ನ ರೂಪಿಸೋ ಸ್ವಾತಂತ್ರ ಮಕ್ಕಳಿಗೇ ಇರಲಿ; ಆದರೆ, ನಿಮ್ಮ ಮಾರ್ಗದರ್ಶನ ಇರಲಿ.
  • ಇಂದಿನ ಅನಿಶ್ಚಿತ ವಾತಾವರಣದಲ್ಲ ಕೆಲವು ವಿಧ್ಯಾರ್ಥಿಗಳು ತಮ್ಮ ಪೋಷಕರ ಬೆಂಬಲದಿಂದ ವೃತ್ತಿಪರ ಕೋರ್ಸ್‍ಗಳಿಗೆ ಈ ವರ್ಷ ಅಲ್ಪವಿರಾಮ ನೀಡಿ, ಮನೆಯಿಂದಲೇ ಮಾಡಬಹುದಾದ ವೃತ್ತಿ ಸಂಬಂಧಿತ ಅರೆಕಾಲೀನ ಕೋರ್ಸ್/ಕೆಲಸಗಳನ್ನು ಮಾಡಲು ನಿರ್ಧರಿಸುತ್ತಿರುವುದು ಗಮನಾರ್ಹ.

ನಮ್ಮ ದೇಶದ ನಿಜವಾದ ಶಕ್ತಿಯೆಂದರೆ ನಮ್ಮ ಯುವಜನತೆ; ಅವರಿಂದಲೇ ದೇಶದ ಪ್ರಗತಿ ಸಾಧ್ಯ. ಹಾಗಾಗಿ, ಅವರ ಮುಂದಿನ ಬದುಕಿಗೊಂದು ಸ್ಪಷ್ಟವಾದ,  ನಿಖರವಾದ, ಸಾಧಿಸಬಹುದಾದ ಮತ್ತು ಅಳೆಯಬಹುದಾದ ಗುರಿಯಿರಬೇಕು. ಆ ಗುರಿಗಳು ಅವರನ್ನು ಸದಾಕಾಲ ಪ್ರೇರೇಪಿಸುವಂತಿರಬೇಕು.  ಆ ಗುರಿಗಳನ್ನು ನಿರ್ಧರಿಸಿ, ಅದರಂತೆ ಅವರ ಮುಂದಿನ ವಿದ್ಯಾಭ್ಯಾಸ ಸಾಗಲು ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನವಿರಲಿ.

Download PDF Document

               

About author View all posts Author website

V Pradeep Kumar

Leave a Reply

Your email address will not be published. Required fields are marked *